ಆ್ಯಪ್ನಗರ

96ರ ಹರೆಯದ ಅಜ್ಜಿಗೆ ಶೇ. 98 ಅಂಕ

ಕೇರಳ ರಾಜ್ಯ ಸಾಕ್ಷ ರತಾ ಮಿಷನ್‌ನ ಅಕ್ಷ ರ ಲಕ್ಷ ಪರೀಕ್ಷೆಯಲ್ಲಿ 96ರ ಹರೆಯದ ಹಿರಿಯ ಮಹಿಳೆ ಶೇ.98 ಅಂಕ ಪಡೆದುಕೊಂಡಿದ್ದಾರೆ.

Vijaya Karnataka 2 Nov 2018, 3:17 pm
ಕಾಸರಗೋಡು: ಕೇರಳ ರಾಜ್ಯ ಸಾಕ್ಷ ರತಾ ಮಿಷನ್‌ನ ಅಕ್ಷ ರ ಲಕ್ಷ ಪರೀಕ್ಷೆಯಲ್ಲಿ 96ರ ಹರೆಯದ ಹಿರಿಯ ಮಹಿಳೆ ಶೇ.98 ಅಂಕ ಪಡೆದುಕೊಂಡಿದ್ದಾರೆ.
Vijaya Karnataka Web 96 98
96ರ ಹರೆಯದ ಅಜ್ಜಿಗೆ ಶೇ. 98 ಅಂಕ


ಆಲಪ್ಪುಯ ಜಿಲ್ಲೆಯ ಹರಿಪ್ಪಾಡ್‌ ನಿವಾಸಿ ಕಲ್ಯಾಣಿಯಮ್ಮ ಅಕ್ಷ ರ ಲಕ್ಷ ಪರೀಕ್ಷೆಯಲ್ಲಿ 100ರಲ್ಲಿ 98ಅಂಕಗಳನ್ನು ಪಡೆದಿರುವುದಲ್ಲದೆ ಮೊದಲ ರಾರ‍ಯಂಕ್‌ ಪಡೆದುಕೊಂಡಿದ್ದಾರೆ. ಇದಕ್ಕಾಗಿಯೇ ಕೇರಳ ಸರಕಾರದಿಂದ ಗೌರವಿಸಲ್ಪಟ್ಟಿದ್ದಾರೆ.

ಅನಕ್ಷ ರಸ್ಥರಿಗೆ ಶಿಕ್ಷ ಣ ನೀಡುವ ಯೋಜನೆಯಲ್ಲಿ ಮೊದಲ ಹಂತದ ಪರೀಕ್ಷೆಯಲ್ಲಿ ಕೇರಳದಲ್ಲಿ 43,300 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇದರಲ್ಲಿ 42,933 ಮಂದಿ ತೇರ್ಗಡೆಯಾಗಿದ್ದಾರೆ. ಅವರಲ್ಲಿ 96ರ ಹರೆಯದ ಕಲ್ಯಾಣಿಯಮ್ಮ ಮೊದಲ ರಾರ‍ಯಂಕ್‌ ಪಡೆದುಕೊಂಡಿದ್ದಾರೆ. 100ರಲ್ಲಿ 100 ಅಂಕ ಲಭಿಸುವ ನಿರೀಕ್ಷೆಯನ್ನು ಕಲ್ಯಾಣಿಯಮ್ಮ ಇಟ್ಟುಕೊಂಡಿದ್ದರು. ಆದರೆ ಎರಡು ಅಂಕ ಕಡಿಮೆಯಾಗಿದೆ. ಅದಕ್ಕಾಗಿಯೇ ಕಳೆದ ಆರು ತಿಂಗಳಲ್ಲಿ ಕಠಿಣವಾಗಿ ಪರಿಶ್ರಮಿಸಿದ್ದಾರೆ. ಇವರ ಹೆಬ್ಬಯಕೆ ಬಹಳಷ್ಟು ಇದೆ. ಹತ್ತನೇ ತರಗತಿ ಸಮಾಂತರ ಕೋರ್ಸ್‌ ಪಾಸ್‌ ಮಾಡಬೇಕೆಂಬ ಇಚ್ಛೆಯನ್ನೂ ಮುಂದಿಟ್ಟಿದ್ದಾರೆ.

ಯುನೆಸ್ಕೋ ಪ್ರಕಾರ 1991ರಲ್ಲಿ ಕೇರಳ ಸಂಪೂರ್ಣ ಸಾಕ್ಷ ರತೆ ಹೊಂದಿದ ರಾಜ್ಯವಾಗಿತ್ತು. 2011ರ ಜನಗಣತಿ ಪ್ರಕಾರ ಮತ್ತೆ 18 ಲಕ್ಷ ಮಂದಿ ಅನರಕ್ಷ ರಸ್ಥರಿದ್ದರು. ಅದಾಗಲೇ ಕೇರಳ ಸರಕಾರ 2018 ಜನವರಿಯಲ್ಲಿ 26ರಂದು ಕೇರಳ ಸಾಕ್ಷ ರತಾ ಮಿಷನ್‌ನ ಅಕ್ಷ ರ ಲಕ್ಷ ಂ ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಿದೆ. 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಸಾಕ್ಷ ರತಾ ಪ್ರಮಾಣ ಶೇ. 94 ಮತ್ತು 2001ರಲ್ಲಿ ಅದು ಶೇ. 90.86 ಆಗಿತ್ತು.

ಅಕ್ಷ ರ ಲಕ್ಷ ಂ ಯೋಜನೆಯ ಪ್ರಕಾರ ಬುಡಕಟ್ಟು ಜನಾಂಗದವರು, ಮೀನು ಕಾರ್ಮಿಕ ವಲಯದಲ್ಲಿನ ಅನಕ್ಷ ರತೆಯನ್ನು ತೊಡೆದು ಹಾಕುವುದೇ ಮುಖ್ಯ ಉದ್ದೇಶವಾಗಿದೆ. ಕೇರಳದಲ್ಲಿ ಅನಕ್ಷ ರತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಮತ್ತು ಶೇ.100 ಸಾಕ್ಷ ರತೆಯನ್ನು ಸಾಧಿಸುವುದೇ ಗುರಿಯಾಗಿದೆ ಎಂದು ರಾಜ್ಯ ಸಾಕ್ಷ ರತಾ ಮಿಷನ್‌ ನಿರ್ದೇಶಕ ಪಿ.ಎಸ್‌. ಶ್ರೀಕಲಾ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ