ಆ್ಯಪ್ನಗರ

ವಿಧಾನಸಭೆ ಕಲಾಪ ಆರಂಭ; ಅಶೋಕ್ ಗಸ್ತಿ, ಪ್ರಣಬ್‌ ಮುಖರ್ಜಿ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ

ಇತ್ತೀಚೆಗೆ ಮೃತಪಟ್ಟ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಕೇಂದ್ರ ಸಚಿವ ಎಂವಿ ರಾಜಶೇಖರನ್, ಶಿರಾ ಶಾಸಕರಾಗಿದ್ದ ಸತ್ಯನಾರಾಯಣ, ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ, ಹಿರಿಯ ಕವಿ ಡಾ.ಕೆಎಸ್ ನಿಸಾರ್ ಅಹ್ಮದ್, ಯಕ್ಷಗಾನ ಕಲಾವಿದ ಹೊಸ್ದೋಟ ಗಜಾನನ ಭಟ್, ಎಡನೀರು ಕೇಶವಾನಂದ ಭಾರತೀ ಸ್ವಾಮಿ ಸೇರಿದಂತೆ ಅನೇಕ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು.

Vijaya Karnataka Web 21 Sep 2020, 11:48 am
ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ ವಿಧಾನಸಭಾ ಅಧಿವೇಶನ ಆರಂಭವಾಗಿದೆ.
Vijaya Karnataka Web kageri


ಸೋಮವಾರದಿಂದ ವಿಧಾನಸಭೆ ಕಲಾಪ: ಹಲವರ ಗೈರು ಸಾಧ್ಯತೆ, ಮಸೂದೆ ಮಂಡನೆ; ಸಂಪೂರ್ಣ ಮಾಹಿತಿ ಇಲ್ಲಿದೆ!

ಕೊರೊನಾ ಹಿನ್ನೆಲೆ ಹಲವಾರು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಇಂದಿನಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಮೊದಲ ದಿನದ ಆರಂಭದಲ್ಲಿ ಮೃತಪಟ್ಟ ಅನೇಕ ಗಣ್ಯರಿಗೆ ಸದನದಲ್ಲಿ ಸಂತಾಪ ಸೂಚಿಸುವ ಪ್ರಸ್ತಾಪವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಡಿಸಿದ್ದಾರೆ.

ಗ್ರಾಪಂ ಕೈಗೆ ಬಂತು ಜನನ-ಮರಣ ಪ್ರಮಾಣ ಪತ್ರ ನೀಡುವ ಅಧಿಕಾರ: ಜನರ ಅಲೆದಾಟ ತಪ್ಪಿಸಲು ಕ್ರಮ!

ಇತ್ತೀಚೆಗೆ ಮೃತಪಟ್ಟ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಕೇಂದ್ರ ಸಚಿವ ಎಂವಿ ರಾಜಶೇಖರನ್, ಶಿರಾ ಶಾಸಕರಾಗಿದ್ದ ಸತ್ಯನಾರಾಯಣ, ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ, ಮಾಜಿ ಸಚಿವ ರಾಜಾಮದನ್ ಗೋಪಾಲ್‌ ನಾಯ್ಕ್, ಹಿರಿಯ ಕವಿ ಡಾ.ಕೆಎಸ್ ನಿಸಾರ್ ಅಹ್ಮದ್, ಯಕ್ಷಗಾನ ಕಲಾವಿದ ಹೊಸ್ದೋಟ ಗಜಾನನ ಭಟ್, ಎಡನೀರು ಕೇಶವಾನಂದ ಭಾರತೀ ಸ್ವಾಮಿ, ಭಾರತ ಚೀನಾ ಗಡಿಯಲ್ಲಿ ಹುತಾತ್ಮರಾದ ಇಪ್ಪತ್ತು ಸೈನಿಕರು, ಕೊರೊನಾ ವಾರಿಯರ್ಸ್‌ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ