Please enable javascript.ಬೇಳ ಶೋಕಮಾತಾ ಪುಣ್ಯಕ್ಷೇತ್ರದಲ್ಲಿ ಸಂಭ್ರಮ - ಬೇಳ ಶೋಕಮಾತಾ ಪುಣ್ಯಕ್ಷೇತ್ರದಲ್ಲಿ ಸಂಭ್ರಮ - Vijay Karnataka

ಬೇಳ ಶೋಕಮಾತಾ ಪುಣ್ಯಕ್ಷೇತ್ರದಲ್ಲಿ ಸಂಭ್ರಮ

ವಿಕ ಸುದ್ದಿಲೋಕ 26 Dec 2014, 5:45 pm
Subscribe

ಜಿಲ್ಲೆಯಲ್ಲಿ ಅತಿ ಪುರಾತನ ಹಾಗೂ ಕೇರಳ ಪ್ರವಾಸ್ಯೋದ್ಯಮ ಇಲಾಖೆ ಯಲ್ಲಿ ನೋಂದಣಿ ಗೊಂಡ ಬೇಳ ಶೋಕಮಾತಾ ಪುಣ್ಯಕ್ಷೇತ್ರದಲ್ಲಿ ಕ್ರಿಸ್‌ಮಸ್ ಆಚರಿಸಲಾಯಿತು.

ಬೇಳ ಶೋಕಮಾತಾ ಪುಣ್ಯಕ್ಷೇತ್ರದಲ್ಲಿ ಸಂಭ್ರಮ
ಕುಂಬಳೆ: ಜಿಲ್ಲೆಯಲ್ಲಿ ಅತಿ ಪುರಾತನ ಹಾಗೂ ಕೇರಳ ಪ್ರವಾಸ್ಯೋದ್ಯಮ ಇಲಾಖೆ ಯಲ್ಲಿ ನೋಂದಣಿ ಗೊಂಡ ಬೇಳ ಶೋಕಮಾತಾ ಪುಣ್ಯಕ್ಷೇತ್ರದಲ್ಲಿ ಕ್ರಿಸ್‌ಮಸ್ ಆಚರಿಸಲಾಯಿತು. ಬುಧವಾರ ರಾತ್ರಿ ನಡೆದ ಬಲಿಪೂಜೆಯಲ್ಲಿ ವಂ. ಸ್ವಾಮಿ ವಿಲಿಯಮ್ ಡಿಸಿಲ್ವ ನೇತೃತ್ವ ವಹಿಸಿದ್ದರು.

ಬಲಿಪೂಜೆಯಲ್ಲಿ ಕಾಸರಗೋಡು ವಲಯದ ಪ್ರಧಾನ ಧರ್ಮಗುರು, ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಅತಿ ವಂದನೀಯ ಸ್ವಾಮಿ ವಿನ್ಸೆಂಟ್ ಡಿಸೋಜ ಮಂದಾಳುತ್ವ ನೀಡಿದರು. ವಂದನೀಯ ಸ್ವಾಮಿ ಸಂತೋಷ್ ಡಿಸೋಜ ಉಪಸ್ಥಿತರಿದ್ದರು. ಬಲಿಪೂಜೆಯ ಬಳಿಕ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.

ಗಡಿನಾಡ ಗಾನ ಕೋಗಿಲೆ ಎಂಬ ಬಿರುದು ಪಡೆದ ಬೇಳ ಪುಣ್ಯಕ್ಷೇತ್ರದ ಅನಿತಾ ಡಿಸೋಜ ಅವರ ಯಾದ್ ಸಿ.ಡಿ.ಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಬೇಳ ಪುಣ್ಯಕ್ಷೇತ್ರದ ವಿವರ ಒಳಗೊಂಡ ಕ್ಯಾಲೆಂಡರ್‌ನ್ನು ಅನಾವರಣಗೊಳಿಸಲಾಯಿತು. ಪುಟಾಣಿ ಮಕ್ಕಳು ವಿವಿಧ ನತ್ಯ ಸಾದರಪಡಿಸಿದರು. ಎಲ್ಲ ಭಕ್ತಾದಿಗಳಿಗೆ ಸಂಭ್ರಮದ ಹಬ್ಬದ ದಿನಾಚರಣೆ ಅಂಗವಾಗಿ ಕೇಕ್ ಮತ್ತು ಪಾನೀಯ ವಿತರಿಸಲಾಯಿತು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ