ಆ್ಯಪ್ನಗರ

ಸುವರ್ಣ ತ್ರಿಭುಜ ಬೋಟ್‌ : ರಾಜ್ಯ, ಕೇಂದ್ರ ಸರಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್‌

ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಏಳು ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ವು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ನೋಟಿಸ್‌ ನೀಡಿದ್ದು, ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.

Vijaya Karnataka 14 May 2019, 5:00 am
- ಏಳು ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್‌ ನಾಪತ್ತೆ ಪ್ರಕರಣ
Vijaya Karnataka Web fish


- ವಾರದಲ್ಲಿ ಉತ್ತರಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ, ರಕ್ಷ ಣಾ ಇಲಾಖೆಗೆ ಸೂಚನೆ

ಹೊಸದಿಲ್ಲಿ : ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಏಳು ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ವು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ನೋಟಿಸ್‌ ನೀಡಿದ್ದು, ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.

ಈ ಪ್ರಕರಣದ ಕುರಿತು ಮಾಧ್ಯಮ ವರದಿಗಳನ್ನು ಆಧಾರವಾಗಿಟ್ಟುಕೊಂಡು ಆಯೋಗವು ಸ್ವಯಂ ವಿಚಾರಣೆಗೆ ಮುಂದಾಗಿದೆ.

2018 ಡಿಸೆಂಬರ್‌ 16ರಂದು ಸುವರ್ಣ ತ್ರಿಭುಜ ಬೋಟ್‌ ಗೋವಾದ ಆಳ ಸಮುದ್ರಕ್ಕೆ ಹೋದಾಗ ಸಂಪರ್ಕ ಕಡಿತಗೊಂಡು ಐದು ತಿಂಗಳಾಗಿದೆ. ಇತ್ತೀಚೆಗಷ್ಟೇ ಈ ಬೋಟ್‌ನ ಅವಶೇಷಗಳು ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಮಾಲ್ವಾನ ಸಮುದ್ರದಲ್ಲಿ ಪತ್ತೆಯಾಗಿದ್ದವು. ಆದರೆ, ಅದರಲ್ಲಿದ್ದ ಮೀನುಗಾರರು ಏನಾದರೂ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ. ಏತನ್ಮಧ್ಯೆ, ಅವಶೇಷಗಳು ಪತ್ತೆಯಾದ ನಂತರ ಮೀನುಗಾರರ ಶೋಧವನ್ನು ಭಾರತೀಯ ನೌಕಾ ಪಡೆ ಕೈ ಬಿಟ್ಟಿದೆ ಎನ್ನಲಾಗಿದೆ.

ಮುಖ್ಯ ಕಾರ್ಯದರ್ಶಿ ನೀಡಿದ ನೋಟಿಸ್‌ನಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬದ ಸದಸ್ಯರ ಸಮಸ್ಯೆಗಳನ್ನು ಬಗೆಹರಿಸಲು ತಕ್ಷ ಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ರಕ್ಷ ಣಾ ಸಚಿವಾಲಯದ ಕಾರ್ಯದರ್ಶಿಗೆ ನೀಡಿದ ನೋಟಿಸ್‌ನಲ್ಲಿ ಕಾಣೆಯಾದವರ ಶೋಧ ಕುರಿತು ತಾಜಾ ವರದಿಯನ್ನು ನೀಡುವಂತೆ ಸೂಚಿಸಿದೆ.

2019ರ ಮಾರ್ಚ್‌ 19ರಂದು ಪ್ರಕಟವಾದ ಮಾಧ್ಯಮ ವರದಿಗಳಲ್ಲಿ ಸುವರ್ಣ ತ್ರಿಭುಜ ಬೋಟ್‌ನ ಅವಶೇಷಗಳು ಪತ್ತೆಯಾದ ಬಗ್ಗೆ ತಿಳಿಸಲಾಗಿದೆ. ಐಎನ್‌ಎನ್‌ ನಿರೀಕ್ಷ ಕ್‌ ಶೋಧ ಕಾರ್ಯಾಚರಣೆಯ ಹಡಗು ಬೋಟ್‌ನ ಅವಶೇಷಗಳನ್ನು ಪತ್ತೆ ಮಾಡಿತ್ತು. 60 ಮೀಟರ್‌ ಸಮುದ್ರದ ಆಳದಲ್ಲಿ ಅವಶೇಷಗಳು ಸಿಕ್ಕಿದ್ದವು. ಆದರೆ, ಅದರಲ್ಲಿದ್ದ ಮೀನುಗಾರರ ಬಗ್ಗೆ ಯಾವುದೇ ಕುರುಹುಗಳು ಸಿಕ್ಕಿಲ್ಲ. ಬೋಟ್‌ನ ಮಾಲೀಕರಾದ ಚಂದ್ರಶೇಖರ್‌ ಸೇರಿದಂತೆ ದಾಮೋದರ ಲಕ್ಷ ್ಮಣ್‌, ಸತೀಶ್‌, ರವಿ, ಹರೀಶ್‌ ಮತ್ತು ರಮೇಶ್‌ ಎಂಬುವವರೇ ಕಾಣೆಯಾದ ಮೀನುಗಾರರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ