ಆ್ಯಪ್ನಗರ

ಮನೆ ಬಾಗಿಲಿಗೆ ಬರಲಿದ್ದಾರೆ ಎಟಿಎಂ ಮ್ಯಾನ್‌

ಪೋಸ್ಟ್‌ಮ್ಯಾನ್‌ಗಳು ಕೇವಲ ಮನೆ ಬಾಗಿಲಿಗೆ ಪತ್ರ, ಪಿಂಚಣಿ ಹಣ ಇತ್ಯಾದಿಗಳನ್ನು ತಲುಪಿಸುವವರು ಮಾತ್ರವಾಗಿರುವುದಿಲ್ಲಬದಲಿಗೆ ಇನ್ನು ಸಂಚರಿಸುವ ಎಟಿಎಂ ಕೂಡ ಅವರಾಗಲಿದ್ದಾರೆ.

Vijaya Karnataka 16 Sep 2019, 5:00 am
ಕಾಸರಗೊಡು: ಪೋಸ್ಟ್‌ಮ್ಯಾನ್‌ಗಳು ಕೇವಲ ಮನೆ ಬಾಗಿಲಿಗೆ ಪತ್ರ, ಪಿಂಚಣಿ ಹಣ ಇತ್ಯಾದಿಗಳನ್ನು ತಲುಪಿಸುವವರು ಮಾತ್ರವಾಗಿರುವುದಿಲ್ಲಬದಲಿಗೆ ಇನ್ನು ಸಂಚರಿಸುವ ಎಟಿಎಂ ಕೂಡ ಅವರಾಗಲಿದ್ದಾರೆ.
Vijaya Karnataka Web atm man at doorstep
ಮನೆ ಬಾಗಿಲಿಗೆ ಬರಲಿದ್ದಾರೆ ಎಟಿಎಂ ಮ್ಯಾನ್‌


ಈ ಸಂಚರಿಸುವ ಎಟಿಎಂ ಮೂಲಕ ಯಾವುದೇ ಖಾತೆಯಿಂದ 10000 ರೂ.ವರೆಗೆ ಹಣ ಹಿಂಪಡೆಯಬಹುದಾಗಿದೆ. ಇನ್ನೊಬ್ಬರ ಖಾತೆಗೆ ಹಣ ರವಾನಿಸಬಹುದಾಗಿದೆ. ಖಾತೆಯಲ್ಲಿಎಷ್ಟು ಬ್ಯಾಲೆನ್ಸ್‌ ಇದೆ ಎಂಬುದನ್ನು ತಿಳಿಯಬಹುದಾಗಿದೆ. ಅಂಚೆ ಇಲಾಖೆಯ ಅಧೀನದಲ್ಲಿಸೆ. 1ರಂದು ಆಧಾರ್‌ ಎನೇಬಲ್ಡ್‌ ಪೇಮೆಂಟ್‌ ಸಿಸ್ಟಂ (ಎಇಪಿಎಸ್‌) ಜಾರಿಗೆ ಬಂದಿರುವುದರಿಂದ ಪೋಸ್ಟ್‌ಮ್ಯಾನ್‌ಗಳಿಗೆ ಈ ಹೊಸ ಕೆಲಸ ದೊರೆತಿದೆ.

ಅಂಚೆ ಇಲಾಖೆ ತಯಾರಿಸಿದ ಮೈಕ್ರೋ ಎಟಿಎಂ ಅಪ್ಲಿಕೇಶನ್‌, ಮೊಬೈಲ್‌ ಫೋನ್‌ ಹಾಗೂ ಬಯೋಮೆಟ್ರಿಕ್‌ ಉಪಕರಣವನ್ನು ಪೋಸ್ಟ್‌ಮ್ಯಾನ್‌ಗಳಿಗೆ ನೀಡಿ ಅಂಚೆ ಇಲಾಖೆ ಈ ಯೋಜನೆ ಜಾರಿಗೊಳಿಸುತ್ತಿದೆ.

ಯೂಸರ್‌ ನೇಮ್‌, ಪಾಸ್‌ವರ್ಡ್‌ ನೀಡದೆ ಸಂಪೂರ್ಣವಾಗಿ ಬಯೋಮೆಟ್ರಿಕ್‌ ಮಾಹಿತಿಗಳ ಆಧಾರದಲ್ಲಿಎಇಪಿಎಸ್‌ ಕಾರ್ಯಾಚರಿಸಲಿದೆ. ಕೇರಳ ಸರ್ಕಲ್‌ನ ಅಧೀನದ ಒಟ್ಟು 10600 ಪೋಸ್ಟ್‌ಮ್ಯಾನ್‌ಗಳಲ್ಲಿ7196 ಮಂದಿ ನೂತನ ಸೇವೆ ನೀಡಲು ಸಜ್ಜಾಗಿದ್ದಾರೆ. ಅಂಚೆ ಕಚೇರಿಗಳಿಗೆ ನೇರವಾಗಿ ತೆರಳಿದರೂ ಇದೇ ಸೇವೆಗಳ ಪ್ರಯೋಜನ ಪಡೆಯಬಹುದಾಗಿದೆ. ಕೇರಳ ರಾಜ್ಯದ 5064 ಅಂಚೆ ಕಚೇರಿಗಳ ಪೈಕಿ 4742 ಅಂಚೆ ಕಚೇರಿಗಳಲ್ಲಿನೂತನ ಸೌಕರ್ಯ ಕಲ್ಲಿಸಲಾಗಿದೆ. ಅಂಚೆ ಇಲಾಖೆಯ ಪೇಮೆಂಟ್‌ ಬ್ಯಾಂಕ್‌ ಆದ ಐಪಿಪಿಬಿಗೆ (ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌) ಸಂಬಂಧಿಸಿ ಎಇಪಿಎಸ್‌ ಕಾರ್ಯಾಚರಿಸುತ್ತಿದೆ. ಎಲ್ಲಬ್ಯಾಂಕ್‌ಗಳು ಗ್ರಾಹಕರಿಗೆ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ನೀಡಲಾಗುತ್ತಿದ್ದರೂ ಹಣ ಕರೆನ್ಸಿಯಾಗಿ ಹಿಂಪಡೆಯಬೇಕಿದ್ದರೆ ಎಟಿಎಂಗೆ ಅಥವಾ ಬ್ಯಾಂಕ್‌ಗೆ ನೇರವಾಗಿ ತಲುಪಬೇಕಾಗಿದೆ. ಆನ್‌ಲೈನ್‌ ವ್ಯವಹಾರಗಳಲ್ಲಿಪ್ರಾವೀಣ್ಯತೆ ಇಲ್ಲದವರು, ಬ್ಯಾಂಕ್‌ಗೆ ತೆರಳಲು ಸಾಧ್ಯವಾಗದವರಿಗೆ ಮನೆ ಬಾಗಿಲಿನಲ್ಲಿಸೇವೆ ಲಭ್ಯಗೊಳಿಸುವ ಯೋಜನೆ ವಿಶೇಷವಾಗಿದೆ ಎಂದು ಅಂಚೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳ ಸೇವೆಯನ್ನು ಒಂದು ಪ್ಲಾಟ್‌ಫಾಮ್‌ರ್‍ಗಳಲ್ಲಿಏಕೀಕರಿಸಲಾಗುವುದು ಎಂಬುದು ಎಇಪಿಎಸ್‌ನ ಮತ್ತೊಂದು ವಿಶೇಷತೆಯಾಗಿದೆ. ಪೋಸ್ಟಲ್‌ ಪೇಮೆಂಟ್‌ ಬ್ಯಾಂಕ್‌ ಖಾತೆ ಇಲ್ಲದವರಿಗೆ ಎಇಪಿಎಸ್‌ ಸೇವೆಗಳು ಲಭ್ಯವಿದೆ. ಒಂದು ಬ್ಯಾಂಕ್‌ ಖಾತೆಯಲ್ಲಿರುವ ಹಣ ಹಿಂಪಡೆದು ಅಂಚೆ ಪೇಮೆಂಟ್‌ ಬ್ಯಾಂಕ್‌ ಖಾತೆಗೆ ತಲುಪಿಸಲು, ಇನ್ನೊಂದು ಬ್ಯಾಂಕ್‌ ಖಾತೆಗೆ ನಿಕ್ಷೇಪಿಸಲಿರುವ ಸೌಕರ್ಯವಾಗಿದೆ ಫುಲ್‌ಮನಿ. ಈ ಸೌಕರ್ಯ ಹೊರತುಪಡಿಸಿ ಇತರ ಎಲ್ಲಸೇವೆ ಅಂಚೆ ಪೇಮೆಂಟ್‌ ಬ್ಯಾಂಕ್‌ ಖಾತೆ ಇಲ್ಲದವರಿಗೂ ಲಭ್ಯವಾಗಲಿದೆ. ಆಧಾರ್‌ ನಂಬರ್‌ ಕಡ್ಡಾಯವಾಗಿದೆ. ಪೋಸ್ಟ್‌ಮ್ಯಾನ್‌ನ ಕೈಯಲ್ಲಿರುವ ಮೊಬೈಲ್‌ ಅಪ್ಲಿಕೇಶನ್‌ನಲ್ಲಿಖಾತೆ ನಂಬರ್‌, ಮೊಬೈಲ್‌ ನಂಬರ್‌, ಆಧಾರ್‌ ನಂಬರ್‌, ಆಧಾರ್‌ ಕಾರ್ಡ್‌ನ ಕ್ಯೂಆರ್‌ ಕೋಡ್‌ಗಳನ್ನು ನೀಡಿ ಎಇಪಿಎಸ್‌ಗೆ ಪ್ರವೇಶಿಸಬಹುದಾಗಿದೆ. ಗ್ರಾಹಕರಿಗೆ ಸೇವಾ ದರ ಇಲ್ಲಎನ್ನುವುದು ಇನ್ನೊಂದು ವಿಶೇಷತೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ