ಆ್ಯಪ್ನಗರ

ಬಡ್ತಿ ಮೀಸಲು ರದ್ದು : ಜು.4 ರೊಳಗೆ ಆದೇಶ ಜಾರಿ ಮಾಡಿ

ಬಡ್ತಿಯಲ್ಲಿ ಮೀಸಲಾತಿಯನ್ನು ರದ್ದುಪಡಿಸಿ ನೀಡಿದ್ದ ಆದೇಶವನ್ನು ರಾಜ್ಯ ಸರಕಾರ ಸಮರ್ಪವಾಗಿ ಜಾರಿಗೊಳಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು, ಜುಲೈ 4 ರೊಳಗೆ ಆದೇಶದ ಸಮರ್ಪಕ ಅನುಷ್ಠಾನವಾಗಬೇಕು ಎಂದು ಸೂಚನೆ ನೀಡಿದೆ.

Vijaya Karnataka 10 May 2018, 8:25 am
ಹೊಸದಿಲ್ಲಿ: ಬಡ್ತಿಯಲ್ಲಿ ಮೀಸಲಾತಿಯನ್ನು ರದ್ದುಪಡಿಸಿ ನೀಡಿದ್ದ ಆದೇಶವನ್ನು ರಾಜ್ಯ ಸರಕಾರ ಸಮರ್ಪವಾಗಿ ಜಾರಿಗೊಳಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು, ಜುಲೈ 4 ರೊಳಗೆ ಆದೇಶದ ಸಮರ್ಪಕ ಅನುಷ್ಠಾನವಾಗಬೇಕು ಎಂದು ಸೂಚನೆ ನೀಡಿದೆ.
Vijaya Karnataka Web Supreme Court


ನ್ಯಾಯಮೂರ್ತಿಗಳಾದ ಆದರ್ಶಕುಮಾರ್‌ ಗೋಯಲ್‌ ಮತ್ತು ಉದಯ್‌ ಲಲಿತ್‌ ಅವರನ್ನೊಳಗೊಂಡಿದ್ದ ಪೀಠ ಬುಧವಾರ ಈ ಆದೇಶ ನೀಡಿದ್ದು, ''ಜು.4ರೊಳಗೆ ಸಂಪೂರ್ಣವಾಗಿ ಆದೇಶದ ಜಾರಿಯಾಗದಿದ್ದರೆ ಅಂದು ನಡೆಯುವ ವಿಚಾರಣೆಗೆ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ‍್ಯದರ್ಶಿಗಳು ಹಾಜರಾಗಬೇಕು,'' ಎಂದು ಹೇಳಿದೆ.

ದೂರುದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ರಾಜೀವ್‌ ಧವನ್‌, ''ಬಡ್ತಿ ಮೀಸಲಾತಿ ಕುರಿತ ಆದೇಶವನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಿದೆ ಎಂದು ರಾಜ್ಯ ಸರಕಾರ ಪ್ರಮಾಣಪತ್ರ ಸಲ್ಲಿಸಿದೆ. ಆದರೆ, ಇದು ಸತ್ಯಕ್ಕೆ ದೂರವಾದ ವಿಚಾರ. ಕೇವಲ ಪ್ರಮಾಣ ಪತ್ರದಲ್ಲಿ ಮಾತ್ರ ಆದೇಶವನ್ನು ಜಾರಿಗೊಳಿಸಿದ್ದು, ವಾಸ್ತವವಾಗಿ ಅದು ಶೇ.100 ರಷ್ಟು ಜಾರಿಯಾಗಿಲ್ಲ ,''ಎಂದರು.

ರಾಜ್ಯ ಸರಕಾರದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಬಸವ ಪ್ರಭು, ''ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ನ ಆದೇಶವನ್ನು ಯಥಾವತ್‌ ಆಗಿ ಜಾರಿಗೊಳಿಸಿದೆ. ಈವರೆಗೆ 5000 ನೌಕರರಿಗೆ ಮುಂಬಡ್ತಿ ಮತ್ತು ಮೂರು ಸಾವಿರ ನೌಕರರಿಗೆ ಹಿಂಬಡ್ತಿ ನೀಡಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕೆಲವರು ತಮ್ಮ ಹೊಸ ಹುದ್ದೆಗಳಿಗೆ ಹಾಜರಾಗಿಲ್ಲ ,''ಎಂದು ವಿವರಣೆ ನೀಡಿದರು.

ರಾಜ್ಯಸರಕಾರ ಬಡ್ತಿಯಲ್ಲಿ ಮೀಸಲು ನೀಡಿರುವುದನ್ನು 2017ರ ಫೆಬ್ರವರಿ ತಿಂಗಳಲ್ಲಿ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್‌, ಹೊಸದಾಗಿ ಜೇಷ್ಠತಾ ಪಟ್ಟಿ ಸಿದ್ಧಪಡಿಸಲು ಗಡುವು ವಿಧಿಸಿತ್ತು. ಆದರೆ, ಗಡುವಿನೊಳಗೆ ರಾಜ್ಯ ಸರಕಾರ ಈ ಪಟ್ಟಿಯನ್ನು ಸಿದ್ಧಪಡಿಸಿದೇ ಹೆಚ್ಚಿನ ಕಾಲಾವಕಾಶ ಕೋರಿತ್ತು.

ಹಿಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಖಡಕ್‌ ಸೂಚನೆ ನೀಡಿದ ನಂತರವಷ್ಟೇ ಸರಕಾರ ಜೇಷ್ಠತಾ ಪಟ್ಟಿ ಸಿದ್ಧಗೊಳಿಸಿ, ಸುಪ್ರೀಂ ಕೋರ್ಟ್‌ನ ಆದೇಶವನ್ನು ಜಾರಿಗೊಳಿಸಲು ಮುಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ