ಆ್ಯಪ್ನಗರ

ಮನಸ್ಸು ಮಾಡಿದರೆ ಪರಿಹಾರಕ್ಕೆ 15,000 ಕೋಟಿ ರೂ. ಹೊಂದಿಸಬಹುದು: ಎಚ್‌ಡಿಕೆ

"ಟೀಕೆ ಮಾಡುವುದಿಲ್ಲ. ಪ್ರವಾಹ ಪರಿಹಾರದ ವಿಷಯದಲ್ಲಿ ರಾಜಕೀಯವನ್ನೂ ಎಳೆದು ತರುವುದಿಲ್ಲ," ಎಂದ ಕುಮಾರಸ್ವಾಮಿ ತಮ್ಮ ಮಾತಿನುದ್ದಕ್ಕೂ ಸರಕಾರಕ್ಕೆ ಸಲಹೆಯನ್ನೇ ನೀಡಿ ಟೀಕೆ-ಟಿಪ್ಪಣಿಯಿಂದ ತುಸು ದೂರವೇ ಉಳಿದರು.

Vijaya Karnataka 11 Oct 2019, 11:03 pm
ಬೆಂಗಳೂರು: ರಾಜ್ಯದಲ್ಲಿ ಆರ್ಥಿಕ ಸಂಕಷ್ಟವಿಲ್ಲ. ಸರಕಾರ ಮನಸ್ಸು ಮಾಡಿದರೆ ಪ್ರವಾಹ ಪರಿಹಾರಕ್ಕೆ 15 ಸಾವಿರ ಕೋಟಿ ರೂ. ಹೊಂದಿಸಬಹುದು. ಈ ಉದ್ದೇಶಕ್ಕೆ ಹಿರಿಯ ಹಾಗೂ ಪರಿಣಿತ ಅಧಿಕಾರಿಗಳ ತಂಡ ರಚಿಸಬೇಕು ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.
Vijaya Karnataka Web Former Karnataka Chief Minister HD Kumaraswamy


ಪ್ರವಾಹ ಪರಿಸ್ಥಿತಿ ಚರ್ಚೆಯಲ್ಲಿ ಭಾಗಿಯಾಗಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, "ಟೀಕೆ ಮಾಡುವುದಿಲ್ಲ. ಪ್ರವಾಹ ಪರಿಹಾರದ ವಿಷಯದಲ್ಲಿ ರಾಜಕೀಯವನ್ನೂ ಎಳೆದು ತರುವುದಿಲ್ಲ," ಎಂದರು. ತಮ್ಮ ಮಾತಿನುದ್ದಕ್ಕೂ ಸರಕಾರಕ್ಕೆ ಸಲಹೆಯನ್ನೇ ನೀಡಿದ ಅವರು ಟೀಕೆ-ಟಿಪ್ಪಣಿಯಿಂದ ತುಸು ದೂರವೇ ಉಳಿದರು.

ಪರಿಹಾರ ಕಾರ್ಯಾಚರಣೆಗೆ ನೋಡಲ್‌ ಅಧಿಕಾರಿಯನ್ನೂ ನಿಯುಕ್ತಿಗೊಳಿಸಬೇಕು. ರಾಜ್ಯದಿಂದ ಎಷ್ಟೇ ನೆರವಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನುಸಾರವೇ ಕೇಂದ್ರ ಸರಕಾರ ಪರಿಹಾರ ನೀಡುತ್ತದೆ. ಅದು ಸಾಕಾಗುವುದಿಲ್ಲ. ಹಾಗಾಗಿ ರಾಜ್ಯದಿಂದಲೇ ಸಂಪನ್ಮೂಲ ಹೊಂದಿಸಬೇಕು ಎಂಬುದಾಗಿ ಅಭಿಪ್ರಾಯಪಟ್ಟರು.

ಈ ಹಿಂದೆ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರಕಾರವಿದ್ದಾಗ ಪ್ರಕೃತಿ ವಿಕೋಪವಾದಾಗಲೂ ಹೆಚ್ಚು ಪರಿಹಾರ ನೀಡಲಾಗಿದೆ. ಆಗ ಯಡಿಯೂರಪ್ಪ ಅವರೇ ಹಣಕಾಸು ಖಾತೆ ನೋಡಿಕೊಳ್ಳುತ್ತಿದ್ದರು. ಈಗಿನ ಸರಕಾರಕ್ಕೆ ಸಾಲ ಮನ್ನಾ ಒತ್ತಡವಿಲ್ಲ. ಹಾಗಾಗಿ ಹಣ ಹೊಂದಿಸಬಹುದು. ಕೆಲ ಕಾರ್ಯಕ್ರಮ ಮುಂದೂಡಿ ನೆರೆ ಪರಿಹಾರಕ್ಕೆ ಬಳಸಿಕೊಳ್ಳಬಹುದು. ಇದಕ್ಕೆ ವಿರೋಧಿಸುವುದಿಲ್ಲ ಎಂದು ತಿಳಿಸಿದರು.

''ನಾನು ಸಿಎಂ ಆಗಿದ್ದಾಗ ಮಾಧ್ಯಮಗಳು ನನ್ನನ್ನು ಖಳನಾಯಕನಂತೆ ಬಿಂಬಿಸಿದ್ದರೂ ಪ್ರವಾಹದ ವಿಚಾರದಲ್ಲಿ ಇದೇ ಮಾಧ್ಯಮಗಳು ಕಣ್ಣು ತೆರೆಸುತ್ತಿವೆ. ವಾಸ್ತವ ಸ್ಥಿತಿಗತಿ ಬಗ್ಗೆ ವರದಿ ಮಾಡುತ್ತಿವೆ,'' ಎಂದು ಎಚ್‌ಡಿಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ