ಆ್ಯಪ್ನಗರ

ಬಂಧಿತ ಬಾಂಗ್ಲಾ ಉಗ್ರ ಮುನೀರ್‌ ಜೆಎಂಬಿ ಸದಸ್ಯ?

ರಾಷ್ಟ್ರೀಯ ತನಿಖಾ ದಳ ಮತ್ತು ಆಂತರಿಕ ಭದ್ರತಾ ವಿಭಾಗದ ಜಂಟಿ ಕಾರ್ಯಾಚರಣೆ ವೇಳೆ ರಾಮನಗರದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಮುನೀರ್‌ ನಿಷೇಧಿತ 'ಜಮಾತುಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ)' ಸಂಘಟನೆಗೆ ಸೇರಿದವನು ಎಂದು ತಿಳಿದು ಬಂದಿದೆ.

Vijaya Karnataka 7 Aug 2018, 9:47 am
ಬೆಂಗಳೂರು: ರಾಷ್ಟ್ರೀಯ ತನಿಖಾ ದಳ ಮತ್ತು ಆಂತರಿಕ ಭದ್ರತಾ ವಿಭಾಗದ ಜಂಟಿ ಕಾರ್ಯಾಚರಣೆ ವೇಳೆ ರಾಮನಗರದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಮುನೀರ್‌ ನಿಷೇಧಿತ 'ಜಮಾತುಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ)' ಸಂಘಟನೆಗೆ ಸೇರಿದವನು ಎಂದು ತಿಳಿದು ಬಂದಿದೆ.
Vijaya Karnataka Web suspected terrorist muneer gmb member
ಬಂಧಿತ ಬಾಂಗ್ಲಾ ಉಗ್ರ ಮುನೀರ್‌ ಜೆಎಂಬಿ ಸದಸ್ಯ?


2014ರ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಬಾಂಗ್ಲಾದೇಶದ ಮೈಮೇನ್‌ ಸಿಂಗ್‌ ಪ್ರಾಂತದ ತ್ರಿಶಾಲ್‌ನಲ್ಲಿ ಮುಸುಕುಧಾರಿ 12 ಶಂಕಿತ ಉಗ್ರರು ಪೊಲೀಸ್‌ ಜೀಪ್‌ನ ಮೇಲೆ ದಾಳಿ ನಡೆಸಿ, ಸಂಘಟನೆಯ ಮೂವರು ನಾಯಕರೊಂದಿಗೆ ಪರಾರಿಯಾಗಿದ್ದರು. ಆ ದಾಳಿಯಲ್ಲಿ ಪೇದೆ ಅತಿಕುಲ್‌ ಇಸ್ಲಾಂ ಎನ್ನುವಾತ ಮೃತಪಟ್ಟು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಸೋಮವಾರ ಬಂಧಿತನಾದ ಮುನೀರ್‌ ಕೂಡ ಈ ದಾಳಿಯಲ್ಲಿದ್ದ ಎಂದು ಎನ್‌ಐಎ ಶಂಕಿಸಿದೆ.


ಕೋಲ್ಕತ್ತಾಗೆ ಹೋಗಿ ಬರುತ್ತಿದ್ದ:
ಬಂಧಿತ ಮುನೀರ್‌ ಆಗಾಗ ಕೋಲ್ಕತಾಗೆ ಹೋಗಿ ಬರುತ್ತಿದ್ದ. ಆ ವೇಳೆಯಲ್ಲಿ ಮುಸಾ ಮತ್ತು ರುಬೆಲ್‌ ಜತೆಗೂ ಸಂಪರ್ಕದಲ್ಲಿದ್ದ. ಹೈದರಾಬಾದ್‌ನಲ್ಲಿ ಜನವರಿ ತಿಂಗಳಿನಲ್ಲಿ ನಡೆದಿದ್ದ ಜೆಎಂಬಿ ಮುಖಂಡರ ಸಭೆಯಲ್ಲೂ ಈತ ಭಾಗವಹಿಸಿದ್ದ. ಈ ಸಭೆ ನಡೆಯುವವರೆಗೂ ಹೈದರಾಬಾದ್‌ನಲ್ಲೇ ನೆಲೆಸಿದ್ದ ಈತ ಸಭೆಯ ವಿಚಾರ ತಿಳಿದು ಎನ್‌ಐಎ ಅಧಿಕಾರಿಗಳು ಬೆನ್ನತ್ತಿದ ನಂತರ ಈತ ಬೆಂಗಳೂರಿನ ಕಡೆ ಮುಖ ಮಾಡಿದ್ದ ಎನ್ನಲಾಗಿದೆ.

ದುಷ್ಕೃತ್ಯದ ಉದ್ದೇಶ ಇರಲಿಲ್ಲ: ''ಜೆಎಂಬಿ ಸಂಘಟನೆಗೆ ರಾಜ್ಯದಲ್ಲಿ ಯಾವುದೇ ದುಷ್ಕೃತ್ಯ ನಡೆಸುವ ಉದ್ದೇಶ ಇರಲಿಲ್ಲ. ಕೇವಲ ಇಲ್ಲಿ ಆಶ್ರಯ ಕಲ್ಪಿಸಿಕೊಂಡು ಬಾಂಗ್ಲಾದೇಶದ ತಮ್ಮ ಸಂಘಟನೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿತ್ತು. ಸುರಕ್ಷಿತವಾಗಿ ತಲೆಮರೆಸಿಕೊಳ್ಳುವುದಷ್ಟಕ್ಕೆ ಇವರು ಸ್ಥಳೀಯವಾಗಿ ಮನೆ ಮಾಡಿ ನೆಲೆಸಿರುತ್ತಾರೆ,'' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೋಧ್‌ಗಯಾ ಸ್ಫೋಟ ಸ್ಕೆಚ್‌:
ಬೋಧ್‌ಗಯಾ ಸ್ಫೋಟದಲ್ಲೂ ಜೆಎಂಬಿ ಉಗ್ರ ಸಂಘಟನೆಯ ಕೈವಾಡ ಇತ್ತು. ಈ ಸಂಬಂಧ ಹೈದರಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಮುನೀರ್‌ ಭಾಗಿಯಾಗಿದ್ದ ಎನ್ನಲಾಗಿದ್ದು, ಈತನನ್ನು ಹೈದರಾಬಾದ್‌ಗೂ ಕರೆದೊಯ್ದು ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ