ಆ್ಯಪ್ನಗರ

60 ಸಾವಿರ ಗಡಿ ದಾಟಿದ ಶಿಕ್ಷಣ ವರ್ಗಾವಣೆ ಅರ್ಜಿಗಳು

ಶಿಕ್ಷರ ವರ್ಗಾವಣೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇನ್ನು ಒಂದು ದಿವಸ ಬಾಕಿ ಇರುವಂತೆ, ಮಂಗಳವಾರದ ವೇಳೆಗೆ ಒಟ್ಟು 60,004 ಅರ್ಜಿಗಳು ...

Vijaya Karnataka 19 Jun 2019, 5:00 am
ಬೆಂಗಳೂರು: ಶಿಕ್ಷರ ವರ್ಗಾವಣೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇನ್ನು ಒಂದು ದಿವಸ ಬಾಕಿ ಇರುವಂತೆ, ಮಂಗಳವಾರದ ವೇಳೆಗೆ ಒಟ್ಟು 60,004 ಅರ್ಜಿಗಳು ಸಲ್ಲಿಕೆಯಾಗಿವೆ.
Vijaya Karnataka Web teacher


ಘಟಕದ ಒಳಗೆ ನಡೆಯುವ ವರ್ಗಾವಣೆಗೆ ಒಟ್ಟು 48,908 ಅರ್ಜಿಗಳು, ಘಟಕದ ಒಳಗಿನಿಂದ ಹೊರ ವಲಯಕ್ಕೆ ವರ್ಗಾವಣೆ ಕೋರಿ 6,082, ಘಟಕದ ಹೊರಗಿನಿಂದ ಒಳ ವಲಯಕ್ಕೆ 5,014 ಅರ್ಜಿಗಳು ಸಲ್ಲಿಕೆಯಾಗಿವೆ.

2018ರ ಅಕ್ಟೋಬರ್‌ ತಿಂಗಳಲ್ಲಿ ಸ್ಥಗಿತಗೊಂಡಿದ್ದ ವರ್ಗಾವಣೆ ಪ್ರಕ್ರಿಯೆಗಳ ವೇಳೆ ಒಟ್ಟು 50 ಸಾವಿರ ಶಿಕ್ಷಕರು ಅರ್ಜಿಗಳನ್ನು ಸಲ್ಲಿಸಿದ್ದರು. 2019ರ ಶಿಕ್ಷಕರ ವರ್ಗಾವಣೆಗೆ ಅರ್ಜಿ ಸಲ್ಲಿಕೆಗೆ ಜೂ.19ರ ಬುಧವಾರ ಕಡೆಯ ದಿನಾಂಕವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ