ಆ್ಯಪ್ನಗರ

‘ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ’: ಸುಧಾಮೂರ್ತಿ ಸಮ್ಮೇಳನಾಧ್ಯಕ್ಷೆ

ಚಿಕ್ಕಮಗಳೂರಿನಲ್ಲಿ ಮಾ 2ರಿಂದ ನಡೆಯುವ 'ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಹಾಗೂ ಇನ್‌ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ.

Vijaya Karnataka 13 Feb 2019, 5:00 am
ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಮಾ 2ರಿಂದ ನಡೆಯುವ 'ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಹಾಗೂ ಇನ್‌ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ.
Vijaya Karnataka Web sudhamurthi


''ರಾಜ್ಯಮಟ್ಟದ ಎರಡನೇ ಸಮ್ಮೇಳನ ಇದಾಗಿದ್ದು, ಮಾ 2 ಮತ್ತು 3ರಂದು ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವರು,'' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್‌ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

''ರಾಜ್ಯದ ನಾನಾ ಭಾಗಗಳಿಂದ ಸಮ್ಮೇಳನಕ್ಕೆ ಬರುವವರಿಗೆ ಊಟ, ವಸತಿ, ವೇದಿಕೆಗಳು ಸೇರೀದಂತೆ ನಾನಾ ಕೆಲಸಗಳಿಗೆ ಸುಮಾರು 22 ರಿಂದ 24 ಲಕ್ಷ ರೂ. ಅಂದಾಜಿಸಲಾಗಿದೆ. ಸಮ್ಮೇಳನದಲ್ಲಿ ಚರ್ಚಿತವಾದ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು,'' ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕಸಾಪ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿಗಳಾದ ವ.ಚ. ಚನ್ನೇಗೌಡ, ಡಾ. ರಾಜಶೇಖರ ಹತಗುಂದಿ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನದ ವಿವರಗಳು

ಮಾ.2ರ ಕಾರ‍್ಯಕ್ರಮ

ಉದ್ಘಾಟನೆ: ಬೆಳಗ್ಗೆ 10.30ಕ್ಕೆ

ಉಪಸ್ಥಿತಿ: ಸಂಸದೆ ಶೋಭಾ ಕರಂದ್ಲಾಜೆ, ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣ, ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್‌, ಖ್ಯಾತ ಬರಹಗಾರ್ತಿ ರಾಜೇಶ್ವರಿ ತೇಜಸ್ವಿ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಜಾನಕಿ.

ಮಧ್ಯಾಹ್ನ 2 ಗಂಟೆ

ಗೋಷ್ಠಿ1: 'ಕನ್ನಡ ಸಾಹಿತ್ಯ : ಮಹಿಳಾ ನೋಟ'

ಅಧ್ಯಕ್ಷತೆ: ಡಾ. ವೈ.ಸಿ. ಭಾನುಮತಿ


ಸಂಜೆ 4 ಗಂಟೆ

ಗೋಷ್ಠಿ2: 'ಮಹಿಳೆ ಮತ್ತು ಚಳವಳಿ'

ಅಧ್ಯಕ್ಷತೆ:ರಾಧಾ ಸುಂದರೇಶ್‌

ಮಾ.3ರ ಕಾರ‍್ಯಕ್ರಮ

ಬೆಳಗ್ಗೆ 10 ಗಂಟೆ

ಗೋಷ್ಠಿ3:'ನಾನಾ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆ'

ಅಧ್ಯಕ್ಷತೆ: ಡಾ. ಧರಣಿದೇವಿ ಮಾಲಗತ್ತಿ


ಮಧ್ಯಾಹ್ನ 12 ಗಂಟೆ

ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ

ಉಪಸ್ಥಿತಿ: ಡಾ. ಸುಶಿ ಕಾಡನಕುಪ್ಪೆ, ಸಹನಾ ಕಾಂತಬೈಲು, ಡಾ. ರೇಖಾ ವಸಂತ


ಮಧ್ಯಾಹ್ನ 2.30ಕ್ಕೆ

ಕವಿಗೋಷ್ಠಿ

ಅಧ್ಯಕ್ಷತೆ: ಸವಿತಾ ನಾಗಭೂಷಣ

ಉಪಸ್ಥಿತಿ: ಡಾ. ಟಿ.ಸಿ. ಪೂರ್ಣಿಮಾ, ಡಾ. ವಿಜಯಶ್ರೀ ಸಬರದ, ಡಾ. ಕೆ. ಶರೀಫಾ


ಸಂಜೆ 4.30ಕ್ಕೆ ಸಮಾರೋಪ

ಸನ್ಮಾನ: ಸಮ್ಮೇಳನಾಧ್ಯಕ್ಷೆ ಡಾ. ಸುಧಾಮೂರ್ತಿಯವರಿಗೆ

ಉಪಸ್ಥಿತಿ: ಮಾಜಿ ಸಚಿವೆ ಮೋಟಮ್ಮ, ಮಾಜಿ ಕೇಂದ್ರ ಸಚಿವೆ ಡಿ.ಕೆ. ತಾರಾದೇವಿ ಸಿದ್ಧಾರ್ಥ ಮತ್ತಿತರರು.


ನಾಡಗೀತೆ ಸಮಯ ನಿಗದಿಗೆ ಉತ್ತರ ಬಂದಿಲ್ಲ

''ಸಮಾರಂಭಗಳಲ್ಲಿ ನಾಡಗೀತೆಯನ್ನು ಸುಮಾರು 5-7 ನಿಮಿಷಗಳ ಕಾಲ ಹಾಡಲಾಗುತ್ತಿದೆ. ಇದರಿಂದ ವಯಸ್ಸಾದವರಿಗೆ ಅಷ್ಟು ಹೊತ್ತು ನಿಲ್ಲಲು ಕಷ್ಟವಾಗುತ್ತದೆ. ಆದ್ದರಿಂದ ನಾಡಗೀತೆಯಲ್ಲಿ ಎಲ್ಲಿಯೂ ಪದಗಳನ್ನು, ಸಾಲುಗಳನ್ನು ಕತ್ತರಿಸುವಂತಿಲ್ಲ. ಬದಲಿಗೆ ಪುನರಾವರ್ತನೆಯಾಗದಂತೆ ಒಟ್ಟಾರೆ ನಾಡಗೀತೆಯನ್ನು 2ರಿಂದ 2.50 ನಿಮಿಷಕ್ಕೆ ಇಳಿಸಲು ಸಾಧ್ಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ಪತ್ರ ಬರೆದು ಸುಮಾರು ಒಂದೂವರೆ ತಿಂಗಳಾದರೂ ಉತ್ತರ ಬಂದಿಲ್ಲ,'' ಎಂದು ಮನು ಬಳಿಗಾರ್‌ ಇದೇ ವೇಳೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ