ಆ್ಯಪ್ನಗರ

'ಏರೋ ಇಂಡಿಯಾ ಶೋ'ಗೆ ರಾಜ್ಯದಿಂದ ಪೂರ್ಣ ಸಹಕಾರ: ಸಿಎಂ ಯಡಿಯೂರಪ್ಪ ಅಭಯ

13 ನೇ ಆವೃತ್ತಿಯ 'ಏರೋ ಇಂಡಿಯಾ ಶೋ'ಗೆ ಶುಕ್ರವಾರ ಸಭೆ ನಡೆಸಲಾಗಿದೆ. ಈ ಅವಕಾಶವನ್ನು ಬೆಂಗಳೂರಿಗೆ ಕಲ್ಪಿಸಿರುವುದಕ್ಕೆ ಕೇಂದ್ರ ಸರಕಾರಕ್ಕೆ ಧನ್ಯವಾದ. ಏರ್‌ ಶೋಗೆ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

Vijaya Karnataka Web 15 Jan 2021, 6:47 pm
ಬೆಂಗಳೂರು: 13 ನೇ ಆವೃತ್ತಿಯ 'ಏರೋ ಇಂಡಿಯಾ ಶೋ'ಗೆ ಶುಕ್ರವಾರ ಸಭೆ ನಡೆಸಲಾಗಿದೆ. ಈ ಅವಕಾಶವನ್ನು ಬೆಂಗಳೂರಿಗೆ ಕಲ್ಪಿಸಿರುವುದಕ್ಕೆ ಕೇಂದ್ರ ಸರಕಾರಕ್ಕೆ ಧನ್ಯವಾದ. ಏರ್‌ ಶೋಗೆ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.
Vijaya Karnataka Web BS Yediyurappa
Karnataka CM BS Yediyurappa


ನಗರದಲ್ಲಿ ನಡೆದ ಏರೋ ಇಂಡಿಯಾ ಶೋ ಅಪೆಕ್ಸ್ ಸಮಿತಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದರು. 1996 ರಿಂದ ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತಿದೆ. ಈ ಏರ್ ಇಂಡಿಯಾ ಶೋಗೆ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಈ ಬಾರಿಯೂ ಯಶಸ್ವಿಯಾಗಲಿದೆ 'ಏರೋ ಇಂಡಿಯಾ ಶೋ': ರಾಜನಾಥ್ ಸಿಂಗ್ ವಿಶ್ವಾಸ

ಕೊರೋನಾ ಸಂದರ್ಭದಲ್ಲಿ ಮುನ್ನಚ್ವರಿಕೆ ಕ್ರಮಗಳೊಂದಿಗೆ ಶೋ ನಡೆಸುತ್ತೇವೆ. ವೈಮಾನಿಕ ಕ್ಷೇತ್ರ ಮತ್ತು ರಕ್ಷಣಾ ವಲಯಕ್ಕೆ ಕರ್ನಾಟಕ ಹಾಗೂ ಬೆಂಗಳೂರಿನ ಕೊಡುಗೆ ಮಹತ್ತರ ವಾದದ್ದು. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚು ತಪ್ಪದೆ ಪಾಲಿಸಲು ಎಲ್ಲಾ ರೀತಿಯ ಕ್ರಮವನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ದೇಶ ವಿದೇಶಗಳಿಂದ ಏರ್ ಶೋಗೆ ಸಾಕಷ್ಟು ಅತಿಥಿಗಳು ಆಗಮಿಸುತ್ತಾರೆ. ಅವರಿಗೆ ಎಲ್ಲ ರೀತಿಯ ಆತಿಥ್ಯ ಮತ್ತು ಸುರಕ್ಷತೆ ಒದಗಿಸಲು ಸಜ್ಜಾಗಿದ್ದೇವೆ. ಜಗತ್ತಿನ ಏರೋ ಇಂಡಿಯಾ ಪ್ರದರ್ಶನಗಳಲ್ಲಿ ಬೆಂಗಳೂರಿನ ಏರ್ ಶೊ ಗುರುತರ ಸ್ಥಾನ ಪಡೆದುಕೊಂಡಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಈ ಬಾರಿಯ ಏರ್ ಶೋಗೆ 30 ಕೋಟಿ ರೂಪಾಯಿ ಹಣ ಖರ್ಚು ಮಾಡುತ್ತಿದೆ ಎಂದು ತಿಳಿಸಿದರು.

ಎಚ್ಎಎಲ್ ನಿರ್ಮಿತ 83 ತೇಜಸ್ ಲಘು ಯುದ್ಧ ವಿಮಾನ ಖರೀದಿಗೆ ಕೇಂದ್ರ ಸಂಪುಟ ಒಪ್ಪಿಗೆ!

ಮುಂಬರುವ ಏರೋ ಇಂಡಿಯಾ ಶೋಗಳಿಗೆ ಕೂಡ ರಾಜ್ಯ ಸರ್ಕಾರ ಸಹಕಾರ ನೀಡಲಿದೆ ಎಂದು ಕೇಂದ್ರ ರಕ್ಷಣಾ ಸಚಿವರಿಗೆ ಅಭಯ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ