Please enable javascript.ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ವಿತರಣೆ - ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ವಿತರಣೆ - Vijay Karnataka

ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ವಿತರಣೆ

ವಿಕ ಸುದ್ದಿಲೋಕ 19 Jan 2015, 5:19 am
Subscribe

ಜಿಲ್ಲೆಯಲ್ಲಿ ಐದು ವರ್ಷದ ಕೆಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ವಿತರಣೆ ಭಾನುವಾರ ನಾನಾ ಕೇಂದ್ರಗಳಲ್ಲಿ ನಡೆಯಿತು.

ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ವಿತರಣೆ
ಕಾಸರಗೋಡು: ಜಿಲ್ಲೆಯಲ್ಲಿ ಐದು ವರ್ಷದ ಕೆಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ವಿತರಣೆ ಭಾನುವಾರ ನಾನಾ ಕೇಂದ್ರಗಳಲ್ಲಿ ನಡೆಯಿತು. ಪ್ರತ್ಯೇಕ ಸಜ್ಜುಗೊಳಿಸಿದ 44 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಗಳು, ಕುಟುಂಬ ಕ್ಷೇಮ ಉಪಕೇಂದ್ರಗಳು, ಸರಕಾರಿ, ಖಾಸಗಿ ಆಸ್ಪತ್ರೆಗಳು, ಆಯ್ಕೆ ಮಾಡಿದ ಶಾಲೆಗಳು, ವಾಚನಾಲಯಗಳು, ಕ್ಲಬ್‌ಗಳು, ಮದ್ರಸ ಮುಂತಾದ ಸ್ಥಳಗಳಲ್ಲಿ 1213 ಬೂತ್‌ಗಳಲ್ಲಿ ಭಾನುವಾರ ಬೆಳಗ್ಗೆ 7ರಿಂದ ಸಂಜೆ 5ರ ತನಕ ಲಸಿಕೆ ವಿತರಿಸಲಾಯಿತು. ಬಾಕಿಯಾದ ಮಕ್ಕಳಿಗೆ ಸೋಮವಾರ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆ ನೀಡುವರು.

ಪೋಲಿಯೋ ಲಸಿಕೆ ವಿತರಣೆಯ ಜಿಲ್ಲಾಮಟ್ಟದ ಉದ್ಘಾಟನೆಯನ್ನು ಬೆಳಗ್ಗೆ ಕಾಞಂಗಾಡು ಬಸ್‌ನಿಲ್ದಾಣ ಬಳಿ ಶಾಸಕ ಇ.ಚಂದ್ರಶೇಖರನ್ ನಿರ್ವಹಿಸಿದರು. ಆರೋಗ್ಯಾಧಿಕಾರಿ ಡಾ.ಪಿ. ಗೋಪಿನಾಥನ್ ಮೊದಲಾದವರು ಉಪಸ್ಥಿತರಿದ್ದರು.

ಆರೋಗ್ಯ ಇಲಾಖೆ ನಡೆಸಿದ ಸರ್ವೆಯಲ್ಲಿ ಜಿಲ್ಲೆಯಲ್ಲಿ ಐದು ವರ್ಷ ಕೆಳಗಿನ 119199 ಮಕ್ಕಳಿಗೆ ಲಸಿಕೆ ವಿತರಿಸುವ ಗುರಿ ಹೊಂದಲಾಗಿತ್ತು ಬಹುತೇಕ ಕೇಂದ್ರಗಳಲ್ಲಿ ಬೆಳಗ್ಗಿನಿಂದಲೇ ಲಸಿಕೆ ವಿತರಣೆ ಆರಂಭಗೊಂಡಿತ್ತು. ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಲ್ಲಾ ಗಡಿ ಕೇಂದ್ರಗಳನ್ನು ಕೇಂದ್ರೀಕರಿಸಿ 66 ಟ್ರಾನ್ಸಿಸ್ಟ್ ಬೂತ್‌ಗಳನ್ನು ಸಜ್ಜುಗೊಳಿಸಲಾಗಿತ್ತು. ಅಲ್ಲದೆ, ಅಲೆಮಾರಿ ಮಕ್ಕಳು, ಬೀದಿ ಮಕ್ಕಳನ್ನು ಗುರಿಯಿಟ್ಟುಕೊಂಡು 31ಮೊಬೈಲ್ ತಂಡಗಳು ಕಾರ್ಯಾಚರಿಸಿತ್ತು.

ಪಲ್ಸ್‌ಪೋಲಿಯೋ ಲಸಿಕೆ ವಿತರಣೆ ಕೇಂದ್ರಗಳ ನೇತೃತ್ವದಲ್ಲಿ 122ರಷ್ಟು ಸೂಪರ್‌ವೈಸರ್‌ಗಳನ್ನು ನೇಮಿಸ ಲಾಗಿತ್ತು. ಗೃಹಸಂದರ್ಶನಕ್ಕಾಗಿ 291 ಸೂಪರ್‌ವೈಸರ್‌ಗಳನ್ನು ನೇಮಿಸ ಲಾಗಿದ್ದು, 8240 ಸ್ವಯಂಸೇವಕರ ಸೇವೆ ಪಡೆಯಲಾಗುವುದು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಆಯ್ಕೆಯಾದ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ನರ್ಸಿಂಗ್ ವಿದ್ಯಾರ್ಥಿಗಳು, ಕುಟುಂಬಶ್ರೀ, ಇತರ ಸಂಘಟನೆಗಳ ಕಾರ್ಯಕರ್ತರಿಗಾಗಿ ವಿಎಚ್‌ಸಿ ಮಟ್ಟದಲ್ಲಿ ಪ್ರತ್ಯೇಕ ತರಬೇತಿ ನೀಡಲಾಗಿದೆ. ವಿವಿಧ ಸರಕಾರಿ ಇಲಾಖೆಗಳು, ಸ್ಥಳೀಯಾಡಳಿತ ಸಂಸ್ಥೆಗಳು, ರೋಟರಿ ಕ್ಲಬ್, ಐಎಪಿ, ಐಎಂಎ, ಲಯನ್ಸ್ ಕ್ಲಬ್, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ರೆಸಿಡೆನ್ಸ್ ಆಸೋಸಿಯೇಶನ್, ಪ್ರಾದೇಶಿಕ ಕ್ಲಬ್‌ಗಳು, ವ್ಯಾಪಾರಿ ವ್ಯವಸಾಯ ಏಕೋಪನಾ ಸಮಿತಿ, ಮರ್ಚಂಟ್ಸ್ ಆಸೋಸಿಯೇಶನ್‌ನ ಸಹಾಯ ದೊಂದಿಗೆ ಯಶಸ್ವಿಯಾಗಿ ನಡೆಯಿತು.

ಹೊಸದುರ್ಗ: ಚಟ್ಟಂಚಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕೆ ವಿತರಣೆಯ ಉದ್ಘಾಟನೆಯನ್ನು ಚೆಮ್ನಾಡ್ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಚೆಯರ್‌ಪರ್ಸನ್ ಸುಫೈಜ ಅಬೂಬಕ್ಕರ್ ನೆರವೇರಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ