ಆ್ಯಪ್ನಗರ

ಭಕ್ತರಿಗೆ ಜೈಲು: ಸರಕಾರದ ವಿರುದ್ಧ ಜನಾಕ್ರೋಶ: ಶ್ರೀಕಾಂತ್‌

ಶಬರಿಮಲೆ ಸನ್ನಿಧಾನದಲ್ಲಿ ದರ್ಶನಕ್ಕೆ ತಲುಪುವ ಅಯ್ಯಪ್ಪ ಭಕ್ತರಿಗೆ ಜೈಲು, ಸುಪ್ರೀಂ ಕೋರ್ಟ್‌ ತೀರ್ಪು ಜಾರಿಗೊಳಿಸುವುದಕ್ಕೆ ಮಾತ್ರವಾಗಿ ಕಚ್ಚೆಕಟ್ಟಿ ಇಳಿಯುವ ರಹನಾ ಫಾತಿಮಾಳಂತಹ ನಾಸ್ತಿಕರಿಗೆ ಪಲ್ಲಕ್ಕಿ ವ್ಯವಸ್ಥೆಗೊಳಿಸುವ ಪಿಣರಾಯಿ ಸರಕಾರದ ವಿರುದ್ಧ ಜನರ ಆಕ್ರೋಶ ತೀವ್ರವಾಗಲಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ. ಶ್ರೀಕಾಂತ್‌ ಮುನ್ನೆಚ್ಚರಿಕೆ ನೀಡಿದ್ದಾರೆ.

Vijaya Karnataka 19 Nov 2018, 5:00 am
ಕಾಸರಗೋಡು: ಶಬರಿಮಲೆ ಸನ್ನಿಧಾನದಲ್ಲಿ ದರ್ಶನಕ್ಕೆ ತಲುಪುವ ಅಯ್ಯಪ್ಪ ಭಕ್ತರಿಗೆ ಜೈಲು, ಸುಪ್ರೀಂ ಕೋರ್ಟ್‌ ತೀರ್ಪು ಜಾರಿಗೊಳಿಸುವುದಕ್ಕೆ ಮಾತ್ರವಾಗಿ ಕಚ್ಚೆಕಟ್ಟಿ ಇಳಿಯುವ ರಹನಾ ಫಾತಿಮಾಳಂತಹ ನಾಸ್ತಿಕರಿಗೆ ಪಲ್ಲಕ್ಕಿ ವ್ಯವಸ್ಥೆಗೊಳಿಸುವ ಪಿಣರಾಯಿ ಸರಕಾರದ ವಿರುದ್ಧ ಜನರ ಆಕ್ರೋಶ ತೀವ್ರವಾಗಲಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ. ಶ್ರೀಕಾಂತ್‌ ಮುನ್ನೆಚ್ಚರಿಕೆ ನೀಡಿದ್ದಾರೆ.
Vijaya Karnataka Web
ಭಕ್ತರಿಗೆ ಜೈಲು: ಸರಕಾರದ ವಿರುದ್ಧ ಜನಾಕ್ರೋಶ: ಶ್ರೀಕಾಂತ್‌


ಶನಿವಾರ ಇರುಮುಡಿ ಕಟ್ಟದೊಂದಿಗೆ ಸನ್ನಿಧಾನಕ್ಕೆ ಅಯ್ಯಪ್ಪ ದರ್ಶನಕ್ಕಾಗಿ ಹೋಗುತ್ತಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್‌ ಅವರನ್ನು ಪಕ್ಷ ದ ಹೆಸರು ಹೇಳಿ ದರ್ಶನ ಮಾಡಲು ತಡೆದ ಪೊಲೀಸರ ಕ್ರಮವನ್ನು ಖಂಡಿಸಿ ಕರಂದಕ್ಕಾಡಿನಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಡೆದ ರಸ್ತೆ ದಿಗ್ಬಂಧನವನ್ನು ಉದ್ಘಾಟಿಸಿ ಮಾತನಾಡಿದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ಇಲ್ಲದ ರೀತಿಯಲ್ಲಿ ಪೊಲೀಸ್‌ ರಾಜ್‌ ಜಾರಿಗೊಳಿಸುವ ಪಿಣರಾಯಿ ವಿಜಯನ್‌ ಕಾಲದ ಮುಂದೆ ಲೆಕ್ಕ ಹೇಳಬೇಕಾಗಲಿದೆ. ಜ್ಯುಡೀಶಿಯರಿಯನ್ನು ಕೂಡಾ ಬೆದರಿಸಿ ಕೆ. ಸುರೇಂದ್ರನ್‌ನ ವಿರುದ್ಧ ಕೈಗೊಂಡ ಕ್ರಮಗಳನ್ನು ಪಿಣರಾಯಿ ಪೊಲೀಸ್‌ ಕೈಗೊಂಡಿದೆ. ಶಬರಿಮಲೆಯಲ್ಲಿ ಆಚಾರಗಳ ಉಲ್ಲಂಘನೆ ನಡೆಸಿ ಭಕ್ತಜನರನ್ನು ಹೋರಾಟದ ರಕ್ತದಲ್ಲಿ ಮುಳುಗಿಸಿ ಕೊಲ್ಲಲಾಗುವುದು ಎಂಬ ಪಿಣರಾಯಿ ವಿಜಯನ್‌ನ ವ್ಯಾಮೋಹ ಮಾತ್ರವಾಗಿದೆ ಎಂದರು.

ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ಜಿಲ್ಲಾ ಉಪಾಧ್ಯಕ್ಷ ರಾದ ನ್ಯಾಯವಾದಿ ಸದಾನಂದ ರೈ, ಸವಿತ ಟೀಚರ್‌, ಜಿಲ್ಲಾ ಕೋಶಾಧಿಕಾರಿ ಜಿ. ಚಂದ್ರನ್‌, ಬಿಜೆಪಿ ಉದುಮ ಮಂಡಲ ಅಧ್ಯಕ್ಷ ಕೆ. ಟಿ. ಪುರುಷೋತ್ತಮನ್‌, ಉದುಮ ಮಂಡಲ ಪ್ರಧಾನ ಕಾರ್ಯದರ್ಶಿ ಎನ್‌. ಬಾಬುರಾಜ್‌ ಮತ್ತಿತರರು ಮಾತನಾಡಿದರು.

ಕೌನ್ಸಿಲರ್‌ಗಳಾದ ರವಿ ಕರಂದಕ್ಕಾಡು, ದುಗ್ಗಪ್ಪ ಪೂಜಾರಿ, ಸುಜಿತ್‌, ಕೆ. ಜಿ. ಮನೋಹರನ್‌, ಉಮಾಕಡಪ್ಪುರ ಮತ್ತಿತರರು ನೇತೃತ್ವ ನೀಡಿದರು. ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಸ್ವಾಗತಿಸಿ, ಮಂಡಲ ಪ್ರಧಾನ ಕಾರ್ಯದರ್ಶಿ ಹರೀಶ್‌ ನಾರಂಪಾಡಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ