ಆ್ಯಪ್ನಗರ

ವಕ್ಫ್ ಆಸ್ತಿ ಕಬಳಿಕೆ: ವಿಡಿಯೊ ಕಾನ್ಫರೆನ್ಸ್‌ ಮೂಲಕ ಸರಕಾರದ ಅರ್ಜಿ ವಿಚಾರಣೆ

ವಕ್ಫ್ ಆಸ್ತಿ ಕಬಳಿಕೆ ವಿಚಾರದಲ್ಲಿ ಅನ್ವರ್‌ ಮಾಣಿಪ್ಪಾಡಿ ವರದಿ ಸದನದಲ್ಲಿ ಮಂಡಿಬೇಕೆಂಬ ಆದೇಶ ಮರುಪರಿಶೀಲಿಸಲು ಸರಕಾರ ಕೋರಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌, ವಿಡಿಯೊ ...

Vijaya Karnataka 29 Nov 2018, 5:00 am
ಬೆಂಗಳೂರು: ವಕ್ಫ್ ಆಸ್ತಿ ಕಬಳಿಕೆ ವಿಚಾರದಲ್ಲಿ ಅನ್ವರ್‌ ಮಾಣಿಪ್ಪಾಡಿ ವರದಿ ಸದನದಲ್ಲಿ ಮಂಡಿಬೇಕೆಂಬ ಆದೇಶ ಮರುಪರಿಶೀಲಿಸಲು ಸರಕಾರ ಕೋರಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌, ವಿಡಿಯೊ ಕಾನ್ಫರೆನ್ಸ್‌ ಮೂಲಕ ಬುಧವಾರ ಕೈಗೊಂಡು ತೀರ್ಪು ಕಾಯ್ದಿರಿಸಿತು.
Vijaya Karnataka Web haamer


ಧಾರವಾಡದಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾ.ಬಿ.ವಿ.ನಾಗರತ್ನ ಹಾಗೂ ನ್ಯಾ.ಬಿ.ಎ.ಪಾಟೀಲ್‌ ಅವರಿದ್ದ ವಿಭಾಗೀಯ ಪೀಠವು ಸರಕಾರದ ಪುನರ್‌ ಪರಿಶೀಲನಾ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಂಡಿತು. ಬೆಂಗಳೂರಿನಲ್ಲಿ ಸರಕಾರಿ ವಕೀಲರು ತಮ್ಮ ವಾದ ಮಂಡಿಸಿದರು.

ಸರಕಾರದ ಪರ ವಕೀಲರು ''ವಕ್ಫ್ ಆಸ್ತಿ ಕಬಳಿಕೆ ಆರೋಪದ ಸಂಬಂಧ ಮಾಣಿಪ್ಪಾಡಿ ಸಮಿತಿ ನೀಡಿದ್ದ ವರದಿಯ ಶಿಫಾರಸುಗಳನ್ನು 2016ರ ಮಾ.3ರಂದೇ ಸದನದಲ್ಲಿ ಮಂಡಿಸಿದ್ದು, ಅವು ತಿರಸ್ಕೃತಗೊಂಡಿವೆ. ಜೊತೆಗೆ ವರದಿಯನ್ನು ಕಡ್ಡಾಯವಾಗಿ ಮಂಡಿಸಲೇಬೇಕು ಎಂಬ ನಿಯಮವೇನಿಲ್ಲ''ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಎಸ್‌.ಕೆ.ಕಾಂತಾ ಸಲ್ಲಿಸಿದ್ದ ಅರ್ಜಿಯ ಸಂಬಂಧ ಹೈಕೋರ್ಟ್‌ನ ಮುಂದೆ ಸರಕಾರ 2016ರ ಫೆಬ್ರವರಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಾಣಿಪ್ಪಾಡಿ ವರದಿ ಮಂಡಿಸಲಾಗುವುದು ಎಂದು ಭರವಸೆ ನೀಡಿತ್ತು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ 2015ರಲ್ಲಿ ಅರ್ಜಿ ಇತ್ಯರ್ಥಗೊಳಿಸಿತ್ತು. ಆದರೆ ಆ ತೀರ್ಪು ಪಾಲಿಸಿಲ್ಲ ಎಂದು ಕಾಂತಾ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಬಳಿಕ ಸರಕಾರ ತೀರ್ಪು ಪುನರ್‌ ಪರಿಶೀಲನೆ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ