ಆ್ಯಪ್ನಗರ

ನೈಋುತ್ಯ ವಲಯದ ಎಲ್ಲ ರೈಲು ನಿಲ್ದಾಣಗಳಲ್ಲಿ ವೈಫೈ

ನೈಋುತ್ಯ ರೈಲ್ವೆ ಇಲಾಖೆಯ 278 ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸುವ ಯೋಜನೆ ಪೂರ್ಣಗೊಂಡಿದೆ...

Vijaya Karnataka 25 Aug 2019, 5:00 am
ಬೆಂಗಳೂರು: ನೈಋುತ್ಯ ರೈಲ್ವೆ ಇಲಾಖೆಯ 278 ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸುವ ಯೋಜನೆ ಪೂರ್ಣಗೊಂಡಿದೆ. ಈ ಮೂಲಕ ಎಲ್ಲ ನಿಲ್ದಾಣಗಳಲ್ಲಿ ವೈಫೈ ಸೇವೆ ನೀಡಿದ ದೇಶದ ಮೊದಲ ವಲಯ ಎಂಬ ಗೌರವಕ್ಕೆ ಇಲಾಖೆಯು ಪಾತ್ರವಾಗಿದೆ.
Vijaya Karnataka Web TRAIN


ಮೈಸೂರು, ಹುಬ್ಬಳ್ಳಿ ಹಾಗೂ ಬೆಂಗಳೂರು ವಿಭಾಗಗಳ 278 ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಬೆಂಗಳೂರು ವಿಭಾಗದ 95, ಹುಬ್ಬಳ್ಳಿ ವಿಭಾಗದ 98 ಹಾಗೂ ಮೈಸೂರು ವಿಭಾಗದ 85 ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಈ ಸೌಲಭ್ಯ ದೊರೆತಿದೆ. 2016-18 ರವರೆಗೆ ಅನುಷ್ಠಾನಗೊಂಡಿದ್ದ ಯೋಜನೆಯ ಮೊದಲ ಹಂತದಲ್ಲಿ 153 ನಿಲ್ದಾಣಗಳಿಗೆ ವೈಫೈ ನೀಡಲಾಗಿತ್ತು. 2 ನೇ ಹಂತದಲ್ಲಿ ಉಳಿದ ನಿಲ್ದಾಣಗಳಿಗೆ ಸೇವೆ ನೀಡಲಾಗಿದೆ.

ರಾಜ್ಯದಲ್ಲಿ ಪ್ರತಿ ದಿನ ಲಕ್ಷಾಂತರ ಜನರು ಪ್ರಯಾಣಿಕರು ನಿಲ್ದಾಣದಲ್ಲಿ ವೈಫೈ ಬಳಸುತ್ತಿದ್ದಾರೆ. ಪ್ರತಿ ದಿನ 20 ಸಾವಿರ ಪ್ರಯಾಣಿಕರು ಮೊದಲ ಬಳಕೆದಾರರಾಗಿ ಈ ಸೇವೆ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿ ನಿಲ್ದಾಣದಲ್ಲಿ 'ರೇಲ್‌ ವಯರ್‌ ಬ್ರ್ಯಾಂಡ್‌' ಹೆಸರಲ್ಲಿ ಸೇವೆ ಕಲ್ಪಿಸಲಾಗಿದೆ. ಇದು ಕೇಂದ್ರ ಸರಕಾರದ ಡಿಜಿಟಲ್‌ ಇಂಡಿಯಾ ಯೋಜನೆಯ ಭಾಗವಾಗಿದೆ ಎಂದು ಇಲಾಖೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ