ಆ್ಯಪ್ನಗರ

ರಾಜ್ಯದಲ್ಲಿ ಶೇ. 47ರಷ್ಟು ಮಂದಿಗೆ ಕೊರೊನಾ ಲಸಿಕೆ; ಕೋವಿಶೀಲ್ಡ್ ಪಡೆದ ಕೆಲವರಿಗೆ ಆಯಾಸ

ರಾಜ್ಯದಲ್ಲಿ ಶೇ. 47ರಷ್ಟು ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಒಟ್ಟು 55,550 ಸಿಬ್ಬಂದಿಗಳು ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದ ಕೆಲವರಿಗೆ ಸ್ವಲ್ಪ ಬಳಲಿಕೆ ಕಂಡು ಬಂದಿತ್ತಾದರೂ, ಕೆಲ ಸಮಯದ ವಿಶ್ರಾಂತಿ ಬಳಿಕ ಚೇತರಿಸಿಕೊಂಡಿದ್ದಾರೆ.

Vijaya Karnataka Web 19 Jan 2021, 8:28 am
ಬೆಂಗಳೂರು: ಕೊರೊನಾ ಲಸಿಕೆ ಅಭಿಯಾನದ ಮೂರನೇ ದಿನವಾದ ಸೋಮವಾರ ರಾಜ್ಯದಲ್ಲಿ 1,000 ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿದ್ದು, 38,242 ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಇದರೊಂದಿಗೆ ಇದುವರೆಗೆ ಒಟ್ಟು 55,550 ಸಿಬ್ಬಂದಿ ಲಸಿಕೆ ಪಡೆದಂತಾಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಸೋಮವಾರ ಸರಕಾರಿ, ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ರಾಜ್ಯಾದ್ಯಂತ 1,017 ಕೇಂದ್ರಗಳಿಂದ 81,169 ಸಿಬ್ಬಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಆದರೆ, ಒಂದು ಸಾವಿರ ಕೇಂದ್ರಗಳಲ್ಲಿ ಅಭಿಯಾನ ಕೈಗೊಳ್ಳಲಾಗಿದ್ದು, 38,242 (ಶೇ. 47.08) ಮಂದಿಗೆ ಲಸಿಕೆ ಹಾಕಲಾಗಿದೆ.
ಭಾರತದ ಕೋವಿಶೀಲ್ಡ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ ನೇಪಾಳ!

ಅಭಿಯಾನದ ಮೊದಲ ದಿನ ರಾಜ್ಯಾದ್ಯಂತ 243 ಆರೋಗ್ಯ ಕೇಂದ್ರಗಳಲ್ಲಿ 13,609 ಸಿಬ್ಬಂದಿ, ಎರಡನೇ ದಿನದಂದು ಕೇವಲ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಿಸಲಾಗಿದ್ದು, 3,699 ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿದ್ದರು.

ಮೊದಲ ದಿನ ಲಸಿಕೆ ಪಡೆದವರ ಒಟ್ಟು ಸಂಖ್ಯೆ ಎಷ್ಟು?: ರಾಜ್ಯವಾರು ಪಟ್ಟಿ ಇಂತಿದೆ!
ಲಸಿಕೆ ಪಡೆದ ಕೆಲವರಿಗೆ ಆಯಾಸ
ಬೆಂಗಳೂರಿನ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ 548 ಫಲಾನುಭವಿಗಳಿಗೆ, ಬೆಂಗಳೂರಿನ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 70 ಮಂದಿ ಲಸಿಕೆ ಪಡೆದುಕೊಂಡರು. ಇವರಲ್ಲಿ ಕೆಲವರಿಗೆ ಸ್ವಲ್ಪ ಬಳಲಿಕೆ ಕಂಡು ಬಂದಿತ್ತಾದರೂ, ಕೆಲ ಸಮಯದ ವಿಶ್ರಾಂತಿ ಬಳಿಕ ಚೇತರಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ