ಆ್ಯಪ್ನಗರ

ದಿಲ್ಲಿಯಿಂದ ಖರೀದಿಸಿದ್ದ 15 ಸೆಕೆಂಡ್‌ ಹ್ಯಾಂಡ್‌ ವೆಂಟಿಲೇಟರ್‌ ವಾಪಸ್‌

ಸರಕಾರ ಖರೀದಿಸಿದ ಪಿಪಿಇ ಕಿಟ್‌‌ಗಳ ಗುಣಮಟ್ಟ ಕಳಪೆಯಾಗಿರುವುದು ಈಗಾಗಲೇ ಬಹಿರಂಗವಾಗಿದೆ. ಇದೇ ರೀತಿ ರಾಜ್ಯಕ್ಕಾಗಿ ಖರೀದಿಯಾದ 15 ವೆಂಟಿಲೇಟರ್‌ಗಳು ಕಳಪೆಯಾಗಿದ್ದು, ವಾಪಸ್‌ ಪಡೆಯುವಂತೆ ಪೂರೈಸಿದ ಕಂಪನಿಗೆ ಸೂಚಿಸಲಾಗಿದೆ.

Vijaya Karnataka Web 4 May 2020, 9:07 pm
ಬೆಂಗಳೂರು: ಸರಕಾರ ಖರೀದಿಸಿದ ಪಿಪಿಇ ಕಿಟ್‌ಗಳ ಗುಣಮಟ್ಟ ಕಳಪೆಯಾಗಿರುವುದು ಈಗಾಗಲೇ ಬಹಿರಂಗವಾಗಿದೆ. ಇದೇ ರೀತಿ ರಾಜ್ಯಕ್ಕಾಗಿ ಖರೀದಿಯಾದ 15 ವೆಂಟಿಲೇಟರ್‌ಗಳು ಕಳಪೆ ಎಂಬ ಮಾಹಿತಿ ತಿಳಿದುಬಂದಿದ್ದು, ವಾಪಸ್‌ ಪಡೆಯುವಂತೆ ಪೂರೈಸಿದ ಕಂಪನಿಗೆ ಸೂಚಿಸಲಾಗಿದೆ.
Vijaya Karnataka Web Ventilator


ಇತ್ತೀಚೆಗೆ ಕೇಂದ್ರ ಸರಕಾರಕ್ಕೆ ಚೀನಾದಿಂದ ಪೂರೈಕೆಯಾದ ಪಿಪಿಇ ಕಿಟ್‌ಗಳನ್ನು ಗುಣಮಟ್ಟ ಪರೀಕ್ಷೆಗೆ ಕಳುಹಿಸಿದಾಗ ಕಳಪೆಯಾಗಿರುವುದು ತಿಳಿದುಬಂದಿತ್ತು. ರಾಜ್ಯಕ್ಕೆ ಪೂರೈಕೆಯಾದ ವೆಂಟಿಲೇಟರ್‌ಗಳಲ್ಲಿಕೆಲವು ಈಗಾಗಲೇ ಬಳಕೆಯಾಗಿವೆ. ಮತ್ತೆ ಕೆಲವು ವೆಂಟಿಲೇಟರ್‌ಗಳ ಮೇಲೆ ಪ್ರಮಾಣೀಕೃತಗೊಳಿಸುವ ಸಂಸ್ಥೆಗಳ ಗುರುತು ಇಲ್ಲ. ಎಲ್ಲಿತಯಾರಿಸಲಾಗಿದೆ ಎಂಬ ಮಾಹಿತಿಯೂ ಉಲ್ಲೇಖವಾಗಿಲ್ಲ.

ವಂಚಿಸಿದ ಕಂಪನಿ
ರಾಜ್ಯ ಡ್ರಗ್‌ ಲಾಜಿಸ್ಟಿಕ್ಸ್ ಆ್ಯಂಡ್‌ ವೇರ್‌ ‍ಹೌಸಿಂಗ್‌ ಸೊಸೈಟಿ (ಕೆಎಸ್‌‍ಡಿಎಲ್‌‍ಡಬ್‌ಲ್ಯುಎಸ್‌)ಯು ದಿಲ್ಲಿಯ ಆರ್‌.ಕೆ.ಮೆಡಿಕಲ್‌ ಸಲ್ಯೂಶಸ್ಸ್‌ ಕಂಪನಿಯಿಂದ 15 ವೆಂಟಿಲೇಟರ್‌ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ, ಕಂಪನಿಯು ಏ.14 ರಂದು ಡ್ರ್ಯಾಗರ್‌ ಹೆಸರಿನ 15 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿತ್ತು. ರಾಜ್ಯಕ್ಕೆ ಬಂದಿದ್ದ ಈ ಸರಕನ್ನು ತೆರೆಯುವಾಗ ಪರಿಶೀಲಿಸಲು ತಂತ್ರಜ್ಞರನ್ನು ಕಳುಹಿಸಿಕೊಡುವಂತೆ ಕಂಪನಿಗೆ ಹೇಳಲಾಗಿತ್ತು. ಕಂಪನಿಯು ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ.

ಮತ್ತೆ ಗರಿಗೆದರಿದ ಕಡಲ ನಗರಿ: ರಸ್ತೆಗಿಳಿದ ಜನಮಂದೆ, ಆಟೋ, ಖಾಸಗಿ ವಾಹನಗಳು

ನಂತರ ಸೊಸೈಟಿಯ ತಜ್ಞರಿಂದಲೇ ಗುಣಮಟ್ಟ ಪರೀಕ್ಷೆ ಮಾಡಿಸಲಾಯಿತು. ಈ ವೇಳೆ ವೆಂಟಿಲೇಟರ್‌ಗಳ ಬಣ್ಣ ಬಯಲಾಗಿದೆ. ಈ ಕುರಿತು ಸೊಸೈಟಿಯ ಹೆಚ್ಚುವರಿ ನಿರ್ದೇಶಕರು ಕಂಪನಿಗೆ ಏ.28 ರಂದು ನೋಟಿಸ್‌ ಕಳುಹಿಸಿದ್ದು, ದೋಷಗಳನ್ನು ಅದರಲ್ಲಿಪಟ್ಟಿ ಮಾಡಲಾಗಿದೆ. ಎಲ್ಲವೆಂಟಿಲೇಟರ್‌ಗಳನ್ನು ಕಂಪನಿಯು ತನ್ನ ಖರ್ಚಿನಲ್ಲಿವಾಪಸ್‌ ಕೊಂಡೊಯ್ಯಬೇಕು ಎಂದು ನೋಟಿಸ್‌‍ನಲ್ಲಿತಿಳಿಸಲಾಗಿದೆ. ಇದಕ್ಕೆ ಇನ್ನೂ ಹಣ ಪಾವತಿ ಮಾಡಿಲ್ಲಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದ್ಯ ಪ್ರಿಯರಿಗೆ ಬೆಳಗ್ಗೆ ಕಿಕ್‌, ಸಂಜೆ ಶಾಕ್‌! 6% ಬೆಲೆ ಏರಿಕೆ!

ದೋಷಗಳು
  • ವೆಂಟಿಲೇಟರ್‌ನಲ್ಲಿಪ್ರಮಾಣೀಕೃತ ಸಂಸ್ಥೆಗಳ ಮೊಹರು ಇಲ್ಲ.
  • ಮಾಡಲ್‌, ತಯಾರಿಯಾದ ದಿನ, ಸ್ಥಳದ ಮಾಹಿತಿ ಇಲ್ಲ
  • ಕೆಲ ವೆಂಟಿಲೇಟರ್‌ಗಳು ಬಳಕೆಯಾಗಿದ್ದು, ಹಳೆ ಸ್ಟಾಂಡ್‌ ಹೊಂದಿದೆ.
  • ಒಂದು ವೆಂಟಿಲೇಟರನ್ನು 46,583 ಗಂಟೆಗಳ ಕಾಲ ಬಳಸಲಾಗಿದೆ.
  • ವೆಂಟಿಲೇಟರ್‌ ಅನ್ನು ಕೆಲ ಮೋಡ್‌ ಗಳಲ್ಲಿ(ಆಯ್ಕೆ) ಇರಿಸಬೇಕಾಗುತ್ತದೆ. ಆದರೆ ಇಂತಹ ಆಯ್ಕೆಗಳೇ ಇಲ್ಲ.
41 ದಿನದ ಬಳಿಕ ಮತ್ತೆ ಮದ್ಯ ಮಾರಾಟ: ಮೊದಲ ದಿನದ ಕುಡುಕರ ವಿನೋದಗಳಿವು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ