ಆ್ಯಪ್ನಗರ

ಜಿಂದಾಲ್‌ ಲ್ಯಾಂಡ್‌ ಆಡಿಟ್‌ಗೆ ಎಚ್ಕೆಪಿ ಆಗ್ರಹ

ವಿಕ ಸುದ್ದಿಲೋಕ ಬೆಂಗಳೂರು ಬಳ್ಳಾರಿಯಲ್ಲಿ ಜಿಂದಾಲ್‌ ಕಂಪನಿಗೆ ನೀಡಿರುವ ಭೂಮಿಯ ಆಡಿಟ್‌ ಮಾಡಬೇಕು, ಜಿಂದಾಲ್‌ ಕಂಪನಿ ಎಷ್ಟು ಭೂಮಿ ಕೇಳಿತ್ತು, ಸರಕಾರ ಕೊಟ್ಟಿದ್ದೆಷ್ಟು, ...

Vijaya Karnataka 26 Jun 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web hk patil


ಬಳ್ಳಾರಿಯಲ್ಲಿ ಜಿಂದಾಲ್‌ ಕಂಪನಿಗೆ ನೀಡಿರುವ ಭೂಮಿಯ ಆಡಿಟ್‌ ಮಾಡಬೇಕು, ಜಿಂದಾಲ್‌ ಕಂಪನಿ ಎಷ್ಟು ಭೂಮಿ ಕೇಳಿತ್ತು, ಸರಕಾರ ಕೊಟ್ಟಿದ್ದೆಷ್ಟು, ಅವರಿಗೆ ಇಷ್ಟೊಂದು ಭೂಮಿಯ ಅಗತ್ಯವಿದೆಯೇ ಎಂಬುದರ ಬಗ್ಗೆ ಪರಾಮರ್ಶೆ ನಡೆಸಬೇಕು ಎಂದು ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಆಗ್ರಹಿಸಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,'' ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ಜಿಂದಾಲ್‌ ಭೂಮಿ ಪರಭಾರೆ ವಿಷಯ ಚರ್ಚೆಯಾಗಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ, ಮುಂದಿನ ಸಭೆಯಲ್ಲಿ ಚರ್ಚೆಗೆ ಬರಲಿದೆ. ಈ ಸಂಬಂಧ ರಾಜ್ಯ ಸರಕಾರ ಸಚಿವ ಸಂಪುಟ ಉಪ ಸಮಿತಿ ರಚನೆಗೆ ತೀರ್ಮಾನ ಮಾಡಿರುವುದರಿಂದ ಅಧ್ಯಯನ ಮತ್ತು ತನಿಖೆಗೆ ಅವಕಾಶ ದೊರೆಯುತ್ತದೆ. ಸಮಿತಿ ಸದಸ್ಯರು ಸಾರ್ವಜನಿಕರ ಅಹವಾಲು ಪಡೆಯಬೇಕು. ಹೀಗಾಗಿ ನಮಗೆ ಸರಕಾರದ ಮೇಲೆ ಭರವಸೆ ಇದೆ. ಈಗಲೇ ವಿರೋಧಿಸುವುದು ಸರಿಯಾದ ಕ್ರಮವಲ್ಲ,'' ಎಂದು ಅಭಿಪ್ರಾಯಪಟ್ಟರು.

''ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಚಿವ ಸಂಪುಟ ಉಪ ಸಮಿತಿ ಸದಸ್ಯರನ್ನಾಗಿ ಮಾಡಲು ಸಾಧ್ಯವಿಲ್ಲ, ಸಚಿವರಲ್ಲದವರು ಉಪ ಸಮಿತಿ ಸದಸ್ಯರಾಗುವುದಿಲ್ಲ. ಒಂದು ವೇಳೆ ತಜ್ಞರ ಸಮಿತಿಯಾಗಿದ್ದರೆ ಅವಕಾಶ ಕೊಡಬಹುದಿತ್ತು,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ