ಆ್ಯಪ್ನಗರ

ಅರಣ್ಯವಾಸಿಗಳಿಗೆ ತಾತ್ಕಾಲಿಕ ನಿರಾಳ: ಎತ್ತಂಗಡಿ ಮಾಡಬೇಕೆಂಬ ಫೆ. 13ರ ತೀರ್ಪಿಗೆ ತಡೆ ನೀಡಿದ ಸುಪ್ರೀಂ

ಸುಪ್ರೀಂಕೋರ್ಟ್‌ ನೀಡಿದ್ದ ಆದೇಶವನ್ನು ಪುನರ್‌ಪರಿಶೀಲಿಸುವಂತೆ ಕೇಂದ್ರ ಸರಕಾರದ ಪರ ವಕೀಲರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಬುಧವಾರ ಮೇಲ್ಮನವಿ ಸಲ್ಲಿಸಿದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಅರುಣ ಮಿಶ್ರಾ, ನ''ೕನ ಸಿನ್ಹಾ ಹಾಗೂ ಎಂ. ಆರ್‌. ಶಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕೇಂದ್ರ ಸರಕಾರದ ಅರ್ಜಿಯನ್ನು ಪುರಸ್ಕರಿಸಿತು.

Vijaya Karnataka 28 Feb 2019, 11:03 pm
ಹೊಸದಿಲ್ಲಿ: ಅರಣ್ಯ ನಿವಾಸಿಗಳ ಎತ್ತಂಗಡಿ ಕುರಿತು ಫೆ.13ರಂದು ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿಗೆ ತಾತ್ಕಾಲಿಕ ತಡೆ ಬಿದ್ದಿದೆ. ಹಾಗಾಗಿ ದೇಶದ 21 ರಾಜ್ಯಗಳಲ್ಲಿನ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಅಂದಾಜು 11.8 ಲಕ್ಷ ಕ್ಕೂ ಹೆಚ್ಚು ಅರಣ್ಯ ವಾಸಿಗಳು ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಈ ಕುರಿತು ಮುಂದಿನ ವಿಚಾರಣೆಯನ್ನು ನ್ಯಾಯಪೀಠ ಜುಲೈ 10ಕ್ಕೆ ನಿಗದಿಪಡಿಸಿದೆ.
Vijaya Karnataka Web Supreme Court


ಸುಪ್ರೀಂಕೋರ್ಟ್‌ ನೀಡಿದ್ದ ಆದೇಶವನ್ನು ಪುನರ್‌ಪರಿಶೀಲಿಸುವಂತೆ ಕೇಂದ್ರ ಸರಕಾರದ ಪರ ವಕೀಲರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಬುಧವಾರ ಮೇಲ್ಮನವಿ ಸಲ್ಲಿಸಿದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಅರುಣ ಮಿಶ್ರಾ, ನ''ೕನ ಸಿನ್ಹಾ ಹಾಗೂ ಎಂ. ಆರ್‌. ಶಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕೇಂದ್ರ ಸರಕಾರದ ಅರ್ಜಿಯನ್ನು ಪುರಸ್ಕರಿಸಿತು.

''ಹಲವು ವರ್ಷಗಳಿಂದ ಸಾವಿರಾರು ಅನಕ್ಷ ರಸ್ಥ ಕುಟುಂಬಗಳು ಅರಣ್ಯದಲ್ಲಿ ವಾಸಿಸುತ್ತಿವೆ. ಈ ತೀರ್ಪಿನಿಂದ ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ,'' ಎಂದು ತುಷಾರ್‌ ಮೆಹ್ತಾ ವಾದಿಸಿದರು. ಅರಣ್ಯವಾಸಿಗಳ ಅರ್ಜಿಗಳನ್ನು ತೀರಸ್ಕರಿವುದಕ್ಕೆ ಮುಖ್ಯ ಕಾರಣ ಏನು, ಜಿಲ್ಲಾಡಳಿತದಿಂದ ಅರಣ್ಯವಾಸಿಗಳ ವಾಸಸ್ಥಾನ ಕುರಿತ ಮಾಹಿತಿ, ಅರಣ್ಯ ಹಕ್ಕು ಕಾಯಿದೆಯಡಿ ಬರುವ ಫಲಾನುಭವಿಗಳ ಸಂಪೂರ್ಣ ಮಾಹಿತಿ ಮತ್ತು ಅರಣ್ಯ ಭೂಮಿ ಒತ್ತುವರಿಯಾಗಿರುವ ಕುರಿತು ವಿವರವನ್ನು ಅಫಿಡವಿಟ್‌ ರೂಪದಲ್ಲಿ ಸಲ್ಲಿಸಲು ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ನಿದ್ದೆ ಮಾಡ್ತಾ ಇದ್ರಾ? ಸರಕಾರಗಳಿಗೆ ತರಾಟೆ

ವಿಚಾರಣೆ ವೇಳೆ ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ತರಾಟೆ ತೆಗೆದುಕೊಂಡ ತ್ರಿಸದಸ್ಯಪೀಠ ''ಇಲ್ಲಿಯವರೆಗೆ ನಿವೇನು ನಿದ್ರೆ ಮಾಡುತ್ತಿದ್ದೀರಾ? ಸುಪ್ರೀಂ ಕೋರ್ಟ್‌ ಆದೇಶ ನೀಡಿದ ನಂತರ ನಿಮಗೆ ಎಚ್ಚರವಾಯಿತೆ,'' ಎಂದು ಚಾಟಿ ಬೀಸಿದೆ. ಇದೇ ವೇಳೆ 11.8 ಲಕ್ಷ ಆದಿವಾಸಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೀಠ, ಅರಣ್ಯದಲ್ಲಿರುವವರು ನಿಜವಾಗಿಯೂ ಮೂಲ ನಿವಾಸಿಗಳಾ ಅಥವಾ ಅತಿಕ್ರಮಣದಾರರಾ,'' ಎಂದು ಪ್ರಶ್ನಿಸಿತು.

ಅರಣ್ಯ ಹಕ್ಕು ಕಾಯಿದೆ ಪ್ರಕಾರ ಸಲ್ಲಿಸಿದ ಅರ್ಜಿ ವಜಾಗೊಂಡ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂಬ ಆದೇಶ ಹಿಂಪಡೆಯುವಂತೆ ರಾಜ್ಯ ಸರಕಾರದಿಂದಲೂ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು.

-ಆರ್‌.ವಿ.ದೇಶಪಾಂಡೆ, ಕಂದಾಯ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ