ಆ್ಯಪ್ನಗರ

ರೀ ಸರ್ವೆಯ ಲೋಪಗಳಿಂದ ಬ್ಯಾಂಕ್‌ ಸಾಲಗಳಿಗೆ ಸಮಸ್ಯೆ

ಪರೀಕ್ಷಣಾರ್ಥ ಕಂದಾಯ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಿದ ಭೂಮಿಯ ರೀ ಸರ್ವೆ ಪ್ರಕ್ರಿಯೆಗಳು ಯಶಸ್ವಿಯಾಗಿರುವುದಾಗಿ ಸರಕಾರ ಹೇಳುತ್ತಿದ್ದರು ನಾನಾ ಗ್ರಾಮ ಕಚೇರಿಗಳ ವ್ಯಾಪ್ತಿಯಲ್ಲಿ ರಿಸರ್ವೆ ಸಂಬಂಧಿಸಿದ ನೂರಾರು ದೂರುಗಳು ಕಡತದಲ್ಲೇ ಉಳಿದುಕೊಂಡಿವೆ.

Vijaya Karnataka 18 Jun 2018, 5:00 am
ಕಾಸರಗೋಡು: ಪರೀಕ್ಷಣಾರ್ಥ ಕಂದಾಯ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಿದ ಭೂಮಿಯ ರೀ ಸರ್ವೆ ಪ್ರಕ್ರಿಯೆಗಳು ಯಶಸ್ವಿಯಾಗಿರುವುದಾಗಿ ಸರಕಾರ ಹೇಳುತ್ತಿದ್ದರು ನಾನಾ ಗ್ರಾಮ ಕಚೇರಿಗಳ ವ್ಯಾಪ್ತಿಯಲ್ಲಿ ರಿಸರ್ವೆ ಸಂಬಂಧಿಸಿದ ನೂರಾರು ದೂರುಗಳು ಕಡತದಲ್ಲೇ ಉಳಿದುಕೊಂಡಿವೆ.
Vijaya Karnataka Web
ರೀ ಸರ್ವೆಯ ಲೋಪಗಳಿಂದ ಬ್ಯಾಂಕ್‌ ಸಾಲಗಳಿಗೆ ಸಮಸ್ಯೆ


ಹೊಸದುರ್ಗ ತಾಲೂಕು ಕಚೇರಿಯಲ್ಲಿ ರೀಸರ್ವೆ ಸಂಬಂಧಿಸಿದ ಅಸಂಖ್ಯಾತ ದೂರುಗಳು ಉಳಿದುಕೊಂಡಿವೆ.

ರಿಸರ್ವೆ ನಡೆಸಿದಾಗ ಹಲವರಿಗೆ ದಾಖಲೆಯಲ್ಲಿದ್ದಷ್ಟು ಭೂಮಿ ಇಲ್ಲ. ಆದರೆ ಆವರಣ ಗೋಡೆಯ ಒಳಗೆ ಅಳೆದು ನೋಡಿದಾಗಲೂ ಭೂಮಿ ಕಡಿಮೆಯಾಗಿರುವುದು ಯಾಕೆ ಎಂಬುದು ಹಲವರಿಗೆ ಅರ್ಥವಾಗುತ್ತಿಲ್ಲ. ಸರ್ವೆ ನಡೆಸಿದವರ ತಪ್ಪು ಎಂದು ಹೇಳಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ನೂರಾರು ದೂರುಗಳು ಪರಿಹಾರ ಕಾಣದೆ ಉಳಿದುಕೊಂಡಿವೆ.

ಈ ಅಳತೆಯಂತೆ ತೆರಿಗೆ ಪಾವತಿಸಿದರೆ ದಾಖಲೆಯಲ್ಲಿ ಕೂಡಾ ಇಷ್ಟೇ ಭೂಮಿ ಉಳಿಯಬಹುದು ಎಂಬ ಭಯದಿಂದ ಹಲವರು ಮರು ಸರ್ವೆ ನಡೆಸಲು ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗೆ ಎರಡನೇ ಬಾರಿ ಭೂಮಿ ಅಳೆಯಲು, ಸಮಸ್ಯೆ ಪರಿಹರಿಸಲು ಹಲವು ಮಂದಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಲ್ಯಾಂಡ್‌ ಟ್ರ್ಯೂಬನಲ್‌ನಲ್ಲಿ ಅದಕ್ಕೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿಯೊಂದಿಗೆ ಸ್ಥಳದ ಸ್ಕೆಚ್‌ ಕೂಡಾ ಹಾಜರುಪಡಿಸಬೇಕಿದೆ. ಬಳಿಕ ಅಧಿಕಾರಿಗಳನ್ನು ನೇರವಾಗಿ ಕೊಂಡೊಯ್ದು ಸ್ಥಳ ಎಷ್ಟಿರುವುದಾಗಿ ತಿಳಿಸಬೇಕು. ಇದಕ್ಕಾಗಿ ಕನಿಷ್ಠ ಒಂದು ವರ್ಷವಾದರೂ ಕಾಯಬೇಕಾದ ಸ್ಥಿತಿ ಇದೆ. ಅರ್ಜಿಯನುಸಾರ ಶೀಘ್ರ ಕ್ರಮ ಕೈಗೊಳ್ಳಲು ಗ್ರಾಮ, ತಾಲೂಕು ಕಚೇರಿಗಳಲ್ಲಿ ಸರ್ವೇಯರ್‌ಗಳಿಲ್ಲ. ಆದುದರಿಂದ ತಿರ್ಮಾನ ಕೈಗೊಳ್ಳಲು ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ.

ಭೂಮಿಗೆ ಸಂಬಂಧಿಸಿ ರೀಸರ್ವೆ ಸಮಸ್ಯೆಗಳಿದ್ದರೆ ವಿದ್ಯಾರ್ಥಿಗಳಿಗೆ ಬ್ಯಾಂಕ್‌ ಲೋನ್‌ ಮೊದಲಾದವುಗಳನ್ನು ತೆಗೆಯಲು ಸಾಧ್ಯವಾಗದ ಸ್ಥಿತಿಯುಂಟಾಗಿದೆ. ಮೂವತ್ತು-ನಲ್ವತ್ತು ವರ್ಷಗಳಿಂದ ಉಪಯೋಗಿಸುತ್ತಿದ್ದ ಭೂಮಿಗೆತೆರಿಗೆ ಸ್ವೀಕರಿಸುತ್ತಿಲ್ಲ ಎಂದು ಹೇಳುವಾಗ ಆಗುವ ಸಂಕಟವನ್ನು ಕಂದಾಯ ಅಧಿಕಾರಿಗಳು, ಸಚಿವರು ಅರ್ಥಮಾಡಿಕೊಳ್ಳಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ