ಆ್ಯಪ್ನಗರ

ರಾಜ್ಯ ಬಿಜೆಪಿಯಲ್ಲಿ ಅನಂತಕುಮಾರ್ ಸ್ಥಾನ ತುಂಬುವರಾರು...?

ರಾಜ್ಯ ಹಾಗೂ ರಾಷ್ಟ್ರದ ನಡುವೆ ಕೊಂಡಿಯಂತೆ ಕೆಲಸ ನಿರ್ವಹಿಸುತ್ತಿದ್ದ ಅನಂತ್‌ ಕುಮಾರ್‌ ಹಠಾತ್‌ ನಿಧನದಿಂದ ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕದಂತಾಗಿದೆ. ಹಿಂದಿ ಭಾಷೆಯ ಮೇಲೆ ಹಿಡಿತ ಹೊಂದಿದ್ದ ಅನಂತ್‌ ಕುಮಾರ್‌ ಜಾಗವನ್ನು ಬಿಜೆಪಿಯಿಂದ ತುಂಬುವವರಾರು ಎಂಬುದೇ ಇದೀಗ ಬಹು ಚರ್ಚಿತ ಸಂಗತಿಯಾಗಿದೆ.

TIMESOFINDIA.COM 14 Nov 2018, 8:21 pm
[This story originally published in times of india nov 14, 2018]
Vijaya Karnataka Web bjp


ಬೆಂಗಳೂರು: ರಾಷ್ಟ್ರದ ಹಿರಿಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ರಾಜ್ಯ ಬಿಜೆಪಿ ನಾಯಕನ ಸ್ಥಾನಕ್ಕೆ ಇನ್ಯಾರು ಎಂಬ ಪ್ರಶ್ನೆ ಇದೀಗ ದಟ್ಟವಾಗಿದೆ.

ಬಿಜೆಪಿ ಹಿರಿಯ ನಾಯಕ, ಅಜಾತ ಶತ್ರು ಎಂದೇ ಕರೆಯಲ್ಪಡುತ್ತಿದ್ದ ಕೇಂದ್ರ ಸಚಿವ ಅನಂತ್‌ ಕುಮಾರ್‌ ಅವರ ಸ್ಥಾನ ತುಂಬಲು ಬಿಜೆಪಿಯಲ್ಲಿ ಯಾರು ಶಕ್ತರು ಎಂಬ ಪ್ರಶ್ನೆ ಇದೀಗ ಮೂಡಿದೆ.

ರಾಜ್ಯ ಹಾಗೂ ರಾಷ್ಟ್ರದ ನಡುವೆ ಕೊಂಡಿಯಂತೆ ಕೆಲಸ ನಿರ್ವಹಿಸುತ್ತಿದ್ದ ಅನಂತ್‌ ಕುಮಾರ್‌ ಹಠಾತ್‌ ನಿಧನದಿಂದ ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕದಂತಾಗಿದೆ. ಹಿಂದಿ ಭಾಷೆಯ ಮೇಲೆ ಹಿಡಿತ ಹೊಂದಿದ್ದ ಅನಂತ್‌ ಕುಮಾರ್‌ ಜಾಗವನ್ನು ಬಿಜೆಪಿಯಿಂದ ತುಂಬುವವರಾರು ಎಂಬುದೇ ಇದೀಗ ಬಹು ಚರ್ಚಿತ ಸಂಗತಿಯಾಗಿದೆ.

ಏತನ್ಮಧ್ಯೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್‌ ಜೋಶಿ ಹಾಗೂ ಪಕ್ಷದ ದಕ್ಷಿಣ ಸಂಘಟನಾ ಮುಖ್ಯಸ್ಥ, ಚಿಕ್ಕಮಗಳೂರಿನಿಂದ 4 ಬಾರಿ ಶಾಸಕರಾಗಿ ಆಯ್ಕೆಯಾದ ಸಿಟಿ ರವಿ ಅವರುಗಳ ಹೆಸರು ಅನಂತ್‌ ಕುಮಾರ್ ಸ್ಥಾನ ತುಂಬುವ ವಿಚಾರದಲ್ಲಿ ಕೇಳಿ ಬಂದಿದೆ.

ಸಂತೋಷ್‌ ಹಾಗೂ ಪ್ರಹ್ಲಾದ್‌ ಜೋಶಿ ಕೇಂದ್ರದ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೆ, ಸಿಟಿ ರವಿ ರಾಜ್ಯದ ಪ್ರಮುಖ ನಾಯಕನಾಗಿ ಮುಖ್ಯ ಪಾತ್ರ ವಹಿಸಿದ್ದಾರೆ. ಮೂರು ನಾಯಕರಿಗೆ 2019ರ ಲೋಕಸಭಾ ಚುನಾವಣೆ ಪ್ರಮುಖವಾಗಲಿದ್ದು, ಯಶಸ್ವಿಯಾದವರು ಮುಂದಿನ 2-3 ವರ್ಷದಲ್ಲಿ ಅನಂತ್‌ ಕುಮಾರ್‌ ಸ್ಥಾನವನ್ನು ನಿಭಾಯಿಸುವಷ್ಟು ಶಕ್ತಿವಂತರಾಗುತ್ತಾರೆ. ಅಲ್ಲದೆ ಹಿಂದಿ ಭಾಷೆಯಲ್ಲಿನ ಹಿಡಿತ ಈ ವಿಚಾರದಲ್ಲಿ ಹೆಚ್ಚಿನ ಪಾತ್ರ ವಹಿಸಲಿದೆ ಎಂದು ಬಜೆಪಿ ವಕ್ತಾರರೋರ್ವರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ರಾಜ್ಯದ ಯಾವುದೇ ನಾಯಕರೊಂದಿಗೆ ಕೆಲಸ ಮಾಡುವ ಚಾಕಚಕ್ಯತೆ ಅನಂತ್‌ ಕುಮಾರ್‌ ಅವರಲ್ಲಿತ್ತು. ಅಡ್ವಾಣಿ, ವಾಜಪೇಯಿ ಅವರಂತಹ ದಿಗ್ಗಜರೊಂದಿಗೆ ಪಳಗಿದ ಅನಂತ್‌ ಕುಮಾರ್‌, ಕರ್ನಾಟಕದ ರಾಜಕೀಯದ ಚಾಣಕ್ಯ ಎಂದೂ ಹೆಸರಾಗಿದ್ದರು. ಈ ಸ್ಥಾನ ಇದೀಗ ಬರಿದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ