ಆ್ಯಪ್ನಗರ

ವಿನಯ್‌ ಅಪಹರಣ, ಕೊಲೆ ಯತ್ನ ಪ್ರಕರಣ: ರಾಜೇಂದ್ರ ಜಾಮೀನು ರದ್ದಿಗೆ ಪೊಲೀಸರ ಅರ್ಜಿ; ನೋಟಿಸ್‌ ಜಾರಿ

ಬಿಜೆಪಿ ನಾಯಕರೊಬ್ಬರ ಆಪ್ತ ಸಹಾಯಕರಾಗಿದ್ದ ವಿನಯ್‌ ಕುಮಾರ್‌ ಅಪಹರಣ ಹಾಗೂ ಕೊಲೆ ಯತ್ನ ಪ್ರಕರಣದ ಎರಡನೇ ಆರೋಪಿಯಾದ ಬಿಜೆಪಿಯ ಬೆಂಗಳೂರು ನಗರ ಘಟಕದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ರಾಜೇಂದ್ರ ಅರಸ್‌ ನಿರೀಕ್ಷ ಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಮಹಾಲಕ್ಷ್ಮೇ ಲೇಔಟ್‌ ಪೊಲೀಸರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Vijaya Karnataka Web 28 Jul 2018, 4:00 am
ಬೆಂಗಳೂರು:ಬಿಜೆಪಿ ನಾಯಕರೊಬ್ಬರ ಆಪ್ತ ಸಹಾಯಕರಾಗಿದ್ದ ವಿನಯ್‌ ಕುಮಾರ್‌ ಅಪಹರಣ ಹಾಗೂ ಕೊಲೆ ಯತ್ನ ಪ್ರಕರಣದ ಎರಡನೇ ಆರೋಪಿಯಾದ ಬಿಜೆಪಿಯ ಬೆಂಗಳೂರು ನಗರ ಘಟಕದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ರಾಜೇಂದ್ರ ಅರಸ್‌ ನಿರೀಕ್ಷ ಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಮಹಾಲಕ್ಷ್ಮೇ ಲೇಔಟ್‌ ಪೊಲೀಸರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Vijaya Karnataka Web vinay kidnapping murder case rajendras bail plea for police custody notice enforcement
ವಿನಯ್‌ ಅಪಹರಣ, ಕೊಲೆ ಯತ್ನ ಪ್ರಕರಣ: ರಾಜೇಂದ್ರ ಜಾಮೀನು ರದ್ದಿಗೆ ಪೊಲೀಸರ ಅರ್ಜಿ; ನೋಟಿಸ್‌ ಜಾರಿ


ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್‌. ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ ಪ್ರತಿವಾದಿ ಆರೋಪಿ ರಾಜೇಂದ್ರಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

''ಆರೋಪಿಯು ಪ್ರಭಾವಿ ವ್ಯಕ್ತಿಯಾಗಿದ್ದು ಅಧೀನ ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸುತ್ತಿದ್ದಾರೆ, ತನಿಖೆಗೆ ಸಹಕರಿಸುತ್ತಿಲ್ಲ. ಸಾಕ್ಷ ್ಯನಾಶಕ್ಕೆ ಪ್ರಯತ್ನಿಸುತ್ತಾ ತನಿಖೆಯ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಹಾಗಾಗಿ ಅಧೀನ ನ್ಯಾಯಾಲಯ ಅವರಿಗೆ ನೀಡಿರುವ ನಿರೀಕ್ಷ ಣಾ ಜಾಮೀನು ರದ್ದುಗೊಳಿಸಬೇಕು' ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. 2017ರ ಮೇ 11ರಂದು ವಿನಯ್‌ ಕುಮಾರ್‌ ಅಪಹರಣ ಪ್ರಯತ್ನ ನಡೆಸಲಾಗಿತ್ತು. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ ಬಳಿ ಗುಂಪೊಂದು ಅವರನ್ನು ಅಡ್ಡಗಟ್ಟಿ, ಅಪಹರಿಸಲು ಯತ್ನಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಬಿ.ಎಸ್‌.ಯಡಿಯೂರಪ್ಪ ಆಪ್ತ ಸಹಾಯಕನಾಗಿದ್ದ ಸಂತೋಷ್‌ ಪ್ರಕರಣದ ಮೊದಲನೇ ಆರೋಪಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ