ಆ್ಯಪ್ನಗರ

ದ್ವಿತೀಯ ಪಿಯು ಮೌಲ್ಯಮಾಪನ ಭತ್ಯೆ ಬಿಡುಗಡೆ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ನಿರ್ವಹಿಸಿದ ಮೌಲ್ಯಮಾಪಕರಿಗೆ ಪ್ರಯಾಣ ಭತ್ಯೆ, ದಿನ ಭತ್ಯೆ ಹಾಗೂ 2019ರ ಜುಲೈನ ಪೂರಕ ಪರೀಕ್ಷೆಗಳ ವೆಚ್ಚಗಳನ್ನು ಭರಿಸಲು ಒಟ್ಟು 54.58 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

Vijaya Karnataka 16 Jun 2019, 5:00 am
ಬೆಂಗಳೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ನಿರ್ವಹಿಸಿದ ಮೌಲ್ಯಮಾಪಕರಿಗೆ ಪ್ರಯಾಣ ಭತ್ಯೆ, ದಿನ ಭತ್ಯೆ ಹಾಗೂ 2019ರ ಜುಲೈನ ಪೂರಕ ಪರೀಕ್ಷೆಗಳ ವೆಚ್ಚಗಳನ್ನು ಭರಿಸಲು ಒಟ್ಟು 54.58 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
Vijaya Karnataka Web valuation arriares release
ದ್ವಿತೀಯ ಪಿಯು ಮೌಲ್ಯಮಾಪನ ಭತ್ಯೆ ಬಿಡುಗಡೆ


ಪೂರಕ ವೆಚ್ಚಗಳ ಶೀರ್ಷಿಕೆ ಅಡಿಯಲ್ಲಿ ಒಟ್ಟು 16.71 ಕೋಟಿ ರೂ., ಪ್ರಯಾಣ ಭತ್ಯೆ ಶೀರ್ಷಿಕೆಯಡಿ 18.75 ಕೋಟಿ ರೂ., ಹಾಗೂ ಸಾಮಗ್ರಿ ಮತ್ತು ಸರಬರಾಜು ಶೀರ್ಷಿಕೆಯಡಿ 19.12 ಕೋಟಿ ರೂ.ಗಳಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷಾ ವೆಚ್ಚಗಳಿಗಾಗಿ ಈ ಬಾರಿ ಸರಕಾರ ಒಟ್ಟು 72.78 ಕೋಟಿ ರೂ. ಅನುದಾನವನ್ನು ನಿಗದಿ ಮಾಡಿತ್ತು. ಮೊದಲ ತ್ರೈಮಾಸಿಕ ಕಂತಿನಲ್ಲಿ ಒಟ್ಟು 18.19 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ