ಆ್ಯಪ್ನಗರ

ರೈತರನ್ನು ಆಕರ್ಷಿಸಿದ 24 ಲಕ್ಷ ರೂ. ಬೆಲೆಯ ಗಿರ್ ಹೋರಿ

ಕನಕಪುರ ತಾಲೂಕಿನ ಕೋಡಿಹಳ್ಳಿ ಮಧುವನ ಫಾರಂನವರು 24 ಲಕ್ಷ ರೂ. ತೆತ್ತು ಗಿರ್‌ ಹೋರಿ ಖರೀದಿಸಿದ್ದು, ರಾಜ್ಯದ ರೈತರಿಗೆ ಪರಿಚಯಿಸಲು ಮುಂದಾಗಿದ್ದಾರೆ ಎಂದು ಕೃಷಿ ವಿವಿ ಪಶು ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಬಿ.ಎಲ್‌. ಚಿದಾನಂದ್‌ ಮಾಹಿತಿ ನೀಡಿದ್ದಾರೆ.

Vijaya Karnataka 15 Nov 2018, 8:49 am
ಯಲಹಂಕ (ಬೆಂಗಳೂರು): ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಲಿರುವ ಕೃಷಿ ಮೇಳ (ನ.15ರಿಂದ 18ರವರೆಗೆ)ದಲ್ಲಿ 24 ಲಕ್ಷ ರೂ. ಬೆಲೆಯ ಗಿರ್‌ ಹೋರಿ ಪ್ರಮುಖ ಆಕರ್ಷಣೆಯಾಗಿರಲಿದೆ.
Vijaya Karnataka Web bull


ಕನಕಪುರ ತಾಲೂಕಿನ ಕೋಡಿಹಳ್ಳಿ ಮಧುವನ ಫಾರಂನವರು 24 ಲಕ್ಷ ರೂ. ತೆತ್ತು ಗಿರ್‌ ಹೋರಿ ಖರೀದಿಸಿದ್ದು, ರಾಜ್ಯದ ರೈತರಿಗೆ ಪರಿಚಯಿಸಲು ಮುಂದಾಗಿದ್ದಾರೆ ಎಂದು ಕೃಷಿ ವಿವಿ ಪಶು ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಬಿ.ಎಲ್‌. ಚಿದಾನಂದ್‌ ಮಾಹಿತಿ ನೀಡಿದ್ದಾರೆ.

ಪರಮೇಶ್ವರ ಎಂಬ ಹೆಸರಿನ ಹೋರಿಯನ್ನು ಮಧುವನ ಫಾರಂನವರು ಪ್ರದರ್ಶಿಸುತ್ತಿದ್ದು, ಇದರಿಂದ ದಿನವೊಂದಕ್ಕೆ 100 ಡೋಸ್‌ ವೀರ್ಯಾಣು ಸಂಗ್ರಹಿಸುತ್ತಿದ್ದಾರೆ. ಇದನ್ನು ಇತರೆ ಸ್ಥಳೀಯ ಹಸುಗಳ ಗರ್ಭಧಾರಣೆಗೆ ಬಳಸಿ ಕಸಿ ತಳಿಯ ಕರುವನ್ನು ಪಡೆಯಬಹುದಾಗಿದೆ.

''ಗುಜರಾತ್‌ನ ಗಿರ್‌ ಭಾಗದಲ್ಲಿ ಹೆಚ್ಚಾಗಿ ಕಂಡು ಬರುವ ಈ ತಳಿಯ ಗೋವುಗಳು ಹಲವು ವಿಶೇಷತೆ ಹೊಂದಿವೆ. ಈ ತಳಿಯ ಹಸುವಿನ ಹಾಲಿನಲ್ಲಿ ಔಷಧೀಯ ಗುಣ, ರೋಗನಿರೋಧಕ ಶಕ್ತಿ ಹೆಚ್ಚಿದೆ. 1200 ವರ್ಷದಿಂದಲೂ ಈ ತಳಿ ಅಸ್ತಿತ್ವದಲ್ಲಿದ್ದು, ಇದು ಪುರಾತನ ತಳಿಗಳಲ್ಲೊಂದಾಗಿದೆ. ಎತ್ತರವಾದ ಭುಜ, ಅಗಲವಾದ ಹಣೆ ಹುಬ್ಬು , ಜೋಲಾಡುವ ಕಣ್ಣು ಹೊಂದಿದ್ದು ನೋಡಲು ಆಕರ್ಷಕವಾಗಿರುತ್ತವೆ. ಹೆಚ್ಚು ಹಾಲು ಕೊಡುವ ತಳಿಯಲ್ಲಿ ಇದು ಎರಡನೆಯದು. ದಿನಕ್ಕೆ 12ರಿಂದ 14ಲೀಟರ್‌ ಹಾಲು ಕೊಡುವ ಸಾಮರ್ಥ್ಯ‌ ಇದೆ. ಈ ಜಾತಿಯ ದೊಡ್ಡಗಾತ್ರದ ಹಸುಗಳು 400-450 ಕೆ.ಜಿ. ಹಾಗೂ ಹೋರಿಗಳು 550 ರಿಂದ 650 ಕೆ.ಜಿ. ತೂಕವಿರುತ್ತದೆ. ಈ ತಳಿಯ ಹಸುವಿನ ಹಾಲಿಗೆ ಪ್ರತಿ ಲೀಟರ್‌ 50ರಿಂದ 60 ರೂ ಬೇಡಿಕೆ ಇದೆ. ಹಸುವಿನ ತುಪ್ಪಕ್ಕೆ ಕೆಜಿ ಗೆ 1200 ರೂ. ದರವಿದೆ,'' ಎಂದು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ