ಆ್ಯಪ್ನಗರ

ಕೋಟಿ ರೂ. ಮೌಲ್ಯದ ಗಾಂಜಾ ವಶ : ಒಬ್ಬನ ಬಂಧನ

ಆಂಧ್ರದಿಂದ ಕೇರಳಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ 112 ಕಿಲೋ ಗಾಂಜಾ ಸಹಿತ ಚಿತ್ತಾರಿಕ್ಕಲ್‌ ಕುನ್ನಂಗೈ ನಿವಾಸಿ ಸಿ.ಎಸ್‌.ನೌಫಲ್‌(32) ಎಂಬಾತನನ್ನು ಬಂಧಿಸಿರುವುದಾಗಿ ಎಸ್ಪಿ ಡಾ. ಎ.ಶ್ರೀನಿವಾಸ್‌ ಕಾಞಂಗಾಡಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Vijaya Karnataka 5 Feb 2019, 5:00 am
ಕಾಸರಗೋಡು: ಆಂಧ್ರದಿಂದ ಕೇರಳಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ 112 ಕಿಲೋ ಗಾಂಜಾ ಸಹಿತ ಚಿತ್ತಾರಿಕ್ಕಲ್‌ ಕುನ್ನಂಗೈ ನಿವಾಸಿ ಸಿ.ಎಸ್‌.ನೌಫಲ್‌(32) ಎಂಬಾತನನ್ನು ಬಂಧಿಸಿರುವುದಾಗಿ ಎಸ್ಪಿ ಡಾ. ಎ.ಶ್ರೀನಿವಾಸ್‌ ಕಾಞಂಗಾಡಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Vijaya Karnataka Web
ಕೋಟಿ ರೂ. ಮೌಲ್ಯದ ಗಾಂಜಾ ವಶ : ಒಬ್ಬನ ಬಂಧನ


ಇನ್ನೊಬ್ಬ ಆರೋಪಿ ಕುರುಂಜೇರಿಯ ಕೋನಿ ವರ್ಗೀಸ್‌ ಎಂಬಾತ ಪರಾರಿಯಾಗಿದ್ದು ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ. ವಶಪಡಿಸಿಕೊಂಡಿರುವ ಗಾಂಜಾದ ಒಟ್ಟು ಮೌಲ್ಯ ಒಂದು ಕೋಟಿ ರೂ. ಎಂದು ಎಸ್ಪಿ ತಿಳಿಸಿದರು.

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಿಂದ ಇನ್ನೋವಾ ಕಾರಿನಲ್ಲಿ ಗಾಂಜಾ ಸಾಗಿಸಿದ್ದು ಚಿತ್ತಾರಿಕ್ಕಲ್‌ ಠಾಣಾ ವ್ಯಾಪ್ತಿಯ ಕಾಟುಮನಿ ಬಳಿ ಭಾನುವಾರ ರಾತ್ರಿ ಚಿತ್ತಾರಿಕ್ಕಲ್‌ ಎಸ್‌ಐ ರಂಜಿತ್‌ ರವೀಂದ್ರನ್‌ ನೇತೃತ್ವದ ಪೊಲೀಸ್‌ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

ಆರೋಪಿಗಳು ಕಾರಿನ ಹಿಂಭಾಗದಲ್ಲಿ ಗಾಂಜಾವನ್ನು ಒಂದು ಕೆಜಿ ಗ್ರಾಂ ಅಳತೆಯ ಪೊಟ್ಟಣಗಳÜನ್ನಾಗಿಸಿ ಸಾಗಿಸಿದ್ದಾರೆ. ಅಲ್ಲಿ ಕೆಜಿಗೆ 6000ರೂ. ನೀಡಿ ಖರೀದಿಸಿ ಕೇರಳದಲ್ಲಿ ಅದನ್ನು 30,000ರೂ.ಗೆ ಮಾರಾಟ ಮಾಡುತ್ತಿದ್ದುದಾಗಿ ಆರೋಪಿಯ ತನಿಖೆಯಿಂದ ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಸಾಗಾಟ ಹೆಚ್ಚಾಗುತ್ತಿದ್ದು, ಆಂಧ್ರದಿಂದ ಬೆಂಗಳೂರು ಮೂಲಕ ಮಂಗಳೂರಿನ ಕೆಲವು ಏಜೆಂಟ್‌ಗಳ ಸಹಾಯದಿಂದ ಕೇರಳಕ್ಕೆ ಸಾಗಿಸುವ ಜಾಲ ವ್ಯಾಪಿಸಿದೆ. ಕಾಸರಗೋಡು ಜಿಲ್ಲೆಯ ಕುಂಬಳೆ, ಉಪ್ಪಳ ಮತ್ತು ಮಂಜೇಶ್ವರ ಮುಂತಾದೆಡೆæ ಕೇಂದ್ರೀಕರಿಸಿ ಗಾಂಜಾ ಮಾಫಿಯಾ ಕಾರ್ಯಾಚರಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ