ಆ್ಯಪ್ನಗರ

ಯಾರ್‌ ಏನ್ಬೇಕಾದರೂ ಹೇಳಲಿ ತಲೆ ಕೆಡಿಸಿಕೊಳ್ಳಲ್ಲ..! ಗೆಲುವೊಂದೆ ಗುರಿ ಎಂದ ಡಿ.ಕೆ.ಶಿವಕುಮಾರ್‌

ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌-ಬಿಜೆಪಿ ನಾಯಕರು ಏನೇ ಆರೋಪ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ, ನಾವು ಗೆಲುವಿನತ್ತ ಮಾತ್ರ ದೃಷ್ಟಿ ಇಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Vijaya Karnataka Web 7 Oct 2020, 11:36 pm
ಬೆಂಗಳೂರು: ನಮ್ಮ ಪಕ್ಷದ ಯಾವ ಮುಖಂಡರನ್ನೂ ಬಿಜೆಪಿಗೆ ಕಳುಹಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌-ಬಿಜೆಪಿ ನಾಯಕರು ಏನೇ ಆರೋಪ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
Vijaya Karnataka Web we concentrate only win in by election says dk shivakumar
ಯಾರ್‌ ಏನ್ಬೇಕಾದರೂ ಹೇಳಲಿ ತಲೆ ಕೆಡಿಸಿಕೊಳ್ಳಲ್ಲ..! ಗೆಲುವೊಂದೆ ಗುರಿ ಎಂದ ಡಿ.ಕೆ.ಶಿವಕುಮಾರ್‌


ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ''ಶಿರಾ ವಿಧಾನಸಭಾ ಕ್ಷೇತ್ರದ ಜನರು ಬುದ್ಧಿವಂತರಿದ್ದಾರೆ. ಸೂಕ್ತ ವ್ಯಕ್ತಿಯನ್ನೇ ಆಯ್ಕೆ ಮಾಡುತ್ತಾರೆ. ರಾಜೇಶ್‌ ಗೌಡ ನಮ್ಮ ಪಕ್ಷದಲ್ಲಿ ಇರಲಿಲ್ಲ. ಅವರ ತಂದೆ ಕಾಂಗ್ರೆಸ್‌ನಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಅವರ ಬಿಜೆಪಿ ಸೇರ್ಪಡೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಚುನಾವಣೆ ಸಂದರ್ಭದಲ್ಲಿ ಯಾರು, ಏನು ಬೇಕಾದರೂ ಹೇಳಿಕೆ ನೀಡಲಿ. ಬೇರೆ ಪಕ್ಷದಲ್ಲಿನಡೆಯುವ ಚಟುವಟಿಕೆಗಳು ನಮಗೆ ಸಂಬಂಧಿಸಿದ್ದಲ್ಲ. ನಾವು ಗೆಲುವಿನತ್ತ ಮಾತ್ರ ದೃಷ್ಟಿ ಇಟ್ಟಿದ್ದೇವೆ,'' ಎಂದರು.

ಸ್ವಾಮೀಜಿಗಳ ಭೇಟಿ
ಡಿ.ಕೆ.ಶಿವಕುಮಾರ್‌ ಅವರನ್ನು ಬುಧವಾರ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಕುಣಿಗಲ್‌ ತಾಲೂಕು ಹುಲಿಯೂರು ದುರ್ಗ ಹಂಗರಹಳ್ಳಿ ಮಠದ ಬಾಲ ಮಂಜುನಾಥ ಸ್ವಾಮೀಜಿ ಶಿವಕುಮಾರ್‌ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಶಿರಾ ಬೈ ಎಲೆಕ್ಷನ್‌ನಲ್ಲಿ ಸಿದ್ದರಾಮಯ್ಯ, ಬಿಜೆಪಿ ನಡುವೆ ಒಳ ಒಪ್ಪಂದ: ಎಚ್‌ಡಿಕೆ ಹೊಸ ಬಾಂಬ್‌

ಈ ನಡುವೆ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್‌, ನಮ್ಮದು ಗುರು-ಶಿಷ್ಯರ ಸಂಬಂಧ. ಧೈರ್ಯ ತುಂಬಲು ಬಂದಿದ್ದರು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ