ಆ್ಯಪ್ನಗರ

ಬಿಎಸ್‌ವೈ ವಿರುದ್ಧ ಹೈಕಮಾಂಡ್‌ಗೆ ಯಾವುದೇ ಪತ್ರ ಹೋಗಿಲ್ಲ, ಸವದಿ ಸ್ಪಷ್ಟನೆ

ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಬಿ.ಎಸ್ ಯಡಿಯೂರಪ್ಪ ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

Vijaya Karnataka Web 27 Feb 2020, 12:39 pm
ಬೆಂಗಳೂರು: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿರುದ್ಧ ಹೈ ಕಮಾಂಡ್‌ಗೆ ಯಾವುದೇ ಪತ್ರ ಹೋಗಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಂದಿನ ಮೂರುವರೆ ವರ್ಷಗಳ ಕಾಲ ಬಿಎಸ್‌ವೈ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಭವಿಷ್ಯ ನುಡಿದರು.
Vijaya Karnataka Web there is no difference with in bjp says dcm laxman savadi
ಬಿಎಸ್‌ವೈ ವಿರುದ್ಧ ಹೈಕಮಾಂಡ್‌ಗೆ ಯಾವುದೇ ಪತ್ರ ಹೋಗಿಲ್ಲ, ಸವದಿ ಸ್ಪಷ್ಟನೆ


ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಬಳಿಕ ಮಾತನಾಡಿದ ಲಕ್ಷ್ಮಣ ಸವದಿ, ಸಿಎಂ ಪರ ಹಾಗೂ ವಿರುದ್ಧವಾಗಿ ಹೈಕಮಾಂಡ್‌ಗೆ ಯಾರೂ ಪತ್ರವನ್ನು ಬರೆದಿಲ್ಲ. ಇದೆಲ್ಲಾ ಸುಳ್ಳು ಮಾಹಿತಿಗಳು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು. ಬಿಎಸ್‌ವೈ ದಕ್ಷಿಣ ಭಾರತದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದವರು. ಅವರು ನೂರು ಕಾಲ ಬಾಳಬೇಕು ಎಂದು ಶುಭ ಹಾರೈಸಿದರು.

ಬಿಜೆಪಿಯಲ್ಲಿ ನಿಲ್ಲದ ಅನಾಮಧೇಯ ಪತ್ರ ಸಮರ, ಇದೀಗ ಬಿಎಸ್‌ವೈ ಬಳಗದ ಸರದಿ

ಬಿಎಸ್‌ ಯಡಿಯೂರಪ್ಪ ವಿರುದ್ಧವಾಗಿ ಹೈ ಕಮಾಂಡ್‌ಗೆ ಕಲುಹಿಸಲಾಗಿದೆ ಎನ್ನಲಾಗಿರುವ ಪತ್ರವೊಂದು ಹರಿದಾಡುತ್ತಿದೆ. ಬಿಎಸ್‌ವೈ ವಯೋಸಹಜ ಬಳಲಿಕೆಯಿಂದಾಗಿ ಆಡಳಿತ ಯಂತ್ರದ ಮೇಲೆ ನಿಯಂತ್ರಣ ಸಾಧಿಸಲು ಆಗುತ್ತಿಲ್ಲ. ಅವರ ಬದಲಿಗೆ ಬೇರೆಯವರು ಸೂಪರ್‌ ಸಿಎಂನಂತೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ಪಕ್ಷಕ್ಕೆ ಭಾರಿ ನಷ್ಟವಾಗಲಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಸಮಸ್ಯೆಯಾಗುತ್ತದೆ ಎಂಬ ಸಾರಾಂಶದ ಪತ್ರದಲ್ಲಿದೆ ಎಂದು ಹೇಳಲಾಗುತ್ತಿದೆ.

ಬಿಎಸ್‌ವೈಗೆ ಶುಭಾಶಯಗಳ ಮಹಾಪೂರ, ಜನ್ಮದಿನಕ್ಕೆ ಹಾರೈಸಿದ ದೇವೇಗೌಡ

ಇದರ ಬೆನ್ನಲ್ಲೇ ಯಡಿಯೂರಪ್ಪ ಪರವಾಗಿಯೂ ಒಂದು ಪತ್ರ ಹೈಕಮಾಂಡ್‌ಗೆ ರವಾನೆಯಾಗಿದ್ದು ಅದೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಅನಾಮಧೇಯ ಪತ್ರಗಳು ಬಿಜೆಪಿಯಲ್ಲಿರುವ ಭಿನ್ನತವನ್ನು ಬಹಿರಂಗಗೊಳಿಸಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ