ಆ್ಯಪ್ನಗರ

ಕೇರಳದಲ್ಲಿ ಭಾರೀ ಮಳೆ ಸಾಧ್ಯತೆ

ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ನಾಲ್ಕು ದಿನಗಳಲ್ಲಿ ಮಳೆ ಮತ್ತೆ ಬಿರುಸುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Vijaya Karnataka 25 Sep 2018, 5:00 am
ಕಾಸರಗೋಡು: ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ನಾಲ್ಕು ದಿನಗಳಲ್ಲಿ ಮಳೆ ಮತ್ತೆ ಬಿರುಸುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
Vijaya Karnataka Web  4
ಕೇರಳದಲ್ಲಿ ಭಾರೀ ಮಳೆ ಸಾಧ್ಯತೆ

ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ತನಕ ಯಲ್ಲೋ ಅಲರ್ಟ್‌(ಹಳದಿ ಅಲರ್ಟ್‌) ನೀಡಿದೆ. ಕರ್ನಾಟಕದಿಂದ ಕನ್ಯಾಕುಮಾರಿ ತನಕ ತೀರ ಪ್ರದೇಶಗಳಲ್ಲಿ ಭಾರೀ ಮಳೆ ಸಾಧ್ಯತೆಯಿರುವುದಾಗಿಯೂ ಮುನ್ನೆಚ್ಚೆರಿಕೆ ನೀಡಿದೆ.

ಇಡುಕ್ಕಿ, ತ್ರಿಶ್ಯೂರ್‌, ಪಾಲ್ಘಾಟ್‌, ವಯನಾಡು ಜಿಲ್ಲೆಗಳಲ್ಲಿ ಮಂಗಳವಾರದಿಂದ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ. 64ಎಂಎಂ ನಿಂದ 124 ಎಂಎಂ ತನಕ ಮಳೆಗೆ ಸಾಧ್ಯತೆಯಿದೆ. ಯಲ್ಲೋ ಅಲರ್ಟ್‌ ಹಿಂಪಡೆಯುವ ತನಕ ಜಾಗೃತೆ ವಹಿಸುವಂತೆ ವಿಪತ್ತು ನಿರ್ವಹಣೆ ಪ್ರಾಧಿಕಾರ ಮುನ್ನೆಚ್ಚರಿಕೆ ನೀಡಿದೆ. ಆದರೆ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದೂ ತಿಳಿಸಿದೆ.

ಮುಂಗಾರು ಬಳಿಕ ರಾಜ್ಯದಲ್ಲಿ ಈ ತನಕ ಶೇ.24.55 ಅಧಿಕ ಮಳೆ ಲಭಿಸಿದೆ. ಸರಾಸರಿ 1964.4ಎಂಎಂ ಮಳೆ ಲಭಿಸಬೇಕಾದ್ದಲ್ಲಿ ಈ ಅವಧಿಯಲ್ಲಿ 2446.64ಎಂಎಂ ಮಳೆ ಕೇರಳದಲ್ಲಿ ಸುರಿದಿದೆ. ಇಡುಕ್ಕಿಯಲ್ಲಿ ಶೇ.67 ಅಧಿಕ ಮಳೆಯಾದರೆ ಕಾಸರಗೋಡಿನಲ್ಲಿ ಶೇ.18ರಷ್ಟು ಮಳೆ ಕಡಿಮೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ