ಆ್ಯಪ್ನಗರ

‘ವಿವಿ ಕುಲಪತಿ ಆಯ್ಕೆ ಶೋಧನಾ ಸಮಿತಿಗೆ ವಿಶ್ರಾಂತ ಕುಲಪತಿಗಳನ್ನು ನೇಮಕ ಮಾಡಿ

ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಆಯ್ಕೆ ಮಾಡಲು ಈ ಹಿಂದಿನ ಪದ್ಧತಿಯಂತೆ ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳು ಹಾಗೂ ಅನುಭವಿ ಆಡಳಿತಗಾರರನ್ನೊಳಗೊಂಡ ಶೋಧನಾ ಸಮಿತಿಯನ್ನು ರಚನೆ ಮಾಡುವಂತೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ ಒತ್ತಾಯಿಸಿದೆ.

Vijaya Karnataka 16 Jun 2019, 5:00 am
ಬೆಂಗಳೂರು : ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಆಯ್ಕೆ ಮಾಡಲು ಈ ಹಿಂದಿನ ಪದ್ಧತಿಯಂತೆ ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳು ಹಾಗೂ ಅನುಭವಿ ಆಡಳಿತಗಾರರನ್ನೊಳಗೊಂಡ ಶೋಧನಾ ಸಮಿತಿಯನ್ನು ರಚನೆ ಮಾಡುವಂತೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ ಒತ್ತಾಯಿಸಿದೆ.
Vijaya Karnataka Web university finding committee request
‘ವಿವಿ ಕುಲಪತಿ ಆಯ್ಕೆ ಶೋಧನಾ ಸಮಿತಿಗೆ ವಿಶ್ರಾಂತ ಕುಲಪತಿಗಳನ್ನು ನೇಮಕ ಮಾಡಿ


ಕುಲಪತಿಗಳ ಆಯ್ಕೆಯಲ್ಲಿ ಶೋಧನಾ ಸಮಿತಿಯ ಪಾತ್ರ ಮಹತ್ವದ್ದಾಗಿದೆ. ಈ ಸಮಿತಿಯಲ್ಲಿ ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳು ಹಾಗೂ ನುರಿತ ಆಡಳಿತಗಾರರಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪರಿಪಾಠಕ್ಕೆ ತಿಲಾಂಜಲಿಯಿಟ್ಟಿದ್ದು, ನಿಯಮಗಳನ್ನು ಉಲ್ಲಂಘಿಸಿ ಕುಲಪತಿಗಳ ಆಯ್ಕೆ ನಡೆಯುತ್ತಿದೆ.

ರಾಜ್ಯದ ಒಂದು ವಿಶ್ವವಿದ್ಯಾಲಯವೊಂದ ಕುಲಪತಿಗಳ ಆಯ್ಕೆಗೆ ಸಂಬಂಧಿಸಿದಂತೆ ಶೋಧನಾ ಸಮಿತಿಯ ಅಧ್ಯಕ್ಷರನ್ನಾಗಿ, ಇತ್ತೀಚೆಗಷ್ಟೇ ಕುಲಪತಿಗಳಾಗಿ ನೇಮಕಗೊಂಡವರನ್ನು ನೇಮಕ ಮಾಡಲಾಗಿತ್ತು. ಇದು, ವಿಶ್ವವಿದ್ಯಾಲಯಗಳ ನಿಯಮ ಉಲ್ಲಂಘನೆ ಸಹ ಆಗಿದೆ. ಆದ್ದರಿಂದ ಶೋಧನಾ ಸಮಿತಿಯಲ್ಲಿ ಕುಲಪತಿಗಳ ಶ್ರೇಣಿಗಿಂತ ಕುಲಪತಿಗಳ ಶ್ರೇಣಿಗಿಂತ ಕಡಿಮೆ ಶ್ರೇಣಿಯವರನ್ನು ಸದಸ್ಯರನ್ನಾಗಿ ನೇಮಕ ಮಾಡುವುದು ತಪ್ಪಬೇಕು ಎಂದು ವೇದಿಕೆ ಆಗ್ರಹಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ