ಆ್ಯಪ್ನಗರ

ಜಲಸಂಪನ್ಮೂಲಗಳಲ್ಲಿ ಬೆರೆತ ಎಂಡೋಸಲ್ಫಾನ್‌: ವರದಿ

: ಕೇರಳ-ಕರ್ನಾಟಕ ರಾಜ್ಯದ ಗಡಿ ಪಂಚಾಯಿತಿನ ಕೊಳವೆ ಬಾವಿಗಳಲ್ಲಿ, ಜಲಸಂಪನ್ಮೂಲಗಳಲ್ಲಿ ಎಂಡೋಸಲ್ಫಾನ್‌ ಕೀಟನಾಶಕ ಬೆರೆತಿರುವುದಾಗಿ ವರದಿಯಾಗಿದೆ.

Vijaya Karnataka 23 Nov 2018, 5:00 am
ಕಾಸರಗೋಡು: ಕೇರಳ-ಕರ್ನಾಟಕ ರಾಜ್ಯದ ಗಡಿ ಪಂಚಾಯಿತಿನ ಕೊಳವೆ ಬಾವಿಗಳಲ್ಲಿ, ಜಲಸಂಪನ್ಮೂಲಗಳಲ್ಲಿ ಎಂಡೋಸಲ್ಫಾನ್‌ ಕೀಟನಾಶಕ ಬೆರೆತಿರುವುದಾಗಿ ವರದಿಯಾಗಿದೆ.
Vijaya Karnataka Web
ಜಲಸಂಪನ್ಮೂಲಗಳಲ್ಲಿ ಬೆರೆತ ಎಂಡೋಸಲ್ಫಾನ್‌: ವರದಿ


ಕೇರಳ-ಕರ್ನಾಟಕ ಗಡಿಭಾಗದ ಕೇರಳ ತೋಟಗಾರಿಕಾ ನಿಗಮದ ಸ್ಥಳಕ್ಕೆ ಸಮೀಪ ಕರ್ನಾಟಕ ಗಡಿ ಭಾಗದಲ್ಲಿರುವ ನೆಟ್ಟಣಿಗೆ ಮುಡ್ನೂರು ಪಂಚಾಯಿತಿನ ಬಾವಿ, ಕೊಳವೆ ಬಾವಿ, ಜಲಸಂಪನ್ಮೂಲಗಳಲ್ಲಿ ಎಂಡೋಸಲ್ಫಾನ್‌ ಕೀಟನಾಶಕ ಬೆರೆತಿರುವುದಾಗಿ ಪತ್ತೆ ಹಚ್ಚಲಾಗಿದೆ.

ಬೆಂಗಳೂರು ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಮಲೀನ ನೀರು ತಪಾಸಣಾ ಘಟಕದ ಡಾ. ಕೆ. ವಿ. ರಾಜೇಂದ್ರನ್‌ ಅವರು ನೀರಿನಲ್ಲಿ ಕೀಟನಾಶಕ ಪತ್ತೆಹಚ್ಚಿರುವುದಾಗಿ ಕರ್ನಾಟಕ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಈ ಕುರಿತು ನೀಡಿದ ವರದಿ ಕಡತದಲ್ಲೇ ಉಳಿದುಕೊಂಡಿರುವುದಾಗಿ ಸ್ಥಳೀಯ ನಿವಾಸಿಗಳು ದೂರುತ್ತಿದ್ದಾರೆ. ಮಲೀನ ನೀರು ಮಂಡಳಿ ಸಲ್ಲಿಸಿದ ವರದಿ ಪ್ರಕಾರ ನೀರಿನಲ್ಲಿ ಅಲ್ಫ ಎಂಡೋಸಲ್ಫಾನ್‌ 0.025ಗ್ರಾಂ, ಬೆಟ ಎಂಡೋಸಲ್ಫಾನ್‌ 0.025 ಮೈಕ್ರೋಗ್ರಾಂ ಲೀಟರ್‌ ಪತ್ತೆಯಾಗಿದೆ. ಒಂದು ಲೀಟರ್‌ ನೀರಿನಲ್ಲಿ ನಡೆಸಿದ ತಪಾಸಣೆಯಲ್ಲಿ ಇದನ್ನು ಪತ್ತೆಹಚ್ಚಲಾಗಿದೆ. ಮನುಷ್ಯ ಶರೀರದಲ್ಲಿ 0.04 ಮೈಕ್ರೋ ಗ್ರಾಂ ಲೀಟರ್‌ ಮಾತ್ರವೇ ಪ್ರವೇಶಿಸಲು ಸಾಧ್ಯ. ಇಲ್ಲದಿದ್ದರೆ ಶರೀರದ ನಾನಾ ಅವಯವಗಳಿಗೆ ಇದು ಬಾಧಕವಾಗಲಿದೆ ಎಂದು ಹೇಳಲಾಗುತ್ತಿದೆ.

ಕೇರಳ ತೋಟಗಾರಿಕಾ ನಿಗಮದ ಅಧೀನದಲ್ಲಿರುವ 141.30 ಹೆಕ್ಟೇರ್‌ ಸ್ಥಳದ ಆರು ಬಾವಿಗಳಲ್ಲಿ ವರ್ಷಗಳ ಹಿಂದೆ ಎಂಡೋಸಲ್ಫಾನ್‌ ಕೀಟನಾಶಕ ಹೂತಿಡಲಾಗಿತ್ತು. ಇದು ನೀರಿನಲ್ಲಿ ಬೆರೆತು ಸಮೀಪದ ಬಾವಿಗಳಲ್ಲಿ, ಜಲಸಂಪನ್ಮೂಲಗಳಲ್ಲಿ ಬೆರೆತಿರುವುದಾಗಿ ಸೂಚನೆಯಿದೆ. ಈ ಕುರಿತು ಎರಡೂ ಸರಕಾರಗಳು ತುರ್ತು ಕ್ರಮ ಕೈಗೊಂಡು ಹೂತಿಟ್ಟ ಎಂಡೋಸಲ್ಫಾನ್‌ ಕೀಟನಾಶಕ ಬ್ಯಾರಲ್‌ಗಳನ್ನು ಹೊರತೆಗೆದು ನಿಷ್ಕ್ರಿಯಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ