ಆ್ಯಪ್ನಗರ

ರಾಮಲಿಂಗಾರೆಡ್ಡಿ ಮೋಸ ಮಾಡಿದ್ದಾರೆ, ನಾವು ರಾಜೀನಾಮೆ ವಾಪಸ್‌ ಪಡೆಯಲ್ಲ: ಎಸ್‌ಟಿ ಸೋಮಶೇಖರ್‌

ಕರ್ನಾಟಕ ರಾಜಕೀಯ ಕ್ರಾಂತಿಯಲ್ಲಿ ಈಗ ವಾದ-ಪ್ರತಿವಾದಗಳು ಮುಂದುವರಿದಿವೆ. ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆದ ವಿಷಯದ ಕುರಿತು ಅತೃಪ್ತ ಶಾಸಕರು ಆಕ್ರೋಶ ವ್ಯಕ್ತಡಿಸಿದ್ದಾರೆ.

Vijaya Karnataka Web 18 Jul 2019, 5:10 pm
ಮುಂಬಯಿ: ದೋಸ್ತಿ ಸರಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ, ರಾಜೀನಾಮೆ ನೀಡಿದ್ದ ರಾಮಲಿಂಗಾರೆಡ್ಡಿ ಈಗ ಯೂಟರ್ನ್‌ ಹೊಡೆದಿದ್ದಾರೆ.
Vijaya Karnataka Web ಎಸ್‌ಟಿ ಸೋಮಶೇಖರ್‌
ಎಸ್‌ಟಿ ಸೋಮಶೇಖರ್‌


ಪಕ್ಷದ ನಾಯಕರು, ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಜೀನಾಮೆ ಹಿಂಪಡೆಯುತ್ತಿರುವುದಾಗಿ ಹೇಳಿದ್ದಾರೆ.

ರಾಮಲಿಂಗಾರೆಡ್ಡಿ ಅವರ ನಿರ್ಧಾರಕ್ಕೆ ವಾಣಿಜ್ಯ ನಗರಿಯಲ್ಲಿರುವ ಅತೃಪ್ತ ಶಾಸಕರ ಬಣ ಆಕ್ರೋಶ ವ್ಯಕ್ತಪಡಿಸಿದೆ.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಕೊನೆ ಕ್ಷಣದಲ್ಲಿ ಮೋಸ ಮಾಡಿದ್ದಾರೆ. ನಾವೆಲ್ಲರೂ ಚರ್ಚೆ ಮಾಡಿಯೇ ರಾಜೀನಾಮೆ ನೀಡಿದ್ದೆವು. ಈಗ ಹಿಂದೇಟು ಹಾಕಿದ್ದಾರೆ. ಅವರನ್ನು ನಾವು ಫಾಲೋ ಮಾಡಲ್ಲ ಎಂದು ಅತೃಪ್ತ ಶಾಸಕರು ತಿಳಿಸಿದ್ದಾರೆ.

ವಿಶ್ವಾಸಮತಯಾಚನೆ ದಿನದಂದು ಸದನಕ್ಕೆ ಹಾಜರಾಗುತ್ತೇನೆ ಎಂದು ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ ನಂತರ ಅತೃಪ್ತ ಶಾಸಕರು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವೀಡಿಯೋದಲ್ಲಿ ಎಸ್‌ಟಿ ಸೋಮಶೇಖರ್‌ ಮಾತನಾಡಿದ್ದಾರೆ.

ರಾಮಲಿಂಗಾರೆಡ್ಡಿ, ನಾನು, ಭೈರತಿ ಬಸವರಾಜ್‌, ಮನಿರತ್ನ ಎಲ್ಲರೂ ಸೇರಿಕೊಂಡು ಚರ್ಚೆ ಮಾಡಿಯೇ ರಾಜೀನಾಮೆ ನೀಡಿದ್ದೇವು. ಆದರೆ ಈಗ ರಾಮಮಲಿಂಗಾರೆಡ್ಡಿ ಯೂ ಟರ್ನ್‌ ಮಾಡಿದ್ದಾರೆ ಎಂದರು.

ಆದರೆ ನಮ್ಮ ನಿರ್ಧಾರ ಅಚಲವಾಗಿದೆ. ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್‌ ಪಡೆಯಲ್ಲ ಎಂದು ಸೋಮಶೇಖರ್‌ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ