ಆ್ಯಪ್ನಗರ

ಸ್ವದೇಶಿ ಉದ್ಯಮಗಳ ವಿಸ್ತರಣೆಯೇ ಕುಟುಂಬಶ್ರೀಯ ಗುರಿ: ಚಂದ್ರಶೇಖರನ್‌

ಸ್ವದೇಶಿ ಉದ್ಯಮಗಳ ಮೂಲಕ ಮಾರಾಟ ಸಾಧ್ಯತೆಯನ್ನು ಕಂಡುಕೊಳ್ಳುವುದೇ ಕುಟುಂಬಶ್ರೀ ಮುಖ್ಯ ಗುರಿ ಎಂದು ರಾಜ್ಯ ಕಂದಾಯ ಖಾತೆ ಸಚಿವ ಇ. ಚಂದ್ರಶೇಖರನ್‌ ಹೇಳಿದರು.

Vijaya Karnataka 7 Jul 2018, 9:30 pm
ಕಾಸರಗೋಡು: ಸ್ವದೇಶಿ ಉದ್ಯಮಗಳ ಮೂಲಕ ಮಾರಾಟ ಸಾಧ್ಯತೆಯನ್ನು ಕಂಡುಕೊಳ್ಳುವುದೇ ಕುಟುಂಬಶ್ರೀ ಮುಖ್ಯ ಗುರಿ ಎಂದು ರಾಜ್ಯ ಕಂದಾಯ ಖಾತೆ ಸಚಿವ ಇ. ಚಂದ್ರಶೇಖರನ್‌ ಹೇಳಿದರು.
Vijaya Karnataka Web
ಸ್ವದೇಶಿ ಉದ್ಯಮಗಳ ವಿಸ್ತರಣೆಯೇ ಕುಟುಂಬಶ್ರೀಯ ಗುರಿ: ಚಂದ್ರಶೇಖರನ್‌


ಶುಕ್ರವಾರ ಚೆರ್ವತ್ತೂರಿನಲ್ಲಿ ನೀಲೇಶ್ವರ ಬ್ಲಾಕ್‌ ಸ್ಟಾರ್ಟಫ್‌ ವಿಲೇಜ್‌ ಎಂಟರ್‌ಪ್ರೈಸಸ್‌ ಪ್ರೋಗ್ರಾಂ ಯೋಜನೆ ಉದ್ಘಾಟಿಸಿ ಮಾತನಾಡಿದರು.

ಸ್ವದೇಶಿ ಉತ್ಪನ್ನಗಳ ಬಳಕೆಯತ್ತ ನಮ್ಮ ಹವ್ಯಾಸವನ್ನು ಬೆಳೆಸಿಕೊಳ್ಳುವ ಸಲುವಾಗಿ ಕುಟುಂಬಶ್ರೀಯ ಇಂತಹ ಯೋಜನೆಗಳು ಸಹಕಾರಿಯಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಟಾರ್ಟಫ್‌ಗಳು ಆರಂಭಗೊಳ್ಳುವ ಮೂಲಕ ಸ್ವದೇಶಿ ಉತ್ಪನ್ನಗಳ ಜನರ ಆಸಕ್ತಿ ಬೆಳೆಯಲು ಸಾಧ್ಯವಾಗುವುದು ಎಂದು ಹೇಳಿದರು.

ಶಾಸಕ ಎಂ. ರಾಜಗೋಪಾಲನ್‌ ಅಧ್ಯಕ್ಷ ತೆ ವಹಿಸಿದ್ದರು. ಯೋಜನೆಯ ಮಾಹಿತಿ ಪುಸ್ತಕವನ್ನು ಸಂಸದ ಪಿ. ಕರುಣಾಕರನ್‌ ಕುಟುಂಬಶ್ರೀ ಜಿಲ್ಲಾ ಸಹ ಸಂಯೋಜಕ ಟಿ.ಟಿ. ಸುರೇಂದ್ರನ್‌ ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಜಿಪಂ ಅಧ್ಯಕ್ಷ ಎಜಿಸಿ ಬಶೀರ್‌ ಗ್ರಾಮ ಕಿರಣ್‌ ಉದ್ಘಾಟಿಸಿದರು. ಎಲ್‌ಇಡಿ ಬಲ್ಬ್ಗಳ ಮೊದಲ ಮಾರಾಟವನ್ನು ನೀಲೇಶ್ವರ ಬ್ಲಾಕ್‌ ಪಂಚಾಯಿತಿ ಅಧ್ಯಕ್ಷ ರಾದ ರವಿ ಪಿ. ಜಾನಕಿ ಚೇರ್ವತ್ತೂರು ಗ್ರಾಪಂ ಉಪಾಧ್ಯಕ್ಷೆ ಪ್ರಮೀಳಾ ಅವರಿಗೆ ನೀಡಿ ಉದ್ಘಾಟಿಸಿದರು. ವಲಿಯ ಪರಂಬ ಗ್ರಾಪಂ ಅಧ್ಯಕ್ಷ ಅಬ್ದುಲ್‌ ಜಬ್ಬಾರ್‌ ಎಂ.ಟಿ., ಪಿಲಿಕ್ಕೋಡು ಗ್ರಾಪಂ ಅಧ್ಯಕ್ಷ ಟಿ.ವಿ. ಶ್ರೀಧರನ್‌, ಪಡನ್ನ ಗ್ರಾಪಂ ಅಧ್ಯಕ್ಷೆ ಪಿ.ಸಿ. ಫೌಸಿಯಾ, ಚೆರ್ವತ್ತೂರು ಗ್ರಾಪಂ ಕಾರ್ಯದರ್ಶಿ ಟಿ.ವಿ. ಪ್ರಭಾಕರನ್‌, ಕುಟುಂಬಶ್ರೀ ಗರ್ವನಿಂಗ್‌ ಬಾಡಿ ಸದಸ್ಯ ಬೇಬಿ ಬಾಲಕೃಷ್ಣನ್‌, ಬ್ಲಾಕ್‌ ಪಂ. ಸದಸ್ಯ ಕುಂಞಿರಾಮನ್‌ ಮತ್ತಿತರರು ಮಾತನಾಡಿದರು. ಚೆರ್ವತ್ತೂರು ಗ್ರಾಪಂ ಅಧ್ಯಕ್ಷ ಮಾಧವನ್‌ ಸ್ವಾಗತಿಸಿ, ಕುಟುಂಬಶ್ರೀ ಐಡಿಎಂಸಿ ಹರಿದಾಸನ್‌ ವಂದಿಸಿದರು.

ನೀಲೇಶ್ವರ ಬ್ಲಾಕ್‌ ವ್ಯಾಪ್ತಿಯ ಆರು ಗ್ರಾಪಂನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಎರಡು ಸಾವಿರದಷ್ಟು ಮೈಕ್ರೋ ಉದ್ಯಮ ಆರಂಭಗೊಂಡಿದೆ. ಜಿಲ್ಲೆಯ ನೀಲೇಶ್ವರ ಬ್ಲಾಕ್‌ನಲ್ಲಿ ಆರಂಭಿಸಿದ ಈ ಉದ್ಯಮವನ್ನು ಎರಡನೇ ಹಂತದಲ್ಲಿ ಕಾರಡ್ಕ ಬ್ಲಾಕ್‌ನಲ್ಲಿ ಆರಂಭಿಸಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ