ಆ್ಯಪ್ನಗರ

ಕಾಸರಗೋಡು ನಗರಾಭಿವೃದ್ಧಿಗೆ ಬೃಹತ್‌ ಯೋಜನೆ

ಕಾಸರಗೋಡು ನಗರದ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾ ಆಡಳಿತ ಕೂಟ ಬೃಹತ್‌ ಯೋಜನೆಯನ್ನು ತರಲಿದೆ. ಈ ಕುರಿತಾ ಒಪ್ಪಂದಕ್ಕೆ ಕಾಸರಗೋಡು ಶಾಸಕ ಎನ್‌. ಎ. ನೆಲ್ಲಿಕುನ್ನು ಹಾಗೂ ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು ಸಹಿ ಹಾಕಿದ್ದಾರೆ.

Vijaya Karnataka 1 Nov 2018, 5:00 am
ಕಾಸರಗೋಡು: ಕಾಸರಗೋಡು ನಗರದ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾ ಆಡಳಿತ ಕೂಟ ಬೃಹತ್‌ ಯೋಜನೆಯನ್ನು ತರಲಿದೆ. ಈ ಕುರಿತಾ ಒಪ್ಪಂದಕ್ಕೆ ಕಾಸರಗೋಡು ಶಾಸಕ ಎನ್‌. ಎ. ನೆಲ್ಲಿಕುನ್ನು ಹಾಗೂ ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು ಸಹಿ ಹಾಕಿದ್ದಾರೆ.
Vijaya Karnataka Web
ಕಾಸರಗೋಡು ನಗರಾಭಿವೃದ್ಧಿಗೆ ಬೃಹತ್‌ ಯೋಜನೆ


ಜಿಲ್ಲಾ ಪ್ರವಾಸೋದ್ಯಮ ಭಡ್ತಿ ಸಮಿತಿಯ ಸಹಕಾರದೊಂದಿಗೆ ಹತ್ತು ಕೋಟಿ ರೂ. ವೆಚ್ಚದಲ್ಲಿ ನಗರದ ನೋಟವನ್ನೇ ಬದಲಾಯಿಸಲಾಗುವುದು. ಇದಕ್ಕಾಗಿ ನ. 6ರಂದು ಕಾಸರಗೋಡು ನಗರದಲ್ಲಿ ಸರ್ವೆ ನಡೆಯಲಿದೆ.

ಸಿ ಅರ್ತ್‌ ಕಂಪನಿಗೆ ಇದರ ಉಸ್ತುವಾರಿ ನೀಡಲಾಗಿದೆ. ಕಾಸರಗೋಡು ನಗರದ ವಿದ್ಯಾನಗರದಿಂದ ಅಡ್ಕತ್ತಬೈಲಿನವರೆಗಿನ ಸ್ಥಳದಲ್ಲಿ ರಸ್ತೆ ಅಭಿವೃದ್ಧಿಗೊಳಿಸಲಾಗುವುದು. ನಗರದಲ್ಲಿ ಸಂಚಾರ ದಟ್ಟಣೆ ಪರಿಹರಿಸಲು ಪೇ ಪಾರ್ಕಿಂಗ್‌ ಏರ್ಪಡಿಸಲಾಗುವುದು. ತ್ಯಾಜ್ಯ ನಿರ್ಮೂಲನೆಗಾಗಿ ಬಿನ್‌ ಫ್ರೀ ವಲಯವಾಗಿ ನಗರವನ್ನು ಮಾರ್ಪಾಡುಗೊಳಿಸಲಾಗುವುದು.

ನಗರದ ಅಂಗಡಿಗಳನ್ನು ರಾತ್ರಿ 11 ಗಂಟೆವರೆಗೆ ತೆರೆಯುವಂತೆ ಸೌಕರ್ಯ ಏರ್ಪಡಿಸಲಾಗುವುದು, ಈ ವೇಳೆಗಳಲ್ಲಿ ಜನರ ಅನುಕೂಲಕ್ಕಾಗಿಬಸ್‌ ಸೇವೆ ಮೊದಲಾದ ಸಾರಿಗೆ ವ್ಯವಸ್ಥೆಗಳನ್ನು ಪರಿಷ್ಕರಿಸಲಾಗುವುದು. ರಾತ್ರಿ ವೇಳೆಗಳಲ್ಲಿ ಕಾಸರಗೋಡಿನ ಕ್ಲಬ್‌ಗಳು, ವಾಚನಾಲಯಗಳು, ಕಾರ್ಯಪ್ರವೃತ್ತಗೊಳಿಸಲಿರುವ ಯೋಜನೆಯನ್ನು ತರಲಾಗುವುದು,

ತಳಂಗರೆಯಂತಹ ಕರಾವಳಿ ಪ್ರದೇಶಗಳಲ್ಲಿ ಹೂವುತೋಟಗಳು, ಮಕ್ಕಳ ಪಾರ್ಕ್‌ ಸಜ್ಜುಗೊಳಿಸಲಾಗುವುದು. ಬೀದಿ ವ್ಯಾಪಾರಿಗಳನ್ನು ಸಂಪೂರ್ಣವಾಗಿ ನಗರದಿಂದ ಸ್ಥಳಾಂತರಿಸಲಾಗುವುದು, ನಗರದ ಮೈದಾನಗಳಲ್ಲಿ ನಾನಾ ರೀತಿಯ ಮಾನಸಿಕ ಉಲ್ಲಾಸಪರವಾದ ಕಾರ್ಯಕ್ರಮಗಳನ್ನು ದಿನಕ್ಕೊಂದರಂತೆ ಪ್ರದರ್ಶಿಸಲಾಗುವುದು, ಕಾಸರಗೋಡು ನಗರವನ್ನು ವಿದೇಶ ನಗರದಂತೆ ಅಭಿವೃದ್ಧಿಗೊಳಿಸಲು ಜಿಲ್ಲಾ ಆಡಳಿತ ಕೂಟ ತಯಾರಿ ನಡೆಸುತ್ತಿರುವುದಾಗಿ ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ ಬಾಬು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ