ಆ್ಯಪ್ನಗರ

ಕುಮಾರ ಪರ್ವತದಲ್ಲಿ ಟ್ರೆಕ್ಕಿಂಗ್‌: 6-5=2 ಸಿನೆಮಾ ಮಾದರಿಯಲ್ಲೇ ಯುವಕ ಮಿಸ್ಸಿಂಗ್!

ಹಿಂದೆ ಒಂದು ತಂಡ, ಮುಂದೆ ಒಂದು ತಂಡ.. ಮಧ್ಯದಲ್ಲಿದ್ದ ಆ ಯುವಕ. ಬೆಟ್ಟದಿಂದ ಕೆಳಗಿಳಿಯುತ್ತಿದ್ದ ಆ ಯುವಕ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದಾನೆ! ಕುಮಾರಪರ್ವತದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿದ್ದ ಯುವಕರು ಈಗ ಆತಂಕಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿರುವ ಯುವಕನ ಕುಟುಂಬಸ್ಥರ ಗೋಳು ಹೇಳತೀರದಾಗಿದೆ.

Vijaya Karnataka Web 16 Sep 2019, 10:57 pm


ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಮಾರ ಪರ್ವತಕ್ಕೆ ಚಾರಣ ಹೊರಟಿದ್ದ ಬೆಂಗಳೂರಿನ ಚಾರಣಿಗರ ತಂಡದಲ್ಲಿದ್ದ ಯುವಕನೊಬ್ಬ ಬೆಟ್ಟದ ಹಾದಿಯಲ್ಲಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಯುವಕನನ್ನು ಬೆಂಗಳೂರಿನ ಗಾಯತ್ರಿ ನಗರ ನಿವಾಸಿ 25 ವರ್ಷ ವಯಸ್ಸಿನ ಸಂತೋಷ್ ಎಂದು ಗುರುತಿಸಲಾಗಿದೆ.
Vijaya Karnataka Web trekking youth missing


ಕುಮಾರ ಪರ್ವತದಿಂದ ಮರಳುವ ಹಾದಿಯಲ್ಲಿ ಮಾರ್ಗ ಮಧ್ಯೆ ಸಂತೋಷ್ ಕಾಣೆಯಾಗಿದ್ದಾರೆ. ಈ ಬಗ್ಗೆ ಬೆಂಗಳೂರು ಕಾಳಿಕಾ ನಗರ ನಿವಾಸಿ ದರ್ಶನ್ ಎಂಬವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದೆ. ಐದು ತಂಡಗಳ ಮೂಲಕ ಮಂಗಳವಾರ ಶೋಧ ಕಾರ್ಯ ಮುಂದುವರಿಯಲಿದೆ.
ಸಂತೋಷ್ ನಾಪತ್ತೆಯಾಗಿದ್ದು ಹೇಗೆ?

ಕುಮಾರ ಪರ್ವತಕ್ಕೆ ಸಾಮಾನ್ಯವಾಗಿ ಬೇಸಿಗೆಯಲ್ಲಿ ಚಾರಣಕ್ಕೆ ಹೋಗುವುದು ವಾಡಿಕೆ. ಅದರೆ 12 ಯುವ ಚಾರಣಿಗರ ಬೆಂಗಳೂರು ತಂಡ, ಮಳೆಗಾಲದಲ್ಲೇ ಚಾರಣ ಆರಂಭಿಸಿತ್ತು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಹೇಳಿರುವ ಪ್ರಕಾರ, ಅರಣ್ಯ ಇಲಾಖೆಯ ಅನುಮತಿ ಪಡೆದೇ ಈ ತಂಡ ಚಾರಣಕ್ಕೆ ಹೊರಟಿತ್ತು.

ಯುವ ಜನರಲ್ಲಿ ಹೆಚ್ಚಾಯ್ತು ಟ್ರೆಕ್ಕಿಂಗ್‌ ಕ್ರೇಝ್‌

ಸ್ಥಳೀಯ ಮಾಹಿತಿ ಪ್ರಕಾರ ಚಾರಣಿಗರು ಶನಿವಾರ ಕುಕ್ಕೆ ಸುಬ್ರಹ್ಮಣ್ಯದ ಮೂಲಕ ಚಾರಣ ಆರಂಭಿಸಿದ್ದರು. ಚಾರಣದ ಅಂತಿಮ ಚರಣ ಮುಗಿಸಿ ರಾತ್ರಿ ಗಿರಿಗದ್ದೆಯಲ್ಲಿ ಉಳಿದುಕೊಂಡಿದ್ದರು. ಮರುದಿನ‌ ಅಲ್ಲಿಂದ ವಾಪಸಾಗುತ್ತಿದ್ದರು.

12 ಜನರ ಪೈಕಿ ಐವರು ಮುಂದೆ ಬಂದಿದ್ದು, ಸುಸ್ತಾಗಿದ್ದ ಆರು ಮಂದಿ ಹಿಂದಿನಿಂದ ಬರುತ್ತಿದ್ದರು. ಎರಡು ತಂಡಗಳ ನಡುವೆ ಅಂತರವಿತ್ತು ಎನ್ನಲಾಗಿದೆ. ಇವುಗಳ ಮಧ್ಯೆ ಸಂತೋಷ್ ಪರ್ವತ ಇಳಿಯುತ್ತಿದ್ದರು. ಒಬ್ಬನೇ ಏಕಾಂಗಿಯಾಗಿ ಬರುತ್ತಿದ್ದ ಸಂತೋಷ್ ಪರ್ವತ ಹಾದಿ ಮಧ್ಯೆ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.‌

ಟ್ರೆಕ್ಕಿಂಗ್ ಸ್ಪಾಟ್‌ನಲ್ಲಿ ಪ್ಲಾಸ್ಟಿಕ್ ಹೆಕ್ಕಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ