ಆ್ಯಪ್ನಗರ

ಮತದಾನ ಜಾಗೃತಿಗೆ ಕೆಎಸ್‌ಆರ್‌ಟಿಸಿ ಸಾಥ್‌

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತದಾನ ...

Vijaya Karnataka 18 Mar 2019, 5:00 am
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತದಾನ ಜಾಗೃತಿಗೆ ಕೈಜೋಡಿಸಿದ್ದು, ಬಸ್‌ ಟಿಕೆಟ್‌ ಹಾಗೂ ನಿಲ್ದಾಣಗಳ ಡ್ಯಾಶ್‌ಬೋರ್ಡ್‌ಗಳಲ್ಲಿ ಅರಿವಿನ ಸಂದೇಶ ಬಿತ್ತರಿಸಿ ಗಮನ ಸೆಳೆದಿದೆ.
Vijaya Karnataka Web BNG-1703-2-2-KSRTC


ಬೆಂಗಳೂರು, ಮೈಸೂರು ಸೇರಿದಂತೆ ನಾನಾ ನಗರ/ಪಟ್ಟಣಗಳಿಂದ ಹೊರಡುವ ಬಹುತೇಕ ಎಲ್ಲಾ ಮಾರ್ಗಗಳಲ್ಲೂ ಮತದಾನದ ಜಾಗೃತಿಗೆ ಚಾಲನೆ ದೊರೆತಿದೆ. ಚುನಾವಣೆಯ ಆಯಾ ಹಂತದ ಮಹತ್ವ ಆಧರಿಸಿ ನಿರ್ದಿಷ್ಟ ಸಂದೇಶಗಳನ್ನು ಬಿತ್ತರಿಸಿ ಪ್ರಯಾಣಿಕರಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯ ನಡೆದಿದೆ.

ರಾಜ್ಯದಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ನಿತ್ಯ 25 ಲಕ್ಷ ಮಂದಿ ಪ್ರಯಾಣಿಸುತ್ತಾರೆ. 17 ವಿಭಾಗ ಹಾಗೂ 83 ಡಿಪೊಗಳ ವ್ಯಾಪ್ತಿಯಲ್ಲಿನ ಆಯಾ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿತರಿಸುವ ಟಿಕೆಟ್‌ ಮೇಲೆ ಜಾಗೃತಿ ಬರಹ ಮೂಡಿಸಲಾಗಿದೆ. ಸದ್ಯ 'ನೀವು ನಿಮ್ಮ ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿದ್ದೀರಾ' ಎಂಬ ಜಾಗೃತಿಗೆ ಆದ್ಯತೆ ನೀಡಲಾಗಿದೆ. ಮತದಾನ ಹತ್ತಿರವಾಗುತ್ತಿದ್ದಂತೆಯೇ ಇನ್ನಿತರ ಬಗೆಯ ಅರಿವು ಸಂದೇಶಗಳನ್ನು ಟಿಕೆಟ್‌ ಹಾಗೂ ಡ್ಯಾಶ್‌ಬೋರ್ಡ್‌ಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ವೇಳೆಯೂ ಇಂಥದ್ದೇ ಜಾಗೃತಿ ಕಾರ್ಯಕ್ರಮವನ್ನು ಕೆಎಸ್‌ಆರ್‌ಟಿಸಿ ಕೈಗೊಂಡಿತ್ತು. ಬಿಎಂಟಿಸಿ ಕೂಡ ಟಿಕೆಟ್‌ಗಳ ಮೇಲೆ ಮತದಾನದ ಜಾಗೃತಿ ಮೂಡಿಸಲು ಮುಂದಾಗಿದೆ.

ಗಮನಿಸುವುದು: ಚಿತ್ರ ಇದೆ.

===============

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ