ಆ್ಯಪ್ನಗರ

ಕಣ್ಣೆದುರೇ ಜಲಸಮಾಧಿಯಾದರು ಜವರಾಯನ ಗೆದ್ದು ಬಂದ ಗಿರೀಶ್‌, ರೋಹಿತ್‌

ದುರಂತದಲ್ಲಿ ಬದುಕುಳಿದ ಗಿರೀಶ್‌ ತಾನು ಜೀವ ಉಳಿಸಿಕೊಳ್ಳುವುದರೊಂದಿಗೆ ರೋಹಿತ್ ಎಂಬ ಬಾಲಕನ ಜೀವವನ್ನೂ ಕಾಪಾಡಿದ್ದಾನೆ.

Vijaya Karnataka Web 24 Nov 2018, 7:52 pm
ಕನಗನಮರಡಿ: ಬಸ್‌ ನಾಲೆಯೊಳಕ್ಕೆ ಬೀಳುತ್ತಿದ್ದಂತೆಯೇ ಹೊರ ಬರಲು ಯತ್ನಿಸಿ, ಬಚಾವಾದ ಗಿರೀಶ್‌ ಎಂಬ ಪ್ರಯಾಣಿಕ ತನ್ನೊಂದಿಗೆ ಬಾಲಕ ರೋಹಿತ್‌ನ ಕೈ ಹಿಡಿದು ಎಳೆದುಕೊಂಡು ದಡಕ್ಕೆ ಬಂದಿದ್ದಾನೆ.
Vijaya Karnataka Web WhatsApp Image 2018-11-24 at 1.55.25 PM.


ಕನಗನಮರಡಿಯಲ್ಲಿ ನಡೆದ ಬಸ್‌ ದುರಂತದ ವೇಳೆ ಬಚಾವಾದ ಇಬ್ಬರು ಪ್ರಯಾಣಿಕರಲ್ಲಿ ಗಿರೀಶ್‌ ಎಂಬಾತ ತನ್ನ ಅನುಭವ ಹಂಚಿಕೊಂಡಿದ್ದು, ನೋಡುತ್ತಲೇ ಎಲ್ಲರೂ ಜಲ ಸಮಾಧಿಯಾದರು ಎಂದು ಮರುಕ ವ್ಯಕ್ತಪಡಿಸಿದ್ದಾನೆ.

ನಾನು ಬಸ್ ನಲ್ಲಿ ಕಿಟಕಿ ಗಾಜು ಹೊಡೆದು ಹೊರ ಬಂದೆ. ನನ್ನ ಹಿಂದೆ ಬಾಲಕ ರೋಹಿತ್ ಇದ್ದ. ನಾನು ಅವನನ್ನ ಎಳೆದುಕೊಂಡೆ. ಬಸ್ ನಾಲೆಗೆ ಬಿಳುತ್ತಿದ್ದಂತೆ ಎಲ್ಲರೂ ಕಾಪಾಡಿ ಕಾಪಾಡಿ ಅಂತಾ ಕೂಗಿಕೊಂಡರು. ನನಗೆ ಯಾರನ್ನೂ ಬದುಕಿಸಲು ಆಗಲಿಲ್ಲ ಅನ್ನುವ ನೋವಿದೆ ಎಂದು ಹೇಳಿದ್ದಾನೆ.

ನನ್ನ ಕಣ್ಣೆದುರೇ 20 ಕ್ಕೂ ಹೆಚ್ಚು ಜನ ಜಲ ಸಮಾಧಿಯಾಗುವುದನ್ನು ನೋಡಬೇಕಾಯಿತು. ನಮ್ಮ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಬೇಕು. ರಸ್ತೆ ವ್ಯವಸ್ಥೆ ಸರಿಯಾಗಬೇಕು ಎಂದು ಗಿರೀಶ್‌ ಆಗ್ರಹಿಸಿದ್ದಾನೆ.

ನಾಲೆಗೆ ಉರುಳಿದ ಬಸ್‌ನಲ್ಲಿ ರೋಹಿತ್‌ ಸಹ ಇದ್ದ ಎಂದು ತಿಳಿದೇ ನಾನು ದಿಗ್ರ್ಬಾಂತನಾದೆ. ಆದರೆ ನನ್ನ ಮಗ ಅದೃಷ್ಟವಂತ ಎಂದಷ್ಟೇ ಹೇಳಬೇಕು ಎಂದು ದುರಂತದಲ್ಲಿ ಬದುಕುಳಿದ ರೋಹಿತ್‌ನ ದೊಡ್ಡಮ್ಮ ನಿಟ್ಟುಸಿರು ಬಿಟ್ಟಿದ್ದಾರೆ.

ರೋಹಿತ್‌ ಬಾಲ್ಯದಲ್ಲೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡಿದ್ದ. ವೇದ ಸಮುದ್ರದಲ್ಲಿದ್ದ ದೊಡ್ಡಮ್ಮನ ಮನೆಯಲ್ಲಿದ್ದ ರೋಹಿತ್‌ ಇದ್ದ. ದೊಡ್ಡಮ್ಮನೇ ಅವನನ್ನು ನೋಡಿಕೊಳ್ಳುತ್ತಿದ್ದರು. ಘಟನೆಯ ಸುದ್ದಿ ತಿಳಿದು ರೋಹಿತ್‌ ಸಹ ಮೃತಪಟ್ಟಿದ್ದಾನೆ ಎಂದುಕೊಂಡಿದ್ದೆ. ಸ್ಥಳಕ್ಕೆ ಭೇಟಿ ನೀಡಿದಾಗ ರೋಹಿತ್‌ ಬದುಕಿರುವ ಸುದ್ದಿ ಸಿಕ್ಕಿ ಸಂತೋಷಪಟ್ಟೆ. ಆದರೆ ಬಸ್‌ನಲ್ಲಿದ್ದ ಉಳಿದವರನ್ನು ನೆನೆಸಿ ದುಃಖವಾಯಿತು. ಮೃತಪಟ್ಟವರಲ್ಲಿ ರೋಹಿತ್‌ನ ಸ್ನೇಹಿತರೂ ಸೇರಿರುವುದು ಬೇಸರ ತಂದಿದೆ ಎಂದು ರೋಹಿತ್‌ ದೊಡ್ಡಮ್ಮ ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ