ಆ್ಯಪ್ನಗರ

ಟೀಮ್‌ ವರ್ಕ್‌ನಲ್ಲಿ ಕೆಲಸ ಮಾಡಿ ಸವಾಲು ಎದುರಿಸುತ್ತೇನೆ: ಸಿಎಂ ಬೊಮ್ಮಾಯಿ ಮೊದಲ ರಿಯಾಕ್ಷನ್‌

ರಾಜ್ಯದ ಜನತೆಗೆ ಕೃತಜ್ಞನನಾಗಿದ್ದೇನೆ, ನಮ್ಮ ಪಕ್ಷ ವಿಶ್ವಾಸವಿಟ್ಟು ಬಹುಮತ ಕೊಟ್ಟಿದಾರೆ ಜನ, ಮೋದಿ ಮೇಲೂ ಅಪಾರ ವಿಶ್ವಾಸ ಇರಿಸಿದ್ದಾರೆ, ವರಿಷ್ಠರ ಆಶೀರ್ವಾದ, ಯಡಿಯೂರಪ್ಪ ನೇತೃತ್ವ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದೇನೆ

Vijaya Karnataka Web 28 Jul 2021, 12:05 pm
ಬೆಂಗಳೂರು: ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸಕ್ಕೆ ಪಡೆದು ಮುಖ್ಯಮಂತ್ರಿ ಅನ್ನುವುದಕ್ಕಿಂತ ಎಲ್ಲರಲ್ಲಿ ಒಬ್ಬನು ಎಂದು ಕೆಲಸ ಮಾಡುತ್ತೇನೆ ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
Vijaya Karnataka Web ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ


ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಅವರು, ಟೀಂ ವರ್ಕ್ ಆಗಿ ಕೆಲಸ ಮಾಡಿ ರಾಜಕೀಯ ಆರ್ಥಿಕ, ಸಾಮಾಜಿಕ‌ ಸವಾಲುಗಳನ್ನು ಒಟ್ಟಾಗಿ ಎದುರಿಸುತ್ತೇ‌ನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಜನತೆಗೆ ಕೃತಜ್ಞನನಾಗಿದ್ದೇನೆ, ನಮ್ಮ ಪಕ್ಷ ವಿಶ್ವಾಸವಿಟ್ಟು ಬಹುಮತ ಕೊಟ್ಟಿದಾರೆ ಜನ, ಮೋದಿ ಮೇಲೂ ಅಪಾರ ವಿಶ್ವಾಸ ಇರಿಸಿದ್ದಾರೆ, ವರಿಷ್ಠರ ಆಶೀರ್ವಾದ, ಯಡಿಯೂರಪ್ಪ ನೇತೃತ್ವ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದೇನೆ ಎಂದು ತಿಳಿಸಿದರು.

ರಾಜ್ಯದ ಜನತೆ ಕೊರೊನಾದಂತಹ ಸವಾಲು ಎದುರಿಸಿದ್ದಾರೆ. ಎರಡು ಬಾರಿ ಪ್ರವಾಹ ಬಂದು ಸಂಕಷ್ಟ ಅನುಭವಿಸಿದ್ದೇವೆ. ನಮ್ಮ ಸರಕಾರ ಜನರ ನೆರವಿಗೆ ನಿಲ್ಲಲಿದೆ, ದಕ್ಷ, ಪ್ರಾಮಾಣಿಕ, ಜನಪರ ಆಡಳಿತವನ್ನು ನಮ್ಮ ಸರಕಾರ ನೀಡಲಿದೆ ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ನಮ್ಮ ಎಲ್ಲ ನಿರ್ಣಯ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ, ಬಡವರು, ರೈತರು, ದೀನ ದಲಿತ ಹಿಂದುಳಿದ ವರ್ಗದ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಿ ಪ್ರಾದೇಶಿಕ‌ ಅಸಮತೋಲು ತೊಡಗಿಸಲು ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಇಂದಿನ‌ ಹಣಕಾಸು ಇತಿಮಿತಿ, ಪರಿಸ್ಥಿತಿ ಅದರ ಎಲ್ಲ ಹಿನ್ನಲೆಯಲ್ಲಿ ಚರ್ಚೆ ಮಾಡಿ ಕೆಲ‌ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಮಗೆ ಸವಾಲುಗಳು ಇವೆ, ಆರ್ಥಿಕ, ಸಾಮಾಜಿಕ‌ ಸವಾಲುಗಳಿವೆ, ಸಹೋದ್ಯೋಗಿಗಳು, ಪಕ್ಷದ‌ ಹಿರಿಯರು, ಶಾಸಕರೊಂದಿಗೆ ಈ ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಂಡ ಅವರನ್ನು ಎದುರಿಸಲು ಸಫಲನಾಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ