ಆ್ಯಪ್ನಗರ

ತೇರಾಪಂಥ್‌ ನಿಯಮ ಕಠೋರ: ಡಿಕೆ ಶಿವಕುಮಾರ್‌

ಕಠೋರ ನಿಯಮ ಪಾಲನೆ ಮಾಡುವ ತೇರಾಪಂಥ್‌ನಂತಹ ಮತ್ತೊಂದು ಧರ್ಮ ಜಗತ್ತಿನಲ್ಲಿ ಎಲ್ಲೂ ಇಲ್ಲ ಎಂದು ಸಚಿವ ಡಿಕೆ ಶಿವಕುಮಾರ್‌ ಅಭಿಪ್ರಾಯಪಟ್ಟರು...

Vijaya Karnataka 24 Jun 2019, 5:00 am
ಬೆಂಗಳೂರು: ಕಠೋರ ನಿಯಮ ಪಾಲನೆ ಮಾಡುವ ತೇರಾಪಂಥ್‌ನಂತಹ ಮತ್ತೊಂದು ಧರ್ಮ ಜಗತ್ತಿನಲ್ಲಿ ಎಲ್ಲೂ ಇಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಅಭಿಪ್ರಾಯಪಟ್ಟರು.
Vijaya Karnataka Web 2306-2-2-KSG_02 (2)


ಆಚಾರ್ಯ ಮಹಾಶ್ರಮಣ್‌ ಚಾರ್ತುಮಾಸ್‌ ಪ್ರವಾಸ್‌ ವ್ಯವಸ್ಥಾಪನಾ ಸಮಿತಿಯು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಆಚಾರ್ಯ ಮಹಾಶ್ರಮಣ್‌ ಸ್ವಾಮೀಜಿ ಅವರಿಗೆ 'ಬೆಂಗಳೂರು ನಾಗರಿಕರಿಂದ ಅಭಿನಂದನಾ' ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶ್ರೀಗಳು 19 ಸಾವಿರ ಕಿ.ಮೀ.ಗಳಷ್ಟು (19 ರಾಜ್ಯಗಳು, 3 ದೇಶಗಳನ್ನು) ಸುತ್ತಿ ನಗರಕ್ಕೆ ವಾಪಸ್ಸಾದ ಹಿನ್ನೆಲೆಯಲ್ಲಿ ಶ್ರೀಗಳನ್ನು ಅಭಿನಂದಿಸಲಾಯಿತು.

ಶ್ರೀಗಳ ಆಶೀರ್ವಾದ ಪಡೆದ ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ''ಅಹಿಂಸಾ ಯಾತ್ರೆಯಲ್ಲಿ ಸಾರ್ವತ್ರಿಕ ಸದ್ಭಾವನೆ, ಸಾಮರಸ್ಯ, ನೈತಿಕತೆ, ವ್ಯಸನಮುಕ್ತಿ ಅಂಶಗಳನ್ನು ಪ್ರಚಾರ ಮಾಡುತ್ತಾ, ಇಲ್ಲಿಯವರೆಗೆ 19 ಸಾವಿರ ಮೈಲಿಗಳಷ್ಟು ಕ್ರಮಿಸಿ ರಾಜ್ಯಕ್ಕೆ ಪಾದಾರ್ಪಣೆ ಮಾಡಿರುವುದು ಶುಭದ ಸಂಕೇತ,'' ಎಂದರು.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ''ಆದಿಚುಂಚನಗಿರಿ ಮತ್ತು ತೇರಾಪಂಥ್‌ ಧರ್ಮಗುರುಗಳ ನಡುವೆ ಅವಿನಾಭಾವ ಬಾಂಧವ್ಯವಿದೆ. ಪ್ರತಿ ಚಾತುರ್ಮಾಸ ಸಂದರ್ಭದಲ್ಲೂ ಆಚಾರ್ಯರನ್ನು ಭೇಟಿ ಮಾಡಿ ಗೌರವ ಸಲ್ಲಿಸುವ ಪರಿಪಾಠವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ,'' ಎಂದರು.

ಜೈನ ಧರ್ಮಕ್ಕೂ-ಮೈಸೂರು ಸಂಸ್ಥಾನಕ್ಕೂ ನಿಕಟ ಸಂಪರ್ಕ
ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ''ಮೈಸೂರು ಮಹಾಸಂಸ್ಥಾನಕ್ಕೂ, ಜೈನ ಧರ್ಮಕ್ಕೂ ನಿಕಟ ಸಂಪರ್ಕವಿದೆ. ಅದು ಹಾಗೆಯೇ ಮುಂದುವರಿಯಲಿದೆ,'' ಎಂದರು.
ಕಾರ್ಯಕ್ರಮದಲ್ಲಿ ಸಚಿವ ಎಂ.ಟಿ.ಬಿ. ನಾಗರಾಜು, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಆಚಾರ್ಯ ಮಹಾಶ್ರವಣ್‌ ಚತುರ್ಥ ಮಾಸ ಪ್ರವಾಸ್‌ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೂಲಚಂದ್‌ ನಹರ್‌, ಜಂಟಿ ಕಾರ್ಯದರ್ಶಿ ದೀಪಕ್‌ ಚಂದ್‌ ನಹರ್‌ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಶ್ರೀಗಳು ಬರೆದ 6 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಬೀಗದ ಕೀ ಪ್ರದಾನ
ಸಮಾಜದಲ್ಲಿ ಯುವಪೀಳಿಗೆ ಬಹುಬೇಗ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದೆ. ತಮ್ಮ ಸಲಹೆ, ಮಾರ್ಗದರ್ಶನದ ಮೇರೆಗೆ ಕೆಟ್ಟ ಚಟಗಳಿಗೆ ಬೀಗ ಹಾಕಬೇಕು ಎಂದು ಮಹಾಶ್ರಮಣಜೀಯವರಿಗೆ ಬೃಹತ್‌ ಕೀಯನ್ನು ನೀಡಲಾಯಿತು.

ಯುವಕರಿಗೆ ಸನ್ಮಾರ್ಗ ತೋರಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ಬದ್ಧರಾಗಿರೋಣ.
- ತೇರಾಪಂಥ್‌ನ ಆಚಾರ್ಯ ಮಹಾಶ್ರಮಣ್‌ ಸ್ವಾಮೀಜಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ