ಆ್ಯಪ್ನಗರ

ವಿದೇಶಿ ವಿದ್ಯಾರ್ಥಿಗಳ ವೀಸಾ ಪರಿಶೀಲನೆ ಕಡ್ಡಾಯ: ಆದೇಶ ಪಾಲಿಸದಿದ್ದರೆ ಪ್ರಾಂಶುಪಾಲರ ವಿರುದ್ಧ ಕ್ರಮ!

ಅಕ್ರಮ ವಿದೇಶ ನಿವಾಸಿಗಳಿಗೆ ರಾಜ್ಯದಲ್ಲಿ ಕಾಲೇಜುಗಳು ಪರಿಶೀಲನೆ ಮಾಡದೆ ದಾಖಲಾತಿ ನೀಡುತ್ತಿರುವ ಆರೋಪ ಕೇಳಿಬಂದಿದೆ. ಇದನ್ನು ಕಾಲೇಜು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆದೇಶ ಪಾಲಿಸದಿದ್ದರೆ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

Vijaya Karnataka Web 26 Feb 2020, 11:42 am

ಹೈಲೈಟ್ಸ್‌:

  • ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ವಿದ್ಯಾರ್ಥಿಗಳು
  • ವಿದೇಶಿ ವಿದ್ಯಾರ್ಥಿಗಳ ಸಮಾಜ ವಿರೋಧಿ ಕೃತ್ಯಗಳ ಕಡಿವಾಣಕ್ಕೆ ಕಾಲೇಜು ಕ್ರಮ
  • ಕಂಪ್ಯೂಟರ್‌ ಹ್ಯಾಕಿಂಗ್‌, ಆನ್‌ಲೈನ್‌ ವಂಚನೆ, ಇತರೆ ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಭಾಗಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web foreign students
ಜಯಂತ್‌ ಗಂಗವಾಡಿ
ಬೆಂಗಳೂರು: ರಾಜ್ಯದ ಕೆಲವು ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಪಾಸ್‌ಪೋರ್ಟ್‌ ಮತ್ತು ವೀಸಾ ಅವಧಿ ಮುಗಿದಿರೂ ಅದನ್ನು ಪರಿಶೀಲಿಸದೆ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುತ್ತಿರುವುದು ಕಂಡು ಬಂದಿದೆ. ಇದನ್ನು ಕಾಲೇಜು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಇನ್ನು ಮುಂದೆ ಸರಕಾರಿ, ಅನುದಾನಿತ ಮತ್ತು ಖಾಸಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದೇಶಿ ವಿದ್ಯಾರ್ಥಿಗಳ ಪಾಸ್‌ಪೋರ್ಟ್‌ ಮತ್ತು ವೀಸಾವನ್ನು ಕಡ್ಡಾಯವಾಗಿ ಪರಿಶೀಲಿಸಿ ಕಾಲೇಜುಗಳಿಗೆ ಪ್ರವೇಶ ನೀಡುವಂತೆ ಪ್ರಾಂಶುಪಾಲರಿಗೆ ಸರಕಾರ ಆದೇಶಿಸಿದೆ. ವೀಸಾ, ಪಾಸ್‌ಪೋರ್ಟ್‌ ಅವಧಿ ಮುಗಿದಿರುವ ಕೆಲ ವಿದ್ಯಾರ್ಥಿಗಳು ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದಾರೆ ಎನ್ನಲಾಗಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಿಡಿಸಿದೆ ಎನ್ನಲಾಗಿದೆ.

ಏನಿದು ಸಂಗತಿ?
ಉನ್ನತ ಶಿಕ್ಷಣದಲ್ಲಿ ಬೆಂಗಳೂರು ನಗರ ‘ಶೈಕ್ಷಣಿಕ ಹಬ್‌’ ಎಂದೇ ಗುರುತಿಸಿಕೊಂಡಿದೆ. ಇಲ್ಲಿನ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ವರ್ಷ ಹೊರ ದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಅಡ್ಮಿಷನ್‌ ಪಡೆಯುತ್ತಾರೆ. ಮುಖ್ಯವಾಗಿ ಆಫ್ರಿಕಾ ದೇಶಗಳು, ನೇಪಾಳ, ಶ್ರೀಲಂಕಾ, ಕೊರಿಯಾ ಸೇರಿದಂತೆ ಇತರೆ ದೇಶಗಳಿಂದ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ.

ಸ್ಕಿಮ್ಮಿಂಗ್ ಯಂತ್ರ, ಕ್ಯಾಮೆರಾ ಕೈ ಚಳಕ..! ಎಟಿಎಂ ಕಾರ್ಡ್ ನಿಮ್ಮ ಬಳಿಯಲ್ಲೇ ಇದ್ರೂ ಹಣ ಡ್ರಾ..!

ಕೆಲವರು ಕೇವಲ ಮೂರ್ನಾಲು ತಿಂಗಳ ಅವಧಿಯ ವೀಸಾದ ಮೇಲೆ ಬಂದು, ಕಾಲೇಜುಗಳಿಗೆ ದಾಖಲಾಗಿ ವೀಸಾ ಅವಧಿ ಮುಗಿದರೂ ವಿದ್ಯಾಭ್ಯಾಸ ಮುಂದುವರಿಸಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಶಿಕ್ಷಣ ಸಂಸ್ಥೆಗಳು ಸಹ ವಿದೇಶಿ ವಿದ್ಯಾರ್ಥಿಗಳ ವೀಸಾ ಅವಧಿ ಮತ್ತು ಪಾಸ್‌ಪೋರ್ಟ್‌ಗಳನ್ನು ಸಮಗ್ರವಾಗಿ ಪರಿಶೀಲಿಸದೆ ಕಾಲೇಜುಗಳಿಗೆ ದಾಖಲಾತಿ ನೀಡುತ್ತಿವೆ.

2018: ಪೊಲೀಸರಿಗೆ ತಲೆ ನೋವು ನೂರೆಂಟು

ಸಮಾಜ ವಿರೋಧಿ ಕೃತ್ಯ
ಬೆಂಗಳೂರು ಮತ್ತಿತರೆಡೆ ಉನ್ನತ ಶಿಕ್ಷಣ ಸಂಸ್ಥೆಗಳು, ಹೋಟೆಲ್‌ಗಳು, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ನಡೆಯುವ ಮಾದಕ ಪದಾರ್ಥಗಳ ಮಾರಾಟ ಜಾಲದಲ್ಲಿ ನೈಜೀರಿಯಾ, ಉಗಾಂಡ, ಇಥಿಯೋಪಿಯಾ ಸೇರಿದಂತೆ ಇತರೆ ದೇಶಗಳ ವಿದ್ಯಾರ್ಥಿಗಳ ಕೈವಾಡವಿರುವುದು ಕಂಡು ಬಂದಿದ್ದು, ಹಲವರು ಕಂಬಿ ಎಣಿಸುತ್ತಿದ್ದಾರೆ. ಸೈಬರ್‌ ದಾಳಿ, ಕಂಪ್ಯೂಟರ್‌ ಹ್ಯಾಕಿಂಗ್‌, ಆನ್‌ಲೈನ್‌ ವಂಚನೆ ಹಾಗೂ ಇತರೆ ಸೈಬರ್‌ ಅಪರಾಧ ಪ್ರಕರಣಗಳಲ್ಲೂ ಕೆಲವು ಮಂದಿ ಸಿಕ್ಕಿ ಬಿದ್ದಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಆಫ್ರಿಕಾ ಮೂಲದ ಕೆಲವು ವಿದ್ಯಾರ್ಥಿಗಳು ದಾಂಧಲೆ ನಡೆಸಿದ್ದರು. ಇವರಲ್ಲಿ ಬಹುತೇಕರು ಅಕ್ರಮ ವಿದೇಶಿ ವಿದ್ಯಾರ್ಥಿಗಳಾಗಿದ್ದರು.

ಉಳ್ಕೊಳ್ಳೋಕೆ ಕಲಿಕೆಯ ನೆಪ !ಮೈಸೂರಿನಲ್ಲಿ ವಿದೇಶಿ ವಿದ್ಯಾರ್ಥಿಗಳ ಅಕ್ರಮ ವಾಸ್ತವ್ಯ

ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಕಳೆದ ವರ್ಷ ಸಭೆ ನಡೆಸಿದ್ದ ಪೊಲೀಸ್‌ ಅಧಿಕಾರಿಗಳು, ಕಾಲೇಜುಗಳಿಗೆ ಪ್ರವೇಶ ನೀಡುವಾಗ ವಿದೇಶಿ ವಿದ್ಯಾರ್ಥಿಗಳ ವೀಸಾ ಮತ್ತು ಪಾಸ್‌ಪೋರ್ಟ್‌ ಅನ್ನು ಕಡ್ಡಾಯವಾಗಿ ಪರಿಶೀಲಿಸಲು ಸೂಚಿಸಿದ್ದರು.

ಆದೇಶ ಪಾಲಿಸದಿದ್ದರೆ ಕ್ರಮದ ಎಚ್ಚರಿಕೆ
ಪೊಲೀಸ್‌ ಇಲಾಖೆಯ ಸೂಚನೆಯ ಮೇರೆಗೆ ಆದೇಶ ಹೊರಡಿಸಿರುವ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು, ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗ ಕಡ್ಡಾಯವಾಗಿ ವೀಸಾ ಮತ್ತು ಪಾಸ್‌ಪೋರ್ಟ್‌ ಪರಿಶೀಲಿಸಬೇಕು. ತಪ್ಪಿದರೆ, ಮುಂದೆ ಇಂತಹ ವಿದೇಶಿ ವಿದ್ಯಾರ್ಥಿಗಳಿಂದ ನಡೆಯುವ ಯಾವುದೇ ಕೃತ್ಯಗಳಿಗೆ ಪ್ರಾಂಶುಪಾಲರೇ ನೇರ ಹೊಣೆಯಾಗುತ್ತಾರೆ. ಆದೇಶ ಪಾಲನೆ ಮಾಡದ ಪ್ರಾಂಶುಪಾಲರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ