ಆ್ಯಪ್ನಗರ

ಕಮಿಷನ್‌ ಕಿತ್ತಾಟಕ್ಕೆ ಸಚಿವರು ಸೀಮಿತ, ಸಭೆಯಲ್ಲೇ ಸಿಎಂ ಕಾಲಹರಣ - ಕಾಂಗ್ರೆಸ್‌ ಆರೋಪ

ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್‌ ಖರೀದಿ ಹಾಗೂ ಆಂಬ್ಯುಲೆನ್ಸ್‌ ಖರೀದಿಯಲ್ಲಿ ಕಮಿಷನ್‌ ಹಣ ಹೊಡೆಯುವುದು ಮಾತ್ರ ಸಚಿವರುಗಳ ಆದ್ಯತೆಯಾಗಿದೆ. ಸಿಎಂ ಯಡಿಯೂರಪ್ಪ ಅವರು ಗೃಹ ಕಚೇರಿ ಸಭೆಗಳಿಗೆ ಸೀಮಿತರಾಗಿದ್ದಾರೆ ಎಂದು ವಿಎಸ್‌ ಉಗ್ರಪ್ಪ ಆರೋಪಿಸಿದ್ದಾರೆ.

Vijaya Karnataka 6 Jul 2020, 8:24 pm
ಬೆಂಗಳೂರು: ರಾಜ್ಯದಲ್ಲಿ ಸೋಂಕು ದುಗುಡ ಸೃಷ್ಟಿಸಿದ್ದರೂ ಸಿಎಂ ಬಿಎಸ್‌ ಯಡಿಯೂರಪ್ಪ ಯಾವೊಂದು ಆಸ್ಪತ್ರೆಗೂ ಭೇಟಿ ನೀಡಿ ಸ್ಥಿತಿ ಗತಿ ನೋಡುತ್ತಿಲ್ಲ. ಮಂತ್ರಿಗಳು ಖರೀದಿ ಹಣದಲ್ಲಿ ಕಮಿಷನ್‌ ಹಣಕ್ಕೆ ಪೈಪೋಟಿ ಮಾಡುತ್ತಾ ಕಿತ್ತಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.
Vijaya Karnataka Web VS Ugrappa


‘‘ಸಿಎಂ ಯಡಿಯೂರಪ್ಪ ಅವರು ಗೃಹ ಕಚೇರಿ ಸಭೆಗಳಿಗೆ ಸೀಮಿತರಾಗಿದ್ದು, ಮಾಧ್ಯಮ ಎದುರು ಮಾತ್ರ ಸಚಿವರುಗಳ ಕೆಲಸ ಸೀಮಿತವಾಗಿದೆ,’’ ಎಂದು ಕೆಪಿಸಿಸಿ ವಕ್ತಾರ ವಿಎಸ್‌ ಉಗ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

‘‘ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್‌ ಖರೀದಿ ಹಾಗೂ ಆಂಬ್ಯುಲೆನ್ಸ್‌ ಖರೀದಿಯಲ್ಲಿ ಕಮಿಷನ್‌ ಹಣ ಹೊಡೆಯುವುದು ಮಾತ್ರ ಸಚಿವರುಗಳ ಆದ್ಯತೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಬೆಡ್‌ ಪಡೆಯುತ್ತೇವೆ ಎಂದು ಸಚಿವ ಸುಧಾಕರ ಹೇಳಿದ್ದರು. ಇನ್ನೂ ಶೇ.15 ರಷ್ಟು ಕೂಡ ಸಿಕ್ಕಿಲ್ಲ,’’ ಎಂದರು.

‘‘ವಿಶ್ವ ಮಟ್ಟದಲ್ಲಿ11 ನೇ ಸ್ಥಾನದಲ್ಲಿದ್ದ ಭಾರತ ಈಗ 3ನೇ ಸ್ಥಾನಕ್ಕೆ ಬಂದಿದೆ. ಮೋದಿ ಅವರು ದಂತಗೋಪುರದಿಂದ ಹೊರಬಂದಿಲ್ಲ. ಅದೇ ಮಾದರಿಯನ್ನು ಸಿಎಂ ಯಡಿಯೂರಪ್ಪ ಪಾಲನೆ ಮಾಡುತ್ತಿದ್ದಾರೆ,’’ ಎಂದು ದೂರಿದರು.

ಕಟೀಲ್‌ ವಿರುದ್ಧ ಕಿಡಿ

‘‘ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಬಿಜೆಪಿಯ ನಳಿನ್‌ ಕುಮಾರ್‌ಕಟೀಲ್‌ ಆರಂಭ ಶೂರತ್ವದ ಟೀಕೆ ಮಾಡಿದ್ದಾರೆ. ಕೊರೊನಾ ಸನ್ನಿವೇಶದಲ್ಲಿ ರಾಜ್ಯದ ಜನರಿಗೆ ಕಟೀಲ್‌ ಮತ್ತು ಬಿಜೆಪಿ ಕೊಡುಗೆ ಏನು? ಬೆಂಗಳೂರನ್ನು ಬಿಜೆಪಿ ಸರಕಾರ ಸ್ಮಶಾನ ಮಾಡಲು ಹೊರಟಿದೆ. ಕಾಂಗ್ರೆಸ್‌ ಮಾತ್ರ ಜನರೊಟ್ಟಿಗೆ ನಿಂತಿದೆ,’’ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ