ಆ್ಯಪ್ನಗರ

ಲಕ್ಷ್ಮಣ ಸವದಿಗೆ ಮೇಲ್ಮನೆ ಟಿಕೆಟ್‌, ಬುಧವಾರ ನಾಮಪತ್ರ ಸಲ್ಲಿಕೆ

​​ಸಂಪುಟದಲ್ಲಿರುವ ಮೂವರು ಉಪ ಮುಖ್ಯಮಂತ್ರಿಗಳನ್ನು ಮುಂದುವರಿಸುವಂತೆ ಸೂಚಿಸಿ ಸವದಿ ಅವರನ್ನು ಮೇಲ್ಮನೆ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಸವದಿ ಅವರ ಹಾದಿ ಸುಗಮವಾಗಿದೆ.

Vijaya Karnataka 31 Jan 2020, 7:55 pm
ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಫೆ. 17 ರಂದು ನಡೆಯುವ ಉಪ ಚುನಾವಣೆಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಬಹುತೇಕ ಅವರು ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ.
Vijaya Karnataka Web Laxman Savadi


ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಶುಕ್ರವಾರ ಸಂಸತ್‌ ಭವನದಲ್ಲಿ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಿದ ವೇಳೆ ಮೇಲ್ಮನೆ ಚುನಾವಣೆಯ ಅಭ್ಯರ್ಥಿ ವಿಷಯವೂ ಚರ್ಚೆಗೆ ಬಂದ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಅವರ ಹೆಸರನ್ನು ವರಿಷ್ಠರು ಅನುಮೋದಿಸಿದ್ದಾರೆ.

ಸಂಪುಟದಲ್ಲಿರುವ ಮೂವರು ಉಪ ಮುಖ್ಯಮಂತ್ರಿಗಳನ್ನು ಮುಂದುವರಿಸುವಂತೆ ಸೂಚಿಸಿ ಸವದಿ ಅವರನ್ನು ಮೇಲ್ಮನೆ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಸವದಿ ಅವರ ಹಾದಿ ಸುಗಮವಾಗಿದೆ.

ಯಾವುದೇ ಸದನದ ಸದಸ್ಯರಲ್ಲದ ಸವದಿ ಅವರು ಯಡಿಯೂರಪ್ಪ ಸಂಪುಟಕ್ಕೆ ಕಳೆದ ಆಗಸ್ಟ್‌ 26 ರಂದು ಸೇರ್ಪಡೆಯಾಗಿದ್ದರಿಂದ ಆರು ತಿಂಗಳ ಒಳಗೆ ಅಂದರೆ ಫೆ. 26 ರ ಒಳಗೆ ಸದಸ್ಯರಾಗುವುದು ಅನಿವಾರ್ಯವಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಶಿವಾಜಿನಗರ ಕ್ಷೇತ್ರದ ಉಪಚುನಾವಣೆಯಲ್ಲಿ ರಿಜ್ವಾನ್‌ ಅರ್ಷದ್‌ ಜಯಗಳಿಸಿದ್ದರಿಂದ ಅವರು ಪ್ರತಿನಿಧಿಸುತ್ತಿದ್ದ ಮೇಲ್ಮನೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಿಜ್ವಾನ್‌ ಗೆಲುವು ಮತ್ತು ರಾಜೀನಾಮೆಯಿಂದಾಗಿ ಬಿಜೆಪಿಯ ಇನ್ನೊಂದು ದೊಡ್ಡ ತಲೆ ನೋವು ಬಗೆಹರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ