ಆ್ಯಪ್ನಗರ

ಬಿಜೆಪಿ ಹೈಕಮಾಂಡ್‌ ನೀಡಿದ ಶಾಕ್‌ ಎಫೆಕ್ಟ್‌; ಪರಿಷತ್‌ ಟಿಕೆಟ್‌ಗಾಗಿ ಬಿಎಸ್‌ವೈಗೆ ಆಕಾಂಕ್ಷಿಗಳ ಒತ್ತಡ

ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಬಿಜೆಪಿ ಹೈಕಮಾಂಡ್‌ ನೀಡಿದ ಭರ್ಜರಿ ಶಾಕ್‌ ಹಿನ್ನೆಲೆಯಲ್ಲಿ ವಿಧಾನಪರಿಷತ್‌ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳು ಬಿ.ಎಸ್ ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ.

Vijaya Karnataka Web 10 Jun 2020, 4:38 pm
ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಸಾಮಾನ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ರಾಜ್ಯ ಬಿಜೆಪಿಗೆ ಹೈಕಮಾಂಡ್‌ ನೀಡಿದ ಶಾಕ್‌ ಬೆನ್ನಲ್ಲೇ ವಿಧಾನಪರಿಷತ್ ಚುನಾವಣೆಗೆ ಟಿಕೆಟ್‌ ಪಡೆಯಲು ಆಕಾಂಕ್ಷಿಗಳು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಒತ್ತಡ ಹೇರುತ್ತಿದ್ದಾರೆ.
Vijaya Karnataka Web bs yeddyurappa


ರಾಜ್ಯಸಭೆ ಚುನಾವಣೆಗೆ ದೊಡ್ಡ ಮಟ್ಟದಲ್ಲಿ ಆಕಾಂಕ್ಷಿಗಳು ಇದ್ದರು. ಆದರೆ ಹೈಕಮಾಂಡ್‌ ಕೈಗೊಂಡ ತೀರ್ಮಾನ ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ. ಇದೀಗ ವಿಧಾನಪರಿಷತ್ ಚುನಾವಣೆ ಘೋಷಣೆಯಾಗಿದ್ದು ರಾಜ್ಯಸಭೆ ಮಾದರಿಯಲ್ಲಿ ಪರಿಷತ್‌ ಆಯ್ಕೆ ಕೂಡಾ ನಡೆಯಬಹುದಾ ಎಂಬ ಆತಂಕ ಮನೆ ಮಾಡಿದೆ.

ಪರಿಣಾಮ ಟಿಕೆಟ್‌ ಆಕಾಂಕ್ಷಿಗಳಾದ ಎಂಟಿಬಿ ನಾಗರಾಜ್‌, ಎಚ್‌. ವಿಶ್ವನಾಥ್‌, ಆರ್‌. ಶಂಕರ್‌ ಬಿಎಸ್‌ ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಮೂವರ ರಾಜಕೀಯ ಭವಿಷ್ಯ ಕೂಡಾ ಬಿಎಸ್‌ವೈ ನಿರ್ಧಾರದ ಮೇಲೆ ನಿಂತಿದೆ. ಪರಿಷತ್‌ ಚುನಾವಣೆಯಲ್ಲಿ ವಲಸಿಗರಿಗೆ ಮಣೆ ಹಾಕುವ ನಿರ್ಧಾರವನ್ನು ಬಿಎಸ್‌ವೈ ಕೈಗೊಂಡಿದ್ದಾರೆ. ಆದರೆ ಹೈಕಮಾಂಡ್‌ ನಿರ್ಧಾರ ಬೇರೆಯಾದರೆ ಸಂಕಷ್ಟ ಖಚಿತ.

ರಾಜ್ಯ ಸರ್ಕಾರದ ಅನುಮತಿ ಬಳಿಕವಷ್ಟೇ ಪದಗ್ರಹಣ ಕಾರ್ಯಕ್ರಮ, ಡಿಕೆಶಿ ಸ್ಪಷ್ಟನೆ

ಈ ಹಿನ್ನೆಲೆಯಲ್ಲಿ ರಾಜ್ಯ ರಾಜ್ಯಕೀಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧಾನಪರಿಷತ್ ಅಭ್ಯರ್ಥಿ ಆಯ್ಕೆ ವಿಚಾರವನ್ನು ಸಂಪೂರ್ಣವಾಗಿ ಬಿಎಸ್‌ ಯಡಿಯೂರಪ್ಪ ಅವರಿಗೆ ನೀಡಲಾಗಿದೆ.

ಆದರೆ ಹೈಕಮಾಂಡ್‌ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುವುದು ಕೂಡಾ ಇಲ್ಲಿ ಮಹತ್ವ ಪಡೆದುಕೊಂಡಿದೆ. ಒಂದು ವೇಳೆ ಬಿಎಸ್‌ವೈ ನಿರ್ಧಾರಕ್ಕೆ ಭಿನ್ನವಾದ ನಿಲುವನ್ನು ಹೈಕಮಾಂಡ್‌ ಕೈಗೊಂಡಿದ್ದೇ ಆದಲ್ಲಿ ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ. ಅಲ್ಲದೆ ಬಿಎಸ್‌ವೈ ನಾಯಕತ್ವದ ಬದಲಾವಣೆಯ ಸ್ಪಷ್ಟ ಸೂಚನೆ ಇದಾಗಿದೆ ಎಂಬುವುದು ಅಧಿಕೃತಗೊಂಡ ಹಾಗೆ.

ಹೈಕಮಾಂಡ್ ಶಾಕ್‌ನಿಂದ ಬಿಜೆಪಿ ವಲಸಿಗರಿಗೆ ಶುರುವಾಗಿದೆ ನಡುಕ

ಈ ನಿಟ್ಟಿನಲ್ಲಿ ಪರಿಷತ್‌ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆಕಾಂಕ್ಷಿಗಳು ರಾಜ್ಯ ಮಟ್ಟದಲ್ಲೇ ತೀವ್ರ ಲಾಬಿ ನಡೆಸುತ್ತಿದ್ದಾರೆ. ಆದರೆ ಅಂತಿಮ ನಿರ್ಧಾರ ಏನು ಎಂಬುವುದು ಸದ್ಯದ ಕುತೂಹಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ