ಆ್ಯಪ್ನಗರ

ನಾಯಕತ್ವದ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟರೂ ಕ್ರಮವಿಲ್ಲ, ಬಿಎಸ್‌ವೈಗೆ ಬೇಸರಕ್ಕೆ ಕಾರಣವಾಯ್ತಾ ಹೈಕಮಾಂಡ್‌ ನಡೆ!

ನಾಯಕತ್ವದ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟರೂ, ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದರೂ ಅಂತವರ ವಿರುದ್ಧ ಹೈಕಮಾಂಡ್ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಿಎಸ್‌ವೈಗೆ ಬೇಸರಕ್ಕೆ ಕಾರಣವಾಯ್ತಾ ಹೈಕಮಾಂಡ್‌ ನಡೆ? ಎಂಬ ಚರ್ಚೆಗಳು ನಡೆಯುತ್ತಿವೆ.

Vijaya Karnataka Web 7 Jun 2021, 9:31 am

ಹೈಲೈಟ್ಸ್‌:

  • ನಾಯಕತ್ವದ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟರೂ ಕ್ರಮವಿಲ್ಲ
  • ಬಿಎಸ್‌ವೈಗೆ ಬೇಸರಕ್ಕೆ ಕಾರಣವಾಯ್ತಾ ಹೈಕಮಾಂಡ್‌ ನಡೆ?
  • ಇದೇ ಕಾರಣಕ್ಕಾಗಿ ರಾಜೀನಾಮೆ ಮಾತನ್ನಾಡಿದ ಬಿಎಸ್‌ವೈ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web CM BSY
ಬೆಂಗಳೂರು: ಹೈಕಮಾಂಡ್ ಸೂಚನೆ ನೀಡಿದರೆ ನಾನು ಆ ದಿನವೇ ರಾಜೀನಾಮೆ ಕೊಡಲು ಸಿದ್ಧ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಹೇಳಿಕೆ ಕೊಡುವ ಮೂಲಕ ರಾಜ್ಯ ರಾಜ್ಯಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಸದ್ಯದ ಬೆಳವಣಿಗೆ ಹಾಗೂ ನಿರಂತರ ಆರೋಪ ಜೊತೆಗೆ ಹೈಕಮಾಂಡ್ ಮೌನ ಇವರ ಈ ಹೇಳಿಕೆ ಹಿಂದಿರುವ ಕಾರಣ ಎಂಬ ಚರ್ಚೆಗಳು ನಡೆಯುತ್ತಿವೆ. ಹೌದು, ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ದ ಪಕ್ಷದ ಶಾಸಕರೇ ಬಹಿರಂಗ ಹೇಳಿಕೆ ಕೊಟ್ಟರೂ ಅವರ ವಿರುದ್ಧ ಯಾವುದೇ ಕ್ರಮ ಜರಗದಿರುವುದು ಬಿಎಸ್‌ವೈ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ.
ಆರೋಪ ನಂ- 1 : ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಲ್ಲ ಚುನಾವಣೆ ಗೆಲ್ಲುತ್ತಿದ್ದೇವೆ. ಆದರೆ, ಮೋದಿ ಅವರ ಶಕ್ತಿಯನ್ನು ಕುಗ್ಗಿಸಲು ವಿಜಯೇಂದ್ರ ಅವರು ಷಡ್ಯಂತ್ರ ನಡೆಸಿ ಹಣ ಕಳುಹಿಸಿದ್ದಾರೆ - ಬಸನಗೌಡ ಪಾಟೀಲ್ ಯತ್ನಾಳ್

ಸಿಡಿದೆದ್ದ ಯತ್ನಾಳ್‌, ‘ಸಿ.ಡಿ’ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದವರಿಗೆ ಸಚಿವ ಸ್ಥಾನ! ಬಿಎಸ್‌ವೈ ವಿರುದ್ಧ ಗಂಭೀರ ಆರೋಪ

ಆರೋಪ ನಂ- 2 : ಬಿಎಸ್‌ವೈ ಹಾಗೂ ವಿಜಯೇಂದ್ರ ಕಾಂಗ್ರೆಸ್‌ ಅವರನ್ನು ಖರೀದಿ ಮಾಡಿದ್ದಾರೆ. ಕಾಂಗ್ರೆಸ್ ಸತ್ತೋಗಿದೆ. ವಿರೋಧ ಪಕ್ಷ ಬಿಎಸ್‌ವೈ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಬಿಎಸ್‌ವೈ ಜೊತೆಗಿದ್ದಾರೆ- ಬಸನಗೌಡ ಪಾಟೀಲ್ ಯತ್ನಾಳ್

ಆರೋಪ ನಂ- 3:
ರಾಜ್ಯದಲ್ಲಿ ಮೂರು ಪಕ್ಷಗಳ ಸರ್ಕಾರ ನಡೆಯುತ್ತಿದೆ. ನನ್ನ ಇಲಾಖೆಯಲ್ಲಿ ಬೇರೆಯವರ ಹಸ್ತಕ್ಷೇಪವನ್ನು ನಾನು ಸಹಿಸುವುದಿಲ್ಲ. ನನ್ನ ಅಧಿಕಾರವನ್ನು ಮಗ ಚಲಾಯಿಸಬಾರದು. ಆದರೆ ರಾಜ್ಯದಲ್ಲಿ ನಡೆಯುತ್ತಿರುವುದು ಅದೇ ಆಗಿದೆ- ಸಿ.ಪಿ ಯೋಗೀಶ್ವರ್‌

ಇವು ಮೂರು ಬಹಿರಂಗ ಹೇಳಿಕೆಗಳು ಕೇವಲ ಉದಾಹರಣೆಗಳಷ್ಟೇ. ಹೀಗೆ ನಿರಂತರವಾಗಿ ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಆರೋಪಗಳನ್ನು ಬಸನಗೌಡ ಪಾಟೀಲ್ ಯತ್ನಾಳ್ ಮಾಡುತ್ತಾ ಬಂದಿದ್ದಾರೆ. ಅವರಿಗೆ ಬಿಜೆಪಿಯ ಒಂದು ಬಣ ಬೆಂಬಲ ನೀಡುತ್ತಾ ಬಂದಿದೆ. ಇಂತಹ ಹೇಳಿಕೆಗಳು ಸಿಎಂಗೆ ಮುಜುಗರ ಉಂಟು ಮಾಡಿದರೂ ಹೈಕಮಾಂಡ್ ಮಾತ್ರ ಮೌನವಾಗಿದೆ. ಶೋಕಾಸ್ ನೋಟಿಸ್ ಕೊಟ್ಟು ಸುಮ್ಮನಾದ ಹೈಕಮಾಂಡ್ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಯತ್ನಾಳ್ ಬೆನ್ನಲ್ಲೇ ಸಿ.ಪಿ ಯೋಗೀಶ್ವರ್‌ ಕೂಡಾ ಬಹಿರಂಗ ಹೇಳಿಕೆಯನ್ನು ನೀಡುವ ಮೂಲಕ ನಾಯಕತ್ವಕ್ಕೆ ಸವಾಲು ಹಾಕಿದ್ದರು. ಅಲ್ಲದೆ ಕೆಲವು ಪ್ರಮುಖರು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ತಿವಿಯುತ್ತಲೇ ಇದ್ದಾರೆ. ಪದೇ ಪದೇ ನಾಯಕತ್ವ ಬದಲಾವಣೆ ವಿಚಾರವನ್ನು ಮುನ್ನಲೆಗೆ ತರುವುದು, ವಿಜಯೇಂದ್ರ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಆರೋಪವನ್ನು ಮಾಡುವುದು ನಡೆಯುತ್ತಲೇ ಇದೆ.

ಬಿಎಸ್‌ವೈ ನಾಯಕತ್ವ ಬದಲಾವಣೆ: ವಾಸ್ತವ ಏನು? ಇಲ್ಲಿದೆ ಇನ್‌ಸೈಡ್ ಮಾಹಿತಿ!

ಇಷ್ಟೇ ಅಲ್ಲ ಮತ್ತೊಂದು ಕಡೆ ಯಡಿಯೂರಪ್ಪ ವಿರುದ್ಧ ಸಹಿ ಸಂಗ್ರಹ ಕೂಡಾ ನಡೆಯುತ್ತಿದೆ. ಶಾಸಕಾಂಗ ಸಭೆ ಕರೆಯುವಂತೆ ಒತ್ತಾಯಿಸಿ ಸಿಪಿ ಯೋಗೀಶ್ವರ್‌ ನೇತೃತ್ವದಲ್ಲಿ ಸಹಿ ಸಂಗ್ರಹ ನಡೆಯುತ್ತಿದೆ. ತಮ್ಮ ವಿರುದ್ಧ ಬಹಿರಂಗ ಪಿತೂರಿ ನಡೆದರೂ ಹೈಕಮಾಂಡ್ ಮೌನವಾಗಿದೆ. ಅಲ್ಲದೆ ದೆಹಲಿಯಲ್ಲಿರುವ ರಾಜ್ಯದ ನಾಯಕರು ಹೈಕಮಾಂಡ್‌ ಈ ನಿಲುವನ್ನು ಕಾಯ್ದುಕೊಳ್ಳಲು ಕಾರಣರಾಗಿದ್ದಾರೆ ಎಂಬ ಚರ್ಚೆಯೂ ಇದೆ. ಸಹಜವಾಗಿ ಇವೆಲ್ಲವೂ ಯಡಿಯೂರಪ್ಪನವರ ನೋವಿಗೆ ಕಾರಣವಾಗಿದೆ.

ಈ ಎಲ್ಲಾ ಕಾರಣಕ್ಕಾಗಿಯೇ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ಹೈಕಮಾಂಡ್ ಸೂಚನೆ ನೀಡಿದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಈ ಮೂಲಕ ಹಲವು ಪರೋಕ್ಷ ಸಂದೇಶವನ್ನು ರವಾನಿಸಿದ್ದಾರೆ ಎಂಬುವುದು ಸುಳ್ಳಲ್ಲ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುವುದು ಸದ್ಯದ ಕುತೂಹಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ