ಆ್ಯಪ್ನಗರ

ರಾಷ್ಟ್ರೀಯ ಸಂಸ್ಥೆಯಲ್ಲಿ ಕನ್ನಡಿಗರಿಗೇಕಿಲ್ಲ ಮೀಸಲು? ಸಿಎಂಗೆ ಜಿ.ಸಿ. ಚಂದ್ರಶೇಖರ್‌ ಪತ್ರ

ರಾಜ್ಯದ ಸಂಪನ್ಮೂಲ, ಭೂಮಿ, ಸವಲತ್ತು ಹಾಗೂ ಇನ್ನಿತರ ಪ್ರೋತ್ಸಾಹಗಳನ್ನು ಪಡೆದುಕೊಳ್ಳುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಮೇಲೆ ರಾಜ್ಯ ಸರಕಾರಗಳಿಗೇ ನಿಯಂತ್ರಣ ಇಲ್ಲದಂತೆ ವ್ಯವಸ್ಥೆ ಸೃಷ್ಟಿಸುವುದು ಎಷ್ಟು ಸರಿ? ಎಂದು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್‌ ಪ್ರಶ್ನಿಸಿದ್ದಾರೆ.

Vijaya Karnataka 30 Sep 2020, 8:54 pm
ಬೆಂಗಳೂರು: ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದಲ್ಲಿ ಕನ್ನಡಿಗರಿಗೆ ಶೇ.25ರಷ್ಟು ಮೀಸಲು ನೀಡುವ ವಿಚಾರದಲ್ಲಿ ಉದ್ಭವವಾಗಿರುವ ವಿವಾದವನ್ನು ತಕ್ಷಣ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್‌ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
Vijaya Karnataka Web GC Chanrasekhar


"ದಿನದಿಂದ ದಿನಕ್ಕೆ ಶಿಕ್ಷ ಣ ವ್ಯವಸ್ಥೆ ಕೇಂದ್ರೀಕೃತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದಲ್ಲಿ ಕನ್ನಡಿಗರಿಗೆ ಶೇ.25ರಷ್ಟು ಸ್ಥಾನ ಮೀಸಲಿಡುವಂತೆ ನಾನು ಕಳೆದ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ರಾಜ್ಯದಲ್ಲಿ ಹತ್ತು ವರ್ಷಗಳ ಕಾಲ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸ್ಥಾನ ಮೀಸಲು ಇಡುವಂತೆ ಹಿಂದಿನ ಸರಕಾರ ಮಾಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಸದ್ಯಕ್ಕೆ ಸುಪ್ರೀಂ ಕೋರ್ಟ್‌ ಅಂಗಳದಲ್ಲಿರುವ ಈ ವಿಚಾರವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು," ಒತ್ತಾಯಿಸಿದ್ದಾರೆ.

‘‘ದೇಶದ 23 ರಾಷ್ಟ್ರೀಯ ಕಾನೂನು ಮಹಾ ವಿದ್ಯಾಲಯಗಳಲ್ಲಿ ಬಹುತೇಕ ಸೀಟುಗಳು ಆಯಾ ರಾಜ್ಯದ ಅಭ್ಯರ್ಥಿಗಳಿಗೇ ಸಿಗುತ್ತಿವೆ. ಕೋಲ್ಕೊತ್ತಾದಲ್ಲಿ ಶೇ.30, ಓಡಿಶಾದಲ್ಲಿ ಶೇ.25, ದಿಲ್ಲಿಯಲ್ಲಿ ಶೇ.50, ಭೋಪಾಲ್‌ನಲ್ಲಿ ಶೇ. 26 ಸೀಟುಗಳನ್ನು ಸ್ಥಳೀಯ ವಿದ್ಯಾರ್ಥಿಗಳಿಗೆ ಕಾಯ್ದಿರಿಸಲಾಗಿದೆ. ರಾಜ್ಯದ ಸಂಪನ್ಮೂಲ, ಭೂಮಿ, ಸವಲತ್ತು ಹಾಗೂ ಇನ್ನಿತರ ಸರಕಾರಿ ಪ್ರೋತ್ಸಾಹಗಳನ್ನು ಪಡೆದುಕೊಳ್ಳುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಮೇಲೆ ರಾಜ್ಯ ಸರಕಾರಗಳಿಗೆ ನಿಯಂತ್ರಣ ಇಲ್ಲದಂತೆ ವ್ಯವಸ್ಥೆ ಸೃಷ್ಟಿಸುವುದು ಎಷ್ಟು ಸರಿ? ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತಕ್ಷ ಣ ಕ್ರಮ ತೆಗೆದುಕೊಳ್ಳಬೇಕು," ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ