ಆ್ಯಪ್ನಗರ

ಕೊರೊನಾ ಯುದ್ಧದಲ್ಲಿ ಮಡಿದ ವೈದ್ಯರು ಹುತಾತ್ಮ ಯೋಧರಿಗೆ ಸಮಾನ: ಡಾ. ಕೆ. ಸುಧಾಕರ್‌

ವೈದ್ಯರು ಇಲ್ಲದಿದ್ದರೆ, ನಾವು ಭೂಮಿಯಲ್ಲಿ ಎಲ್ಲಿಯೂ ಇರಲು ಸಾಧ್ಯವಾಗುವುದಿಲ್ಲ. ಸಮಾಜಕ್ಕೆ ವೈದ್ಯರು ನೀಡುತ್ತಿರುವ ಸೇವೆಗೆ ಸರಿಸಾಟಿಯಿಲ್ಲ. ಇವರಿಗೂ ಕೂಡ ಹುತಾತ್ಮ ಯೋಧರಿಗೆ ಸಿಗುವ ಗೌರವ ಸಿಗಬೇಕು ಎಂಬ ಬೇಡಿಕೆ ಸಚಿವ ಡಾ. ಕೆ. ಸುಧಾಕರ್‌ ಬೆಂಬಲಿಸಿದ್ದಾರೆ.

Vijaya Karnataka Web 31 Aug 2020, 4:30 pm
ಬೆಂಗಳೂರು: ವೈದ್ಯರು ಇಲ್ಲದಿದ್ದರೆ, ನಾವು ಭೂಮಿಯಲ್ಲಿ ಎಲ್ಲಿಯೂ ಇರಲು ಸಾಧ್ಯವಾಗುವುದಿಲ್ಲ. ಸಮಾಜಕ್ಕೆ ವೈದ್ಯರು ನೀಡುತ್ತಿರುವ ಸೇವೆಗೆ ಸರಿಸಾಟಿಯಿಲ್ಲ. ಇವರಿಗೂ ಕೂಡ ಹುತಾತ್ಮ ಯೋಧರಿಗೆ ಸಿಗುವ ಗೌರವ ಸಿಗಬೇಕು ಎಂಬ ಬೇಡಿಕೆ ಸಚಿವ ಡಾ. ಕೆ. ಸುಧಾಕರ್‌ ಬೆಂಬಲಿಸಿಸಿದ್ದಾರೆ.
Vijaya Karnataka Web doctor


ಕೊರೊನಾವೈರಸ್‌ನಿಂದ ಮೃತಪಟ್ಟ ವೈದ್ಯರಿಗೆ, ಸಶಸ್ತ್ರ ಪಡೆಗಳ ಹುತಾತ್ಮರಿಗೆ ನಿಡುವ ಸಮಾನ ಗೌರವ ನೀಡುವ ಕುರಿತು 'ಭಾರತೀಯ ವೈದ್ಯಕೀಯ ಸಂಘದ ಬೇಡಿಕೆಯನ್ನು ನಾನು ಬೆಂಬಲಿಸುತ್ತೇನೆ. ಎಂದು ವೈದ್ಯಕ್ಷೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಟ್ವೀಟ್‌ ಮಾಡಿದ್ದಾರೆ.



ತಮ್ಮ ಪ್ರಾಣದ ಹಂಗನ್ನೂ ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸರಿಸಾಟಿಯಿಲ್ಲಿ. ಈ ಸಂದರ್ಭದಲ್ಲಿ ವೈದ್ಯರೂ ಕೂಡ ಯೋಧರಿದ್ದಂತೆಯೇ. ಯೋಧರು ಗಡಿಯಲ್ಲಿ ವೈರಿಗಳ ವಿರುದ್ಧ ಹೋರಾಡಿದರೆ, ವೈದ್ಯರು, ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಈ ಹೋರಾಟದಲ್ಲಿ ಕೆಲ ವೈದ್ಯರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮಡಿದ ವೈದ್ಯರಿಗೆ ಕೂಡ 'ಹುತಾತ್ಮ ಯೋಧರಿಗೆ ನೀಡುವ ಸಮಾನ ಗೌರವನ್ನು ನೀಡುವುದು ನ್ಯಾಯಸಮ್ಮತ.

ಕೊರೊನಾ ಮೊದಲು ಪತ್ತೆ ಮಾಡಿ ಎಚ್ಚರಿಕೆಯ ಕರೆ ಗಂಟೆ ಬಾರಿಸಿದ್ದ ವೈದ್ಯ ಕೊರೊನಾಗೆ ಬಲಿ

ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವು ವೈದ್ಯರು ತಿಂಗಳುಗಟ್ಟಲೆ ಮನೆಗೂ ಹೋಗದಂತೆ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕೊರೊನಾ ಸೋಂಕಿನ ನಡುವೆಯೇ ಹೋರಾಡುತ್ತಿರುವ ಈ ವೈದ್ಯರೂ ಕೂಡ ಯೋಧರೇ ಆಗಿದ್ದಾರೆ. ಗಡಿ ಕಾಯುವ ಯೋಧ ಕಣ್ಣಿಗೆ ಕಾಣುವ ವೈರಿಗಳ ಜತೆ ಹೋರಾಡಿದರೆ, ವೈದ್ಯರು ಕಣ್ಣಿಗೆ ವೈರಸ್‌ ಜತೆಗೆ ಗುದ್ದಾಡುತ್ತಿದ್ದಾರೆ. ಇವರಿಗೆ ಒಂದು ಗೌರವದ ಸೆಲ್ಯೂಟ್‌ ಸಲ್ಲಬೇಕಲ್ಲವೇ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ