ಆ್ಯಪ್ನಗರ

ವೃಂದಾವನ ರಕ್ಷಣೆ ಸರಕಾರದ ಹೊಣೆ: ಪುತ್ತಿಗೆಶ್ರೀ

ವ್ಯಾಸರಾಜರ ವೃಂದಾವನಕ್ಕೆ ಹಾನಿಯಿಂದ ಹಿಂದೂ ಸಮಾಜ, ದೇಶಕ್ಕೆ ಅವಮಾನವಾಗಿದೆ. ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಠಾಧೀಶರು ಆಗ್ರಹಿಸಿದರು.

Vijaya Karnataka Web 18 Jul 2019, 6:09 pm
ಉಡುಪಿ: ವ್ಯಾಸರಾಜರ ವೃಂದಾವನ ಧ್ವಂಸಗೊಳಿಸಿದ ಆಘಾತಕಾರಿ ಸುದ್ದಿ ಕೇಳಿ ನಮ್ಮ ಮನಸ್ಸಿಗೆ ಅತ್ಯಂತ ನೋವಾಗಿದೆ ಎಂದು ಉಡುಪಿ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.
Vijaya Karnataka Web ಕೊಪ್ಪಳ ವೃಂದಾವನ
ಕೊಪ್ಪಳ ವೃಂದಾವನ


ವ್ಯಾಸರಾಜರ ವೃಂದಾವನ ಭಕ್ತಿ ಜತೆಗೆ ಕರ್ನಾಟಕ ರಾಜ್ಯದ ಹೆಮ್ಮೆಯ ಸಂಕೇತ. ರಾಜ್ಯವನ್ನಾಳಿದ ವ್ಯಾಸರಾಜರ ವೃಂದಾವನ ರಕ್ಷಣೆ ಸರಕಾರದ ಕರ್ತವ್ಯ ಹೊಣೆ. ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಪಸ್ಸಿ, ವಿದ್ವಾಂಸ ಮಾತ್ರವಲ್ಲ ಆಧ್ಯಾತ್ಮಿಕ ಸಮಾಜಕ್ಕೆ ಕೊಡುಗೆ ನೀಡಿದ ಶ್ರೀವ್ಯಾಸರಾಜರ ವೃಂದಾವನ ಧ್ವಂಸ ಪ್ರಕರಣದ ತನಿಖೆ ನಡೆಸಿ, ಸೂಕ್ತ ಕ್ರಮ, ಪರಿಹಾರದ ಜತೆಗೆ ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಪೇಜಾವರಶ್ರೀ ಖಂಡನೆ

ವ್ಯಾಸರಾಜರ ವೃಂದಾವನದ ಮೇಲಾದ ಧಕ್ಕೆ ಮಾಧ್ವ ಸಮಾಜ, ಹಿಂದೂ ಸಮಾಜ ಮಾತ್ರವಲ್ಲ ಕರ್ನಾಟಕಕ್ಕೆ ದೊಡ್ಡ ಆಘಾತ ತಂದಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ವಿಜಯ ನಗರ ಸಾಮ್ರಾಜ್ಯದ ರಾಜನಿಗೆ ಎದುರಾದ ಆಪತ್ತು ನಿವಾರಿಸಿ, ಕರ್ನಾಟಕ ರಾಜ್ಯ ಸಂರಕ್ಷಿಸಿದ ದೊಡ್ಡ ಯೋಗಿಗಳಾದ ವ್ಯಾಸರಾಜರು ದಾಸ ಸಾಹಿತ್ಯ ಪ್ರವರ್ತಕ, ಮಾಧ್ವ ಸಮಾಜದ ದೊಡ್ಡ ಗುರುಗಳಾಗಿದ್ದರು. ವೃಂದಾವನ ಧ್ವಂಸಗೊಂಡಿದೆ. ಮುಂದೇನು ಮಾಡಬೇಕೆಂದು ಭಕ್ತರು, ಮಠಾಪತಿಗಳು ಸೇರಿ ವಿಚಾರ ವಿಮರ್ಶೆ ಮಾಡಲಿದ್ದು ಎಲ್ಲ ಕಾರ್ಯಕ್ರಮ ಮೊಟಕುಗೊಳಿಸಿ ಬೆಂಗಳೂರಿನಿಂದ ಹಂಪಿಗೆ ತೆರಳುವುದಾಗಿ ತಮ್ಮ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ