ಆ್ಯಪ್ನಗರ

ವಿವಾದಾತ್ಮಕ ಮಾತುಕತೆ: ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್‌ಗೆ ಕ್ಯಾರೇ ಅನ್ನದ ಉಗ್ರಪ್ಪ!

ಮಾಜಿ ಸಂಸದ ವಿಎಸ್ ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ನಡುವೆ ವಿವಾದಾತ್ಮಕ ಮಾತುಕತೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಿಸ್ತು ಸಮಿತಿ ವಿಎಸ್ ಉಗ್ರಪ್ಪನವರಿಗೆ ನೋಟಿಸ್‌ ಕೊಟ್ಟಿತ್ತು. ಆದರೆ ಅದಕ್ಕೆ ಅವರು ಈವರೆಗೆ ಉತ್ತರ ನೀಡಿಲ್ಲ.

Vijaya Karnataka Web 22 Oct 2021, 12:41 pm
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ನಡೆದ ವಿವಾದಾತ್ಮಕ ಮಾತುಕತೆ ವಿಡಿಯೋ ಬಹಿರಂಗ ಹಿನ್ನೆಲೆಯಲ್ಲಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಅವರಿಗೆ ಕಾಂಗ್ರೆಸ್ ಶಿಸ್ತು ಸಮಿತಿ ನೀಡಿದ್ದ ನೋಟಿಸ್‌ಗೆ ಇನ್ನು ಉತ್ತರ ಸಿಕ್ಕಿಲ್ಲ. ರೆಹಮಾನ್ ಖಾನ್ ಅಧ್ಯಕ್ಷತೆಯ ಶಿಸ್ತು ಸಮಿತಿ ವಿ.ಎಸ್ ಉಗ್ರಪ್ಪ ಅವರಿಗೆ ನೋಟಿಸ್ ನೀಡಿತ್ತು. ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿತ್ತು. ಆದರೆ ಈ ಬಗ್ಗೆ ಉಗ್ರಪ್ಪ ಮಾತ್ರ ಕ್ಯಾರೇ ಅನ್ನಿಲ್ಲ.
Vijaya Karnataka Web VS Ugrappa


ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ವಿಎಸ್ ಉಗ್ರಪ್ಪ ನಡುವಿನ ಅನೌಪಚಾರಿಕ ಮಾತುಕತೆ ವಿವಾದ ಸೃಷ್ಟಿಸಿತ್ತು. ಮಾತುಕತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕಮಿಷನ್ ಗಿರಾಕಿ ಎಂದು ಉಲ್ಲೇಖ ಮಾಡಲಾಗಿತ್ತು. ಈ ಮಾತುಕತೆಯ ವಿಡಿಯೋ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸಲೀಂ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಗೊಳಿಸಲಾಗಿದೆ.

ಡಿಕೆ ಶಿವಕುಮಾರ್‌ ಬಗ್ಗೆ ವಿವಾದಾತ್ಮಕ ಸಂಭಾಷಣೆ: ಪತ್ರಕರ್ತರ ಪ್ರಶ್ನೆಗೆ ತಡವರಿಸಿದ ವಿಎಸ್‌ ಉಗ್ರಪ್ಪ..!

ಆದರೆ ಉಗ್ರಪ್ಪ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬದಲಾಗಿ ಅವರಿಗೆ ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಈ ನೋಟಿಸ್‌ಗೆ ಉಗ್ರಪ್ಪ ಅವರು ಈವರೆಗೂ ಯಾವುದೇ ರೀತಿಯ ಉತ್ತರ ನೀಡಿಲ್ಲ. ಉಗ್ರಪ್ಪ ಅವರ ಈ ನಡೆ ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ


ಈ ನಡುವೆ ವಿಎಸ್‌ ಉಗ್ರಪ್ಪ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವಿವಾದಾತ್ಮಕ ಮಾತುಕತೆ ಹಾಗೂ ಇನ್ನಿತರ ವಿಚಾರಗಳ ಕುರಿತಾಗಿ ಅವರು ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವಿಚಾರವಾಗಿ ಮಾತನಾಡಿರುವ ಸಿದ್ದರಾಮಯ್ಯ, ಸಲೀಂ, ಉಗ್ರಪ್ಪ ಅವರ ಮಾತು ಬಿಡಿ. ಯತ್ನಾಳ್ ಸರ್ಕಾರದ ಬಗ್ಗೆಯೇ ಮಾತನಾಡಿದ್ರು. ಅವರ ಮಾತು ಸರ್ಕಾರದ ಮೇಲೆ, ಆಡಳಿತದ ಮೇಲೆ ಪರಿಣಾಮ ಬೀರಲ್ವಾ?. ಉಗ್ರಪ್ಪ ಮಾತನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ.‌

ಸಲೀಂ, ಉಗ್ರಪ್ಪ ಮಾತನ್ನು ನಾನು ಕೇಳಿಲ್ಲ. ಬಸವರಾಜ ಬೊಮ್ಮಾಯಿ ಅವರು ಮೊದಳು ಯತ್ನಾಳ್ ಹೇಳಿಕೆ ಬಗ್ಗೆ ಉತ್ತರ ಕೊಡಲಿ. ಹಿಂದೆ ಅನಂತ್ ಕುಮಾರ್, ಯಡಿಯೂರಪ್ಪ ಮಾತಾಡಿದ್ರಲ್ಲ ಅದಕ್ಕೆ ಉತ್ತರ ಕೊಡಲಿ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ