ಆ್ಯಪ್ನಗರ

ಕಾಸರಗೋಡು ಗಡಿಪ್ರದೇಶದಲ್ಲಿ ನೆಲೆಗೊಂಡಿವೆ 41 ಮತಗಟ್ಟೆಗಳು

ಜಿಲ್ಲೆಯಲ್ಲಿ ಕರ್ನಾಟಕದ ಗಡಿಪ್ರದೇಶಗಳಲ್ಲಿ ನೆಲೆಗೊಂಡಿರುವುದು 41 ಮತಗಟ್ಟೆಳಿವೆ. ಈ ಬೂತ್‌ಗಳಲ್ಲಿ ಒಟ್ಟು 43,689 ಮತದಾರರಿದ್ದಾರೆ.

Vijaya Karnataka 3 Apr 2019, 2:50 pm
ಕಾಸರಗೋಡು: ಜಿಲ್ಲೆಯಲ್ಲಿ ಕರ್ನಾಟಕದ ಗಡಿಪ್ರದೇಶಗಳಲ್ಲಿ ನೆಲೆಗೊಂಡಿರುವುದು 41 ಮತಗಟ್ಟೆಳಿವೆ. ಈ ಬೂತ್‌ಗಳಲ್ಲಿ ಒಟ್ಟು 43,689 ಮತದಾರರಿದ್ದಾರೆ. ಅತ್ಯಧಿಕ ಮತದಾರರಿರುವ ಗಡಿ ಮತಗಟ್ಟೆ ಮಂಜೇಶ್ವರದ ಬಾಡೂರು ಗ್ರಾಮದ ಮಂಡಲ್‌ ಅನುದಾನಿತ ಕಿರಯ ಪ್ರಾಥಮಿಕ ಶಾಲೆಯ 136ನೇ ಬೂತ್‌ ಆಗಿದೆ. ಇಲ್ಲಿ 1317 ಮತದಾರರಿದ್ದಾರೆ. ಅತಿ ಕಡಿಮೆ ಮತದಾರರಿರುವ ಮತಗಟ್ಟೆ ದೇಲಂಪಾಡಿ ಗ್ರಾಮಕಚೇರಿಯ 64ನೇ ನಂಬ್ರ ಮತಗಟ್ಟೆ ಆಗಿದೆ. ಇಲ್ಲಿ 610 ಮತದಾರರಿದ್ದಾರೆ.
Vijaya Karnataka Web 41 boothes in boarder area
ಕಾಸರಗೋಡು ಗಡಿಪ್ರದೇಶದಲ್ಲಿ ನೆಲೆಗೊಂಡಿವೆ 41 ಮತಗಟ್ಟೆಗಳು


ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಗಡಿ ಹೊಂದಿರುವ ಮತಗಟ್ಟೆಗಳು ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿದೆ. ಇಲ್ಲಿ 19 ಗಡಿ ಬೂತ್‌ ಗಳಿವೆ. ಕಾಸರಗೋಡಿನಲ್ಲಿ 6 ಮತಗಟ್ಟೆಗಳು, ಉದುಮಾದಲ್ಲಿ 8, ಕಾಞಂಗಾಡಿನಲ್ಲಿ 4, ತ್ರಿಕರಿಪುರದಲ್ಲಿ 4 ಬೂತ್‌ ಗಳೂ ಗಡಿಯಲ್ಲಿವೆ. ವರ್ಕಾಡಿ, ದೇಲಂಪಾಡಿ ಗ್ರಾಮಪಂಚಾಯತ್‌ ಗಳಲ್ಲಿ ಅತ್ಯಧಿಕ ಗಡಿ ಬೂತ್‌ ಗಳಿವೆ. ತಲಾ 6 ಮತಗಟ್ಟೆಗಳು ಈ ಗ್ರಾಮಪಂಚಾಯತ್‌ ಗಳಿವೆ. ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 13 ಗಡಿ ಮತಗಟ್ಟೆಗಳು, ಆದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗಡಿ ಬೂತ್‌ ಗಳು, ಬದಿಯಡ್ಕ ಠಾಣೆಯಲ್ಲಿ 5, ಚಿತ್ತಾರಿಕ್ಕಲ್‌ ನಲ್ಲಿ 4, ಕುಂಬಳೆಯಲ್ಲಿ ಒಂದು, ಬೇಡಗಂ, ರಾಜಪುರಂ, ವೆಳ್ಳರಿಕುಂಡ್‌ ನಲ್ಲಿ ತಲಾ 2 ಗಡಿ ಮತಗಟ್ಟೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ