ಆ್ಯಪ್ನಗರ

ಸ್ವಾಮೀಜಿಗಳ ಫೋನ್‌‌ಟ್ಯಾಪ್ ಮಾಡಿಸಿರುವುದು ನಾಚಿಕೆಗೇಡು: ಆರ್. ಅಶೋಕ್

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿದ್ದಾಗ ನಡೆದಿತ್ತೆನ್ನಲಾದ ಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಿದೆ.

Vijaya Karnataka Web 27 Sep 2019, 3:04 pm
ಬೆಂಗಳೂರು: ರಾಜ್ಯದಲ್ಲಿ ಬಹು ಚರ್ಚೆಯಲ್ಲಿರುವ ಫೋನ್ ಟ್ಯಾಪಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್ ಅಶೋಕ್ ಇದು ನಾಚಿಕೆಗೇಡಿನ ಕೃತ್ಯ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದಿದ್ದಾರೆ.
Vijaya Karnataka Web Ashok


ಫೋನ್ ಟ್ಯಾಪ್ ಮಾಡಿರುವುದು‌ ನಿಜ. ನೂರಕ್ಕೆ‌ನೂರು ಫೋನ್‌ಟ್ಯಾಪ್‌ ಆಗಿದೆ.‌ ನಾನು ಈ‌ ಮುಂಚೆ ಈ ಬಗ್ಗೆ ಹೇಳಿದ್ದೆ. ತನಿಖೆಯಲ್ಲಿ ಈಗ ಅದೆಲ್ಲ ಸತ್ಯ ಆಗಿದೆ.

ಕಳ್ಳಕಿವಿ ಆರೋಪದ ಸುಳಿಗೆ ಕುಮಾರಸ್ವಾಮಿ

ಆದರೆ ಸ್ವಾಮಿಜಿಗಳ ಫೋನ್‌‌ಟ್ಯಾಪ್ ಮಾಡಿಸಿರುವುದು ನಾಚಿಗೇಡು. ಅವರ ಫೋನ್ ಟ್ಯಾಪ್ ಏಕೆ‌ ಮಾಡಿದ್ದಾರೆ. ತನಿಖೆಯಲ್ಲಿ ಎಲ್ಲವೂ ಹೊರ ಬರಲಿ, ಎಂದವರು ಒತ್ತಾಯಿಸಿದರು.

ಎಲ್ಲ ಸರಕಾರದಲ್ಲೂ ಪೋನ್ ಟ್ಯಾಪಿಂಗ್ ನಡೆದಿದೆ

ಸ್ವಾಮೀಜಿಗಳನ್ನು ರಾಜಕೀಯ ವ್ಯವಸ್ಥೆಗೆ ತರುವುದು ಎಷ್ಟು ಸರಿ? ದೇಶ ದ್ರೋಹಿ ಸಂಘಟನೆ ಟ್ಯಾಪಿಂಗ್ ಮಾಡಲು‌ ಅವಕಾಶ ಇದೆ‌. ಸ್ವಾಮಿಜಿಗಳದ್ದು ಫೋನ್ ಟ್ಯಾಪ್ ಏಕೆ‌ ಮಾಡಲಾಗಿದೆ?
ಸತ್ಯಾಸತ್ಯತೆ ಹೊರಬರಲಿ ಎಂದರು.

ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ

ಯಾರದ್ದು ಪೋನ್ ಟ್ಯಾಪ್ ಮಾಡಲಾಗಿದೆಯೋ ಅವರ ಬಳಿ ಕ್ಷಮಾಪಣೆ ಕೇಳುತ್ತೇನೆ. ತನಿಖೆಯಿಂದ ಎಲ್ಲ ಸತ್ಯ ಹೊರ ಬಂದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಎಂದವರು ಹೇಳಿದ್ದಾರೆ.

ಫೋನ್ ಟ್ಯಾಪಿಂಗ್ ಪ್ರಕರಣ: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಸಿಬಿಐ ದಾಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ