ಆ್ಯಪ್ನಗರ

ಶಿಕ್ಷಕರಿಗೆ ವೇತನ ಬಿಡುಗಡೆಗೊಳಿಸಿ ಸರಕಾರ ಆದೇಶ

ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಆದರ್ಶ ವಿದ್ಯಾಲಯಗಳಲ್ಲಿ (ಆರ್‌ಎಂಎಸ್‌ಎ) ಕಾರ‍್ಯನಿರ್ವಹಿಸುತ್ತಿರುವ ಶಿಕ್ಷಕರ ಒಟ್ಟು 384.31 ಕೋಟಿ ರೂ. ವೇತನ ಬಿಡುಗಡೆ ಮಾಡಿ ಸರಕಾರ ಆದೇಶ ಹೊರಡಿಸಿದೆ

Vijaya Karnataka 9 May 2018, 12:27 pm
ಬೆಂಗಳೂರು: ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಆದರ್ಶ ವಿದ್ಯಾಲಯಗಳಲ್ಲಿ (ಆರ್‌ಎಂಎಸ್‌ಎ) ಕಾರ‍್ಯನಿರ್ವಹಿಸುತ್ತಿರುವ ಶಿಕ್ಷಕರ ಒಟ್ಟು 384.31 ಕೋಟಿ ರೂ. ವೇತನ ಬಿಡುಗಡೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
Vijaya Karnataka Web money


2018-19ನೇ ಸಾಲಿನ ಆಯವ್ಯಯದಲ್ಲಿ ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಆರ್‌ಎಂಎಸ್‌ಎ ಮಾದರಿ ಶಾಲೆಗಳಿಗೆ 1,152.95 ಕೋಟಿ ರೂ.ಗಳಷ್ಟು ಅನುದಾನವನ್ನು ಸರಕಾರ ನಿಗದಿ ಮಾಡಿದೆ. ಆದರೆ ಇದುವರೆಗೆ ಕೇಂದ್ರ ಸರಕಾರ ತನ್ನ ಪಾಲಿನ ಅನುದಾನವನ್ನು ಬಿಡಗಡೆ ಮಾಡದ ಕಾರಣ, ಕಳೆದ ಮೂರು ತಿಂಗಳಿಂದ ಈ ಶಾಲೆಗಳ ಶಿಕ್ಷಕರಿಗೆ ವೇತನ ನೀಡಿರಲಿಲ್ಲ. ಇದರಿಂದ ಶಿಕ್ಷಕರು ಸಂಬಳವಿಲ್ಲದೆ ತೀವ್ರ ಸಮಸ್ಯೆಗೆ ಸಿಲುಕಿದ್ದರು.

ಆದ್ದರಿಂದ ಶಿಕ್ಷಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ರಾಜ್ಯ ಸರಕಾರವೇ ಅನುದಾನ ಬಿಡುಗಡೆ ಮಾಡಿದೆ. ಮೊದಲ ತ್ರೈಮಾಸಿಕ ಅನುದಾನವಾಗಿ ಸರ್ವ ಶಿಕ್ಷಣ ಅಭಿಯಾನಕ್ಕೆ 341.61 ಕೋಟಿ ರೂ., ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನಕ್ಕೆ 41.90 ಕೋಟಿ ರೂ. ಹಾಗೂ ಆರ್‌ಎಂಎಸ್‌ಎ ಮಾದರಿ ಶಾಲೆಗಳಿಗೆ 80 ಲಕ್ಷ ರೂ. ಬಿಡುಗಡೆ ಮಾಡಿದೆ. ಸರಕಾರದ ಈ ಕ್ರಮ ಸಂಬಳವಿಲ್ಲದೆ ಪರಿತಪಿಸುತ್ತಿದ್ದ ಶಿಕ್ಷಕ ವಲಯದಲ್ಲಿ ಸಂತಸ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ